ಮೈಸೂರು: ‘ಹಲವು ದಶಕಗಳಿಂದ ಪಕ್ಷದ ಸಂಘಟನೆಗೆ ಶ್ರಮಿಸುತ್ತಿರುವ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್ಕುಮಾರ್ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಬೇಕು’ ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಶಾಸಕರು ಹಾಗೂ ಪ್ರಮುಖರು ಒಕ್ಕೊರಲ ಆಗ್ರಹ ಮಂಡಿಸಿದರು.

ಇಲ್ಲಿನ ಜೆ.ಪಿ. ಫಾರ್ಚೂನ್ ಹೋಟೆಲ್ನಲ್ಲಿ ಶನಿವಾರ ರಾತ್ರಿ ನಡೆದ ಪ್ರಮುಖರ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಎಂಟು ವಿಧಾನಸಭಾ ಕ್ಷೇತ್ರಗಳ 16 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, 25 ಮಂಚೂಣಿ ಘಟಕದ ಅಧ್ಯಕ್ಷರು ಹಾಗೂ ಡಿಸಿಸಿಯ ಎಲ್ಲಾ ಹಂತದ ಪದಾಧಿಕಾರಿಗಳು ಹಕ್ಕೊತ್ತಾಯಕ್ಕೆ ಸಹಿ ಮಾಡಿ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ಗೆ ರವಾನಿಸಿದರು.

ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ‘ಜಿಲ್ಲಾಧ್ಯಕ್ಷ ಸ್ಥಾನವನ್ನು ವಿಜಯ್ಕುಮಾರ್ ಸಮರ್ಥವಾಗಿ ನಿಭಾಯಿಸಿದ್ದು, ಇದು ಮುಂಬರುವ ಅಧ್ಯಕ್ಷರಿಗೆ ಮಾದರಿಯಾಗಿದೆ’ ಎಂದರು.

ಸೇವೆ ಮರೆಯಲಾಗದು: ‘ನನ್ನ ರಾಜಕೀಯ ಜೀವನದ ಆರಂಭದಲ್ಲಿ ಸಕಲ ಬೆಂಬಲ ಕೊಟ್ಟು ನೆಲೆ ನಿಲ್ಲಲು ಸಹಕರಿಸಿದ್ದಾರೆ. ಪಕ್ಷ ನೀಡಿದ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ, ಸಣ್ಣ ಲೋಪವನ್ನೂ ಎಸಗದೇ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಜಿಲ್ಲೆಯ ಎಲ್ಲಾ ಚುನಾವಣೆ ಹಾಗೂ ಉಪ ಚುನಾವಣೆಗಳಲ್ಲಿ ಅವರ ಶ್ರಮವನ್ನು ಪಕ್ಷ ಮತ್ತು ಜನಪ್ರತಿನಿಧಿಗಳಾಗಿರುವ ಯಾರೂ ಮರೆಯಲಾಗದು. ಆದ್ದರಿಂದ ಈ ಬಾರಿ ಅವರಿಗೆ ಪರಿಷತ್ತಿಗೆ ಅವಕಾಶ ಕಲ್ಪಿಸುವುದು ಸರ್ಕಾರದ ಹೊಣೆ, ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ’ ಎಂದು ಹೇಳಿದರು.

‘ಸಂಘಟನೆಗಾಗಿ ಅವಿರತವಾಗಿ ದುಡಿದವರನ್ನು ಪಕ್ಷ ಕೈ ಬಿಡುವುದಿಲ್ಲ. ಈ ಹಿಂದೆಯೇ ಅವರಿಗೆ ಸ್ಥಾನ ಸಿಗಬೇಕಿತ್ತು. ಈಗ 8 ಸ್ಥಾನ ಕಾಂಗ್ರೆಸ್ಗೆ ದೊರೆಯಲಿದ್ದು, ಅವರನ್ನು ಪರಿಗಣಿಸುವ ವಿಶ್ವಾಸವಿದೆ’ ಎಂದರು.

