ಮೈಸೂರು: ಚಾಮುಂಡಿ ಬೆಟ್ಟದ ಬಹುಮಹಡಿ ಪಾರ್ಕಿಂಗ್ಗೆ ಹೊಂದಿ ಕೊಂಡಂತೆ ಕಟ್ಟಲಾಗಿರುವ 240ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ಖಾಲಿ ಬಿದ್ದಿವೆ. ವ್ಯಾಪಾರಿಗಳಿಗೆ ಹಂಚಿಕೆ ಆಗದೇ ಇರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಮಹಿಷಾಸುರ ಪ್ರತಿಮೆಯಿಂದ ದೇಗುಲದವರೆಗೂ ವ್ಯಾಪಾರಿಗಳು ತಾತ್ಕಾಲಿಕ ಮರದ ಪೆಟ್ಟಿಗೆ ಅಂಗಡಿಗಳಲ್ಲಿ ಈಗಲೂ ವಹಿವಾಟು ನಡೆಸಿದ್ದಾರೆ. ಮಕ್ಕಳ ಆಟಿಕೆಗಳು, ಅಲಂಕಾರಿಕ ವಸ್ತುಗಳು, ಗೊಂಬೆಗಳು, ಚಪ್ಪಲಿಗಳು ಸೇರಿದಂತೆ ಎಲ್ಲ ಅಗತ್ಯ ವಸ್ತುಗಳು ಇಲ್ಲಿ ಲಭ್ಯ. ನೂರಾರು ಕುಟುಂಬಗಳು ವ್ಯಾಪಾರವನ್ನೇ ನೆಚ್ಚಿಕೊಂಡಿವೆ.

ನಡೆಯುವುದೇ ಕಷ್ಟ: ಬೆಟ್ಟದ ತುದಿಯಲ್ಲಿ ದಶಕದ ಹಿಂದೆ ಕಾಣುತ್ತಿದ್ದ ಹಸಿರು ಮಾಯವಾಗಿದೆ. ಬಸ್ಸ್ಟ್ಯಾಂಡ್ ಪಕ್ಕದಲ್ಲಿ 8 ಎಕರೆ ಅರಣ್ಯ ನಾಶ ನಡೆಸಿ ₹ 80 ಕೋಟಿ ವೆಚ್ಚದಲ್ಲಿ ಬಹುಮಹಡಿ ಪಾರ್ಕಿಂಗ್ ಅನ್ನು ನಿರ್ಮಿಸಿ 2019ರ ಸೆ.18ರಂದು ಉದ್ಘಾಟನೆ ಮಾಡಲಾಯಿತು. 600 ವಾಹನ ನಿಲ್ಲಿಸುವ ತಂಗುದಾಣಕ್ಕೆ ಹೊಂದಿಕೊಂಡಂತೆ 130 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಯಿತು. ಅವುಗಳೊಂದಿಗೆ 4 ಶೌಚಾಲಯಗಳನ್ನು ಕಟ್ಟಲಾಗಿದ್ದು, ಅವು ಬಳಕೆಗೆ ಅಲಭ್ಯವಾಗಿವೆ.

‘ಪ್ರಸಾದ್’ ಯೋಜನೆಯಡಿ ನಿರ್ಮಾಣವಾದ ಕಟ್ಟಡಗಳು ಬಳಕೆಯಾಗುತ್ತಿಲ್ಲ. ಈಗ ಹೊಸ ಕಟ್ಟಡಗಳನ್ನು ಕಟ್ಟಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. 130 ಮಳಿಗೆಗಳ ಜೊತೆ ಮತ್ತೆ 100ಕ್ಕೂ ಹೆಚ್ಚು ಮಳಿಗೆಗಳನ್ನು ಕಟ್ಟಲಾಗಿದ್ದು, ಅವುಗಳ ನಿರ್ಮಾಣ ಅವೈಜ್ಞಾನಿಕವಾದ್ದರಿಂದ ಅವುಗಳತ್ತ ಹೋಗುವ ಮನಸ್ಸನ್ನು ವ್ಯಾಪಾರಿಗಳೂ ಮಾಡಲಿಲ್ಲ.

‘ದೇವಸ್ಥಾನದ ಸುತ್ತಲೂ ಇದ್ದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ, ವಾಣಿಜ್ಯ ಮಳಿಗೆಗಳನ್ನು ಹಂಚಿಕೆ ಮಾಡಿದರು. ವ್ಯಾಪಾರವಾಗಲಿಲ್ಲ. ಹೀಗಾಗಿ ಮೊದಲಿದ್ದ ಸ್ಥಳಕ್ಕೆ ಬಂದೆವು. ಮಳಿಗೆಗಳನ್ನು ಗೋದಾಮಾಗಿ ಮಾಡಿಕೊಂಡಿದ್ದೆವು. ನಂತರ ಅವುಗಳಿಗೆ ಬೀಗ ಹಾಕಿದರು. ಅಲ್ಲಿ ₹ 30 ಸಾವಿರ ಮೌಲ್ಯದ ವಸ್ತುಗಳಿದ್ದು, ಅವನ್ನು ತೆಗೆದುಕೊಳ್ಳುತ್ತೇವೆಂದರೂ ಅವಕಾಶ ಕೊಟ್ಟಿಲ್ಲ’ ಎಂದು ವ್ಯಾಪಾರಿ ನಂಜುಂಡ ‘ಪ್ರಜಾವಾಣಿ’ ಜೊತೆ ಅಳಲು ತೋಡಿಕೊಂಡರು.

470 ಮೀಟರ್ ಇಕ್ಕಟ್ಟು: ಒಂದೆಡೆ ಮಳಿಗೆಗಳು ಹಂಚಿಕೆ ಆಗದೇ ಉಳಿದಿವೆ. ವಾಹನ ನಿಲ್ದಾಣದಿಂದ ದೇಗುಲಕ್ಕೆ ತೆರಳಲು ಇರುವ 470 ಮೀಟರ್ ಉದ್ದಕ್ಕೂ ಶೆಡ್ಗಳಂಥ ಮಳಿಗೆಗಳನ್ನು ವ್ಯಾಪಾರಿಗಳು ಪುನರ್ಸ್ಥಾಪಿಸಿಕೊಂಡು ವಹಿವಾಟು ನಡೆಸುತ್ತಿದ್ದಾರೆ. ಅದರಿಂದ ಭಕ್ತರಿಗೂ ಕಷ್ಟವಾಗಿದೆ. ಮಳಿಗೆಗಳ ಕಟ್ಟಡಗಳು ಹೊಸತಾಗಿದ್ದರೂ ಜನರು ತಿರುಗಾಡಲು ಕನಿಷ್ಠ 10 ಅಡಿ ಜಾಗವು ಇಲ್ಲ. ಚರಂಡಿ ವ್ಯವಸ್ಥೆಯೂ ಹದಗೆಟ್ಟಿದೆ. ವಿದ್ಯುತ್ ದೀಪಗಳು ಉರಿಯುವುದಿಲ್ಲ.

‘ಆರಂಭದಲ್ಲಿ 112 ಮಳಿಗೆ ಹಂಚಿಕೆ ಮಾಡಿದರು. ವ್ಯಾಪಾರ ಆಗದ್ದರಿಂದ ವ್ಯಾಪಾರಿಗಳು ಹೋಗಿಲ್ಲ. ಮತ್ತೆ 120 ಮಳಿಗೆಗಳು ಹಾಗೇ ಖಾಲಿ ಇವೆ. ಪಾರ್ಕಿಂಗ್ ಕಟ್ಟಡವೂ ಗಟ್ಟಿಯಾಗಿಲ್ಲ. ಅಲ್ಲಲ್ಲಿ ಬಿರುಕು ಬಿಟ್ಟಿದೆ. ಈಗ ಬೆಟ್ಟದ ಕೆಳಗೆ ಪಾರ್ಕಿಂಗ್ ಕಟ್ಟಡ ಕಟ್ಟಲು ಯೋಜನೆ ಹಾಕಿಕೊಂಡಿದ್ದಾರೆ. ಕಟ್ಟಡಗಳನ್ನು ಕಟ್ಟಿ ಜನಸಾಮಾನ್ಯರ ಹಣ ಪೋಲು ಮಾಡುತ್ತಿದ್ದಾರೆ. ಕೂಡಲೇ ಹಂಚಿಕೆ ಮಾಡಲಿ’ ಎನ್ನುತ್ತಾರೆ ಗ್ರಾಮದ ಮುಖಂಡ ರಮೇಶ್ ಬಾಬು.

ಈ ಬಗ್ಗೆ ಪ್ರತಿಕ್ರಿಯೆಗೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಅವರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

‘ಆಡಳಿತ ವ್ಯವಸ್ಥೆಗೆ ವಿವೇಚನೆ ಇಲ್ಲ’

‘ಬಹುಮಹಡಿ ಪಾರ್ಕಿಂಗ್ ನಿರ್ಮಾಣವೇ ಅವೈಜ್ಞಾನಿಕ ಯೋಜನೆ. ಬೆಟ್ಟದ ಧಾರಣಾ ಸಾಮರ್ಥ್ಯವನ್ನು ಅಳೆಯದೇ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಮಳಿಗೆಗಳು ಖಾಲಿ ಬಿದ್ದಿವೆ. ಜನರಿಗೂ ಉಪಯೋಗವಿಲ್ಲ’ ಎಂದು ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಇರುವ ಕಟ್ಟಡಗಳೇ ಉಪಯೋಗಕ್ಕೆ ಬರುತ್ತಿಲ್ಲ. ಮಹಿಷಾಸುರ ಪ್ರತಿಮೆಯ ಸಮೀಪ ಇದೀಗ ಪ್ರಸಾದ್ ಯೋಜನೆಯಡಿ ಮತ್ತೊಂದು ಪ್ಲಾಜಾ ಮಾಡಲು ಮುಂದಾಗಿದ್ದಾರೆ. ಯಾವುದೇ ಯೋಜನೆಯು ಸರಿಯಾಗಿ ಜನರಿಗೆ ಬಳಕೆ ಆಗಬೇಕು. ಬೆಟ್ಟದಲ್ಲಿ ಯಾವುದೂ ಆಗುತ್ತಿಲ್ಲ’ ಎಂದರು.

‘ಪಾದಚಾರಿ ಮಾರ್ಗವನ್ನು ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದು, ಮೈಸೂರಿನಲ್ಲಿ ಸಿಗುವ ಎಲ್ಲ ವಸ್ತುಗಳು ಬೆಟ್ಟದಲ್ಲಿ ಸಿಗುತ್ತವೆ. ಶ್ರದ್ಧಾಕೇಂದ್ರವನ್ನು ವ್ಯಾಪಾರ ಕೇಂದ್ರವಾಗಿ ಮಾಡುವುದು ಎಷ್ಟು ಸರಿ. ಜಿಲ್ಲಾಡಳಿತಕ್ಕೆ ವಿವೇಚನೆಯೇ ಇಲ್ಲದಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.