ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ನಡೆದ ‘ಜನರೊಂದಿಗೆ ಜನತಾದಳ’ ಕಾರ್ಯಕ್ರಮವು ಸ್ಥಳೀಯ ಶಾಸಕ ಜಿ.ಟಿ. ದೇವೇಗೌಡರ ಗೈರಿನ ನಡುವೆಯೂ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಯಿತು.

ಬೋಗಾದಿಯ ನಾಗಲಿಂಗೇಶ್ವರ ಮತ್ತು ಬೋಗೇಶ್ವರ ದೇವಸ್ಥಾನದ ಎದುರಿನ ಮೈದಾನದಲ್ಲಿ ಬೃಹತ್ ಆದ ವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬೆಳಿಗ್ಗೆಯಿಂದಲೇ ಜೆಡಿಎಸ್ ಕಾರ್ಯಕರ್ತರು ಹಾಗೂ ಎಚ್ಡಿಕೆ ಅಭಿಮಾನಿಗಳು ಲಗ್ಗೆ ಇಟ್ಟರು. ನಗರ ಮಾತ್ರವಲ್ಲದೆ ಹಳ್ಳಿ–ಹಳ್ಳಿಗಳಿಂದ ತಂಡೋಪತಂಡವಾಗಿ ಬಸ್ಗಳಲ್ಲಿ ಜನರು ಬಂದರು. ಮಧ್ಯಾಹ್ನ ನೆತ್ತಿ ಸುಡುವ ಬಿಸಿಲಲ್ಲೂ ಸಾವಿರಾರು ಮಂದಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಕಾರ್ಯಕ್ರಮದ ಉದ್ಘಾಟನೆಗೆಂದು ಬಂದ ನಿಖಿಲ್ ಕುಮಾರಸ್ವಾಮಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ವೇದಿಕೆ ಸ್ಥಳಕ್ಕೆ ಕರೆತರಲಾಯಿತು. ಅಲ್ಲಲ್ಲಿ ಹೂಮಳೆ ಮೂಲಕ ಕಾರ್ಯಕರ್ತರು ಸ್ವಾಗತ ಕೋರಿದರು. ಸಾ.ರಾ. ಮಹೇಶ್, ಜಿ.ಡಿ. ಹರೀಶ್ ಗೌಡ ಸೇರಿದಂತೆ ಸ್ಥಳೀಯ ಮುಖಂಡರು ಅವರಿಗೆ ಸಾಥ್ ನೀಡಿದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬಂದಾಗ ಹರ್ಷೋದ್ಘಾರ ಜೋರಾಯಿತು.

ಕುಮಾರಸ್ವಾಮಿ, ನಿಖಿಲ್ ಸೇರಿದಂತೆ ಜೆಡಿಎಸ್ ನಾಯಕರೆಲ್ಲ ಪೇಟ ಕಟ್ಟಿಸಿಕೊಂಡಿದ್ದು ವಿಶೇಷವಾಗಿತ್ತು. ನಂಜನಗೂಡಿನ ನೊಂದ ಯುವತಿಯೊಬ್ಬರಿಗೆ ನೆರವಿನ ಹಸ್ತ ಚಾಚಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ, ಅಂಗವಿ ಕಲರ ಜೊತೆ ಕುಮಾರಸ್ವಾಮಿ ಸಂವಾದ ನಡೆಸಿ ಅವರ ಕಷ್ಟ–ಸುಖ ಆಲಿಸಿದರು.

ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ‘ಜೆಡಿಎಸ್ನ ಪಂಚರತ್ನ ಯೋಜನೆಗೆ ಪೂರಕ ಫಲಿತಾಂಶ ದೊರ ಕದ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಉತ್ಸಾಹ ಕಡಿಮೆ ಆಗಿತ್ತು. ಇದನ್ನು ಗಮನಿಸಿ ‘ಜನರೊಂದಿಗೆ ಜನತಾದಳ’ ಕಾರ್ಯಕ್ರಮದಲ್ಲಿ 16ಸಾವಿರ ಕಿ.ಮೀ. ಸಂಚಾರ ಕೈಗೊಂಡಿದ್ದೇವೆ. ಹಳೇ ಮೈಸೂರು ಮಾತ್ರವಲ್ಲದೆ, ಉತ್ತರ ಕರ್ನಾಟಕ, ಕಲ್ಯಾಣ, ಕಿತ್ತೂರು ಕರ್ನಾಟಕ ಭಾಗದಲ್ಲಿಯೂ ಜೆಡಿಎಸ್ ಇದೆ ಎಂಬುದನ್ನು ಕಾರ್ಯಕರ್ತರು ಹುಮ್ಮಸ್ಸಿನಿಂದ ತೋರಿಸಿದ್ದಾರೆ’ಎಂದರು.