ಕಾಂಗ್ರೆಸ್ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಕೆ.ಹರೀಶ್ ಗೌಡ, ಅನಿಲ್ ಚಿಕ್ಕಮಾದು, ಡಿ.ರವಿಶಂಕರ್, ದರ್ಶನ್ ಧ್ರುವನಾರಾಯಣ, ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್, ಕಳಲೆ ಕೇಶವಮೂರ್ತಿ, ಸುನೀತಾ ವೀರಪ್ಪಗೌಡ, ಜಿ.ಎನ್. ನಂಜುಂಡಸ್ವಾಮಿ, ವಿಧಾನಪರಿಷತ್ ಮಾಜಿ ಸದಸ್ಯರಾದ ಮರಿತಿಬ್ಬೇಗೌಡ, ಎನ್.ಧರ್ಮಸೇನಾ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಮೈಲ್ಯಾಕ್ ಅಧ್ಯಕ್ಷ ಎಚ್.ಡಿ.ಗಣೇಶ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಸದಸ್ಯ ಎಚ್.ವಿ. ರಾಜೀವ್ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.

ನಾನು ರಾಜಕೀಯವಾಗಿ ಬೆಳೆಯಲು ವಿಜಯ್ಕುಮಾರ್ ಅವರ ಸಹಕಾರ ಬಹಳಷ್ಟಿದೆ, ಅದನ್ನು ನಾವು ಮರೆಯುವುದು ಮನುಷ್ಯತ್ವವಲ್ಲ
ಡಾ.ಯತೀಂದ್ರ ಸಿದ್ದರಾಮಯ್ಯ ವಿಧಾನಪರಿಷತ್ ಸದಸ್ಯ

ವಿಜಯ್ಕುಮಾರ್ ಯಾವ ಚುನಾವಣೆಯಲ್ಲೂ ಯಾವ ಅಭ್ಯರ್ಥಿಯಿಂದಲೂ ಯಾವ ಅಪೇಕ್ಷೆಯೂ ಇಲ್ಲದೇ ಅತ್ಯಂತ ಪ್ರಾಮಾಣಿಕವಾಗಿ ಪಕ್ಷ ಸೇವೆ ಮಾಡಿದ್ದಾರೆ
ಡಿ.ರವಿಶಂಕರ್, ಶಾಸಕ

ಸಿಗುವ ವಿಶ್ವಾಸವಿದೆ: ಸೇಠ್

ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಶಾಸಕ ತನ್ವೀರ್ ಸೇಠ್ ಮಾತನಾಡಿ, ‘ಸಂಘಟನೆ ವೇಳೆ ಅವರ ವಿರುದ್ಧ ಏಳು ಎಫ್ಐಆರ್ ದಾಖಲಾಗಿವೆ. ಆದರೂ ಸೇವೆ ಮಾಡುತ್ತಿದ್ದಾರೆಂದರೆ ಅವರ ನಿಷ್ಠೆ ಎಂಥದ್ದು
ಎಂಬುದು ತಿಳಿಯುತ್ತದೆ’ ಎಂದು ಶ್ಲಾಘಿಸಿದರು.

‘ಅಧಿಕಾರದಲ್ಲಿದ್ದು ಜನ ಸೇವೆ ಮಾಡುವುದು ಕಷ್ಟ. ಜಿಲ್ಲಾಧ್ಯಕ್ಷರಾಗಿ ಇಷ್ಟೊಂದು ಪ್ರೀತಿ ಮತ್ತು ಜನಮನ್ನಣೆ ಗಳಿಸುವುದು ಬಹಳ ಕಷ್ಟ. ಅವರ ಸೇವೆ ಪರಿಗಣಿಸಿ ಎಂಎಲ್ಸಿ ಅಥವಾ ರಾಜ್ಯಸಭಾ ಸ್ಥಾನವನ್ನು ಪಕ್ಷ ನೀಡುವ ವಿಶ್ವಾಸವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.