ಮೈಸೂರು: ಇಲ್ಲಿನ ಕೇಂದ್ರ ಕಾರಾಗೃಹದ ವೀಕ್ಷಕ ಎಚ್.ಆರ್. ರಮೇಶ್ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಜೈಲಿನ ಒಳಗೆ ತೆಗೆದುಕೊಂಡು ಹೋಗುವ ವೇಳೆ ಅಲ್ಲಿನ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ರಮೇಶ್ ಅವರನ್ನು ಜೈಲಿನ ಆಸ್ಪತ್ರೆಯಲ್ಲಿದ್ದ ಅನಾರೋಗ್ಯ ಕೈದಿಗಳ ಬೆಂಗಾವಲಿಗೆ ನೇಮಿಸಲಾಗಿತ್ತು. ಆತ ಹಿರಿಯ ಅಧಿಕಾರಿಗಳ ಗಮನಕ್ಕೆ ಬಾರದಂತೆ ಜೈಲು ಆವರಣ ಪ್ರವೇಶಿಸಿ ಅಡುಗೆ ಮನೆಯೊಳಕ್ಕೆ ತೆರಳಿದ್ದ. ಅಲ್ಲಿನ ವಿಚಾರಣಾಧೀನ ಕೈದಿ ಸೈಯದ್ ಶಾಕೀಬ್ ಎಂಬಾತನ ಜೊತೆ ಮಾತನಾಡುವುದು ಹಾಗೂ ಅನುಮಾನಾಸ್ಪದವಾಗಿ ವರ್ತಿಸುವುದನ್ನು ಜೈಲಿನ ಅಧಿಕಾರಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಗಮನಿಸಿದ್ದರು.

ಆತ ಮೇ 22ರಂದು ಸಂಜೆ 5.45ರ ವೇಳೆಗೆ ಜೈಲು ಆವರಣ ಪ್ರವೇಶಿಸಿದಾಗ ಅಲ್ಲಿದ್ದ ಸಹಾಯಕ ಜೈಲರ್ ಎನ್. ಶಿವಕುಮಾರ್ ಪರಿಶೀಲನೆ ನಡೆಸಿದ್ದಾರೆ. ಆತನ ಒಳ ಉಡುಪು ಹಾಗೂ ಸಾಕ್ಸ್ನಲ್ಲಿ ಮೂರು ಪ್ಯಾಕೆಟ್ ತಂಬಾಕಿನ ಕತ್ತರಿಸಿದ ಎಲೆಗಳು, 2 ಪ್ಯಾಕೆಟ್ ತಂಬಾಕು ಪುಡಿ ಹಾಗೂ ನಾಲ್ಕು ಪ್ಯಾಕೆಟ್ ಬೀಡಿಗಳು ದೊರಕಿವೆ. ಅವುಗಳನ್ನು ಜಪ್ತಿ ಮಾಡಿದ ಜೈಲು ಅಧಿಕಾರಿಗಳು ಆತನ ವಿರುದ್ಧ ಹಿರಿಯ ಅಧಿಕಾರಿಗೆ ವರದಿ ನೀಡಿದ್ದಾರೆ. ಸಹಾಯಕ ಅಧೀಕ್ಷಕಿ ಎಂ.ದೀಪಾ ಅವರು ಮಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಂಜನಗೂಡಿನಲ್ಲಿ ವಿಚಾರಣಾಧೀನ ಕೈದಿ: ಕೈದಿಗಳ ಬಗ್ಗೆ ನಿಗಾ ವಹಿಸುವ ಕೆಲಸ ಮಾಡುತ್ತಿದ್ದ ರಮೇಶ್ ಇದೀಗ ತಾನೇ ಕೈದಿಯಾಗಿದ್ದಾನೆ. ಸರ್ಕಾರಿ ನೌಕರಿಯಲ್ಲಿ ಇದ್ದುಕೊಂಡು ಇಲಾಖೆಗೆ ದ್ರೋಹ ಬಗೆದ ಪರಿಣಾಮ ಆತನೂ ಇತರ ಕೈದಿಗಳ ಜೊತೆ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆತನನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ವಶಕ್ಕೆ ನೀಡಿದ್ದರು. ಆತನೀಗ ನಂಜನಗೂಡು ಜೈಲಿನಲ್ಲಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.