‘ಕಳೆದ ದಶಕಗಳಲ್ಲಿ 54 ಮಂದಿ ಮಂತ್ರಿ, ಸಂಸದರು ಜೆಡಿಎಸ್ ತ್ಯಜಿಸಿ ಹೋಗಿದ್ದಾರೆ. ಆದರೆ, ಪಕ್ಷ ನೆಲೆ ಕಳೆದುಕೊಂಡಿಲ್ಲ. ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲೂ ಎನ್ಡಿಎ ಅಭ್ಯರ್ಥಿಗಳು ಗೆಲ್ಲಬೇಕಿದೆ’ ಎಂದರು.

ಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ, ‘ಕೇವಲ ಐದು ದಿನದ ಅವಧಿಯಲ್ಲಿ ಈ ಕಾರ್ಯಕ್ರಮಕ್ಕೆ ಆಯೋಜಿಸಿದ್ದು, ಕೇವಲ ಕುಮಾರಸ್ವಾಮಿ ಹೆಸರು ಕೇಳಿಯೇ ಜನ ಅಪಾರ ಸಂಖ್ಯೆಯಲ್ಲಿ ಬಂದಿದ್ದಾರೆ’ ಎಂದರು.

‘ರಾಜ್ಯದ ಒಳಿತಿಗಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗಬೇಕು. ಆಗಲೇ ರಾಜ್ಯದ ಬಡವರು ಮತ್ತು ಮಹಿಳೆಯರು ಉಳಿಯಲು ಸಾಧ್ಯ. ಚಾಮುಂಡೇಶ್ವರಿ ಕ್ಷೇತ್ರದ ಜನತೆಯ ಆಶೀರ್ವಾದ ಕುಮಾರಣ್ಣ ಅವರ ಮೇಲಿದೆ’ ಎಂದರು.

ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್, ‘ಯಾರಿರಲಿ, ಬಿಡಲಿ ಕಾರ್ಯಕರ್ತರೇ ಜೆಡಿಎಸ್ಗೆ ಶ್ರೀರಕ್ಷೆ. ಎಚ್.ಡಿ.ದೇವೇಗೌಡ, ಕುಮಾರಣ್ಣ ನೇತೃತ್ವದಲ್ಲಿ ಪಕ್ಷ ಸಂಘಟನೆ ನಡೆದಿದ್ದು, ಇಲ್ಲಿ ಮತ್ತೆ ಜೆಡಿಎಸ್ ಗೆಲ್ಲಬೇಕು’ ಎಂದು ಆಶಿಸಿದರು.

ಜೆಡಿಎಸ್ ಕೋರ್ ಸಮಿತಿ ಅಧ್ಯಕ್ಷ ಕೃಷ್ಣ ರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಕೆ.ವಿವೇಕಾನಂದ, ಪಕ್ಷದ ಮುಖಂಡ ಎಚ್.ಎಂ. ರಮೇಶ್ ಗೌಡ, ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಎಂ. ಅಶ್ವಿನ್ಕುಮಾರ್, ನಗರ ಘಟಕದ ಅಧ್ಯಕ್ಷ ಎಸ್ಬಿಎಂ ಮಂಜು, ಮಾಜಿ ಶಾಸಕ ಮಹದೇವು, ನರಸಿಂಹಮೂರ್ತಿ, ಚಂದ್ರಿಕಾ ಸುರೇಶ್, ಶಿವಮೂರ್ತಿ, ಲಿಂಗಪ್ಪ, ಸ್ವಾಮಿ, ಕಡೂರು ಚೇತನ್, ಅಭಿಷೇಕ್, ಸುರೇಶ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-39-1665103016

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.