ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಬೀಳುವ ಮಳೆ ನೀರು ಅಲ್ಲಿಯೇ ಇಂಗಲು ಹಾಗೂ ತಪ್ಪಲು ತಲುಪಲು ಮಾಡಿದ್ದ ವೈಜ್ಞಾನಿಕ ವ್ಯವಸ್ಥೆಯನ್ನೇ ಕಡೆಗಣಿಸಲಾಗಿದೆ. ರಸ್ತೆ ಅಂಚಿನಲ್ಲಿ ನಿರ್ಮಿಸಲಾಗಿರುವ ಮಳೆ ನೀರು ಚರಂಡಿಗಳು ಹಾಗೂ ತೂಬುಗಳು ಕಟ್ಟಿಕೊಂಡಿದ್ದು, ಬೆಟ್ಟವನ್ನು ಶಿಥಿಲಗೊಳಿಸುತ್ತಿವೆ.

ರಸ್ತೆ ಇಕ್ಕೆಲದಲ್ಲಿ ಇರುವ ಮಳೆ ನೀರು ಕಾಲುವೆಗಳ ನಿರ್ವಹಣೆ ಕೊರತೆಯಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಕಾಲುವೆಯಲ್ಲಿ ಮಣ್ಣು, ಪ್ಲಾಸ್ಟಿಕ್ ತ್ಯಾಜ್ಯ, ಕಲ್ಲು, ಗಿಡಗಳು ತುಂಬಿವೆ. ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸುರಕ್ಷತೆಗೂ ಆತಂಕ ಎದುರಾಗಿದೆ.

ರಸ್ತೆ ಅಡಿಯಲ್ಲಿ ನಿರ್ಮಿಸಿರುವ ಮೋರಿಗಳಲ್ಲಿ ಕಸ ಸಿಲುಕಿದರೂ ತೆರವುಗೊಳಿಸುವ ಕೆಲಸವಾಗುತ್ತಿಲ್ಲ. ಅಲ್ಲಿಂದ ಒತ್ತಡದಲ್ಲಿ ಹೊರ ಬಿದ್ದ ನೀರು ಬೆಟ್ಟ ಹಾಗೂ ರಸ್ತೆಯ ರಕ್ಷಣೆಗೆ ನಿರ್ಮಿಸಿದ್ದ ಹಳೇ ತಡೆಗೋಡೆಗಳನ್ನು ಶಿಥಿಲಗೊಳಿಸುತ್ತಿದೆ. ಮೋರಿಯಲ್ಲಿ ಹೊರಹೋಗದೆ ಅಲ್ಲಿಯೇ ನಿಂತು ಬೆಟ್ಟದ ಮಣ್ಣನ್ನು ಕರಗಿಸುತ್ತಿದೆ.

2019ರಿಂದಲೂ ಮಳೆಗಾಲದಲ್ಲಿ ಬೆಟ್ಟದ ಅಲ್ಲಲ್ಲಿ ಭೂ ಕುಸಿತ ಉಂಟಾಗುತ್ತಿದೆ. 2021ರ ಅ.21ರಂದು ಭಾರಿ ಮಳೆಯಿಂದ ನಂದಿ ವಿಗ್ರಹ ಬಳಿ ಭೂ ಕುಸಿತ, ಬಳಿಕ ನ.5ರಂದು 50 ಮೀಟರ್ನಷ್ಟು ರಸ್ತೆ ಬಿರುಕು ಬಿಟ್ಟು ರಸ್ತೆಯ ಅರ್ಧ ಭಾಗವೇ ಕುಸಿದಿದ್ದರೂ ಭವಿಷ್ಯದಲ್ಲಿ ಇದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸ್ಥಳೀಯ ಆಡಳಿತ, ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ, ಅರಣ್ಯ ಇಲಾಖೆ ಸೇರಿದಂತೆ ಯಾವುದೇ ಇಲಾಖೆ ಮುಂದಾಗಿಲ್ಲ.

ಕಾಮಗಾರಿ ವಿಳಂಬ:

2021ರಲ್ಲಿ ಕುಸಿದ ನಂದಿ ತಲುಪುವ ರಸ್ತೆಯ ನಿರ್ಮಾಣ ಕಾಮಗಾರಿ ಇನ್ನೂ ನಡೆಯುತ್ತಿದೆ. ನಿಧಾನಗತಿಯ ಕೆಲಸ ನಡೆಯುತ್ತಿದ್ದು, ಈ ಮಳೆಗಾಲದೊಳಗೂ ಪೂರ್ಣಗೊಳ್ಳುವ ಲಕ್ಷಣ ಕಂಡುಬರುತ್ತಿಲ್ಲ. ಹಳೇ ರಸ್ತೆಯ ಸಮನಾಗಿ ನಿರ್ಮಿಸಲು ಇನ್ನೂ 5ರಿಂದ 6 ಅಡಿ ಎತ್ತರಿಸಬೇಕಿದೆ. ರಸ್ತೆ ಬದಿಯಲ್ಲಿ ನೀರಿನ ಕಾಲುವೆಗಳ ವ್ಯವಸ್ಥೆಯೂ ಆಗಿಲ್ಲ.

ತಪ್ಪದ ರಸ್ತೆ ಕುಸಿತ ಭೀತಿ:

‘ನಂದಿ ಮೂರ್ತಿಯನ್ನು ಸಂಪರ್ಕಿಸುವ ದೇವಿವನ ಬಳಿಯಿಂದ ತೆರಳುವ ಮತ್ತೊಂದು ರಸ್ತೆಯೂ ಕುಸಿಯುವ ಆತಂಕವನ್ನು ಎದುರಿಸುತ್ತಿದೆ. ಇಲ್ಲಿನ ಕಾಲುವೆಗಳು ಹೂಳು, ಕಸ, ಕಲ್ಲುಗಳಿಂದ ತುಂಬಿವೆ. ಮೋರಿಗಳಲ್ಲಿ ನೀರು ನಿಂತು ಕುಸಿದಿವೆ. ಇವುಗಳನ್ನು ಸೂಕ್ತವಾಗಿ ನಿರ್ವಹಿಸದೇ ಹೋದರೇ 2019ರ ಕುಸಿತ ಮರುಕಳಿಸಬಹುದು ಎಂದು ಪರಿಸರಾಸಕ್ತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

‘ಭಿನ್ನ ಮಾದರಿ ಅನುಸರಿಸಲಿ’

‘ಚಾಮುಂಡಿ ಬೆಟ್ಟದಲ್ಲಿ ನೀರಿನ ಸಹಜ ಹರಿವಿಗೆ ರಸ್ತೆಗಳೇ ಅಡ್ಡಿ. ಆದರೂ ರಸ್ತೆ ಅಗತ್ಯವಿದೆ ಎಂದಾಗ ನೀರಿನ ಹರಿವಿಗೆ ನಗರದಲ್ಲಿ ಮಾಡುವಂಥ ವ್ಯವಸ್ಥೆಗಿಂತ ಭಿನ್ನವಾದ ಮಾದರಿ ಅನುಸರಿಸಬೇಕು. ಇಲ್ಲದಿದ್ದರೆ ಒಂದೆಡೆಯೇ ನೀರು ಹರಿವಿನ ಒತ್ತಡ ಸೃಷ್ಟಿಯಾಗುತ್ತದೆ. ಬೆಟ್ಟವನ್ನೂ ಹಾಳು ಮಾಡುತ್