ಮೈಸೂರು: ಚಾಮುಂಡಿಬೆಟ್ಟದ ಅಡಿಯಿಂದ ಮುಡಿವರೆಗೂ ಪ್ಲಾಸ್ಟಿಕ್ ತ್ಯಾಜ್ಯ ಆವರಿಸಿದೆ. ಬೆಟ್ಟವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳ ಇಕ್ಕೆಲದಲ್ಲಿ ನಿತ್ಯವೂ ಕಸದ ರಾಶಿ ಬೀಳುತ್ತಿದೆ. ಹಸಿರು ವಲಯ ಕಸದಿಂದ ತುಂಬುತ್ತಿದ್ದರೂ ವಿಲೇವಾರಿಗೆ ಪಾಲಿಕೆ, ಸ್ಥಳೀಯ ಆಡಳಿತಗಳು ಕ್ರಮ ವಹಿಸಿಲ್ಲ.

ತಾವರೆಕಟ್ಟೆಯಿಂದ ನಂದಿಗೆ ಸಂಪರ್ಕಿಸುವ ರಸ್ತೆಯ ದೇವಿ ವನ, ಚಾಮುಂಡಿ ಪರಿಸರ ಉದ್ಯಾನ ಮುಂದೆಯೇ ತ್ಯಾಜ್ಯ ಬಿದ್ದಿದೆ. ಮಹಾರಾಣ ಪ್ರತಾಪ ರಸ್ತೆ ಬದಿಯುದ್ದಕ್ಕೂ ಪ್ಲಾಸ್ಟಿಕ್ ತ್ಯಾಜ್ಯದ ರಾಶಿ ಸಾರ್ವಜನಿಕರನ್ನು ಸ್ವಾಗತಿಸುತ್ತಿದೆ. ಊಟಿಗೆ ತೆರಳುವ ರಸ್ತೆ, ಎಪಿಎಂಸಿ, ಗೌರಿಶಂಕರ ನಗರ, ಬಂಡಿಪಾಳ್ಯ, ಹೊಸಹುಂಡಿ, ಉತ್ತನಹಳ್ಳಿ, ಲಲಿತಾದ್ರಿ ಪುರ, ಕೆಎಂಸಿ ಬಡಾವಣೆ ಸೇರಿದಂತೆ ಬೆಟ್ಟಕ್ಕೆ ಹೊಂದಿಕೊಂಡ ಯಾವುದೇ ಬಡಾವಣೆಯು ಕಸ ಮುಕ್ತವಾಗಿಲ್ಲ.

ನಗರದಲ್ಲಿ ಸಂಗ್ರಹವಾಗುವ ಕಸವನ್ನು ರಾತ್ರೋರಾತ್ರಿ ಇಲ್ಲಿ ಸುರಿಯಲಾಗುತ್ತದೆ. ಹಸಿ ಕಸ, ಒಣ ಕಸ ಎಂಬ ವಿಂಗಡಣೆಯಿಲ್ಲದೇ ಕಸಗಳು ಸಂಗ್ರಹವಾಗುತ್ತಿದ್ದು ಸೂಕ್ತ ವಿಲೇವಾರಿಯೂ ಆಗದೇ ಮಳೆ ನೀರು ಕಾಲುವೆ, ಕೆರೆಗಳ ರಾಜ ಕಾಲುವೆಗಳನ್ನು ತುಂಬಿಕೊಂಡಿವೆ. ಬೇಸಿಗೆಯಲ್ಲಿ ಸುರಿಯುತ್ತಿರುವ ಮಳೆಯೂ ತ್ಯಾಜ್ಯದ ರಾಶಿಯನ್ನು ಮತ್ತಷ್ಟು ಪೇರಿಸುತ್ತಿದೆ. ಕೆಲವೆಡೆ ರಸ್ತೆ ಮೇಲೂ ಪ್ಲಾಸ್ಟಿಕ್ ತ್ಯಾಜ್ಯ ಕಂಡುಬರುತ್ತಿದೆ.

ತಪ್ಪದ ಏಕ ಬಳಕೆ ಪ್ಲಾಸ್ಟಿಕ್: ಬೆಟ್ಟದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಿ ಅರಣ್ಯ ಇಲಾಖೆಯು ಆಗಾಗ ದಂಡ ವಿಧಿಸಿ ಎಚ್ಚರಿಕೆ ನೀಡುತ್ತಿದ್ದರೂ ಪ್ಲಾಸ್ಟಿಕ್ ಬಳಕೆ ತಪ್ಪುತ್ತಿಲ್ಲ. ಪ್ರಮುಖವಾಗಿ ಬೆಟ್ಟಕ್ಕೆ ಹತ್ತುವ ಮೆಟ್ಟಿಲುಗಳ ಅಕ್ಕಪಕ್ಕದಲ್ಲೇ ಪ್ಲಾಸ್ಟಿಕ್ ಬಾಟಲ್ಗಳು, ಕುಂಕುಮ, ಅರಸಿನ ತಂದ ಕವರ್ಗಳು, ಕುರ್ಕುರೆ, ಲೇಸ್, ಬಿಸ್ಕತ್ ಮುಂತಾದ ತಿಂಡಿಯ ಕವರ್ಗಳು ಕಾಣ ಸಿಗುತ್ತವೆ. ಮೆಟ್ಟಿಲುಗಳು ಕೊನೆಯಾಗುವ ಬೆಟ್ಟದ ಮೇಲ್ಭಾಗದಲ್ಲಿ, ಎಡಭಾಗದ ಬೇಲಿ ಆಚೆ ಕಸಗಳ ರಾಶಿಯೇ ಇದ್ದು, ಅರಣ್ಯ ಪ್ರದೇಶದ ಇಳಿಜಾರಿನಲ್ಲಿ ವ್ಯಾಪಿಸುತ್ತಿದೆ.

‘ಮುಳ್ಳುಕಂಟಿಗಳಲ್ಲಿ ಸಿಲುಕಿ ಕೊಂಡಿರುವ ಬಾಟಲಿಗಳು, ಪ್ಲಾಸ್ಟಿಕ್ ಕವರ್ಗಳನ್ನು ತೆಗೆಯುವುದು ದುಸ್ಸಾಹಸವೇ ಆಗುತ್ತದೆ. ಬೆಟ್ಟ ಶುದ್ಧ ಮಾಡಲು ಬಂದ ಸೇವಾ ಸಂಸ್ಥೆಗಳು, ಸಂಘಟನೆಗಳು ಪ್ರತಿಬಾರಿಯೂ ಮೂಟೆಗಟ್ಟಲೆ ತ್ಯಾಜ್ಯ ಸಂಗ್ರಹಿಸಿ ಹೈರಾಣಾಗಿವೆ. ಅವರ ಶ್ರಮದ ಬೆವರಿಗೆ ಬೆಲೆಯೇ ಇಲ್ಲವಾಗಿದೆ’ ಎನ್ನುತ್ತಾರೆ ಬೆಟ್ಟ ಹತ್ತಲು ಬಂದಿದ್ದ ಕುವೆಂಪುನಗರ ನಿವಾಸಿ ಪುರುಷೋತ್ತಮ್.

ನಿಯಂತ್ರಣವಿಲ್ಲ: ಮೆಟ್ಟಿಲುಗಳಿಗೆ ಕುಂಕುಮ, ಅರಸಿನ ಹಚ್ಚುವುದು ಮುಂದುವರೆದಿದ್ದು, ಪ್ರತಿ ಮೆಟ್ಟಿಲುಗಳೂ ನೈಸರ್ಗಿಕವಲ್ಲದ ಈ ಬಣ್ಣಗಳಿಂದ ಆವರಿಸಿಕೊಂಡಿವೆ. ಬರಿಗಾಲಿನಲ್ಲಿ ಬೆಟ್ಟ ಹತ್ತುವ ಪ್ರವಾಸಿಗರಿಗೂ ಇದು ಕಿರಿಕಿರಿಯನ್ನು ಮಾಡುತ್ತಿದೆ. ಮಳೆ ಬಂದರೆ ನೀರಿನೊಂದಿಗೆ ಬೆರೆಯುವ ಬಣ್ಣವೂ ಜಲಮೂಲಕ್ಕೂ ಕಂಟಕವಾಗುತ್ತಿದೆ. ಬೆಟ್ಟದ ಪಾದದಲ್ಲಿ ಅರಸಿನ ಕುಂಕುಮ ಮಾರುವವರೂ ಏಕ ಬಳಕೆ ಪ್ಲಾಸ್ಟಿಕ್ ಬಳಸುತ್ತಿದ್ದು, ನಿಯಂತ್ರಣ ಇಲ್ಲವಾಗಿದೆ.

‘ಬೆಟ್ಟ ಪ್ರದೇಶದಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗದ ಸ್ಥಳಗಳಲ್ಲಿ ನಿತ್ಯವೂ ಸಣ್ಣ ಪ್ರಮಾಣದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ತ್ಯಾಜ್ಯವೂ ಸಂಗ್ರಹವಾಗುತ್ತಿದೆ. ಇದು ಹಂತ ಹಂತವಾಗಿ ಕಾಡು ಹಾಗೂ ಅಲ್ಲಿನ ಜಲಮೂಲದಲ್ಲಿ ಬೆರೆಯುತ್ತದೆ. ನಿವಾರಣೆ ಕಷ್ಟವಾಗುತ್ತದೆ’ ಎಂದು ಪರಿಸರವಾದಿಗಳು ಆತಂಕ
ವ್ಯಕ್ತಪಡಿಸಿದ್ದಾರೆ.

‘ವಶಕ್ಕೆ ಪಡೆದು ಪ್ರವೇಶ ನೀಡಲಿ’

‘ಬೆಟ್ವವು ಪ್ಲಾಸ್ಟಿಕ್ ಮುಕ್ತವಾಗುವುದು ಅತ್ಯಗತ್ಯ. ಪ್ಲಾಸ್ಟಿಕ್ ಅನ್ನು ತಡೆಯಲು ಚಾಮುಂಡಿ ಬೆಟ್ಟಕ್ಕೆ ಹೋಗುವ ಎಲ್ಲ ದಾರಿಗಳಲ್ಲಿ ಗೇಟ್ಗಳನ್ನು ನಿರ್ಮಿಸಿ ಸಿಬ್ಬಂದಿಯನ್ನು ನೇಮಿಸಿ ಪ್ರವಾಸಿಗರು ಭಕ್ತರ ಬಳಿಯಿರುವ ಪ್ಲಾಸ್ಟಿಕ್ ವಶ ಪಡಿಸಿಕೊಂಡು ತೆರಳಲು ಬಿಡಬೇಕು’ ಎಂದು ‘ಪರಿಸಕ್ಕಾಗಿ ನಾವು’ ಸಂಘಟನೆಯ ಪ್ರಧಾನಕಾರ್ಯದರ್ಶಿ ಪರಶುರಾಮೇಗೌಡ ಹೇಳಿದರು.

‘ಆಂಧ್ರಪ್ರದೇಶದ ತಿರುಪತಿ ತಮಿಳುನಾಡಿನ ತಿರುವಣ್ಣಾಮಲೈ ಕೇರಳದ ಪ್ರವಾಸಿಸ್ಥಳಗಳಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಿ ಪ್ಲಾಸ್ಟಿಕ್ ಮುಕ್ತಗೊಳಿಸಲಾಗಿದೆ. ಇಲ್ಲೇಕೆ ಅದು ಸಾಧ್ಯವಿಲ್ಲ? ಇಚ್ಛಾಶಕ್ತಿಯ ಕೊರತೆ ಜಿಲ್ಲಾಡಳಿತ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರಕ್ಕಿದೆ’ ಎಂದು ದೂರಿದರು.

‘ದೇಶದ ಪುಣ್ಯಕ್ಷೇತ್ರ ಬೆಟ್ಟಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡಲಾಗಿದೆ. ಅಲ್ಲಿನ ಉತ್ತಮ ಮಾದರಿಯನ್ನು ಇಲ್ಲಿಯೂ ಅಳವಡಿಸಲಿ. ದಂಡ ಹಾಕುವ ಸಿಬ್ಬಂದಿ ನೇಮಿಸಿ ಗಸ್ತು ತಿರುಗಿಸಲಿ. ದಂಡ ವಿಧಿಸಿ ಅದನ್ನು ಸುದ್ದಿ ಮಾಡಿ ಅರಿವು ಮೂಡಿಸಲಿ. ಕುಡಿಯುವ ನೀರಿಗಾಗಿ ಅಲ್ಲಲ್ಲಿ ಅಗತ್ಯ ಸಾಮರ್ಥ್ಯದ ಟ್ಯಾಂಕ್ಗಳ ಅಳವಡಿಸಿ ಸ್ಟೀಲ್ ಲೋಟ ಕೊಡಲಿ. ಅಂಗಡಿಗಳಲ್ಲೂ ಪ್ಲಾಸ್ಟಿಕ್ ಮಾರಾಟ ಬಳಕೆ ನಿಷೇಧಿಸಲಿ. ಅಂಥ ವಿವೇಕವನ್ನು ಚಾಮುಂಡೇಶ್ವರಿ ಮೈಸೂರಿಗರಿಗೆ ಕರುಣಿಸಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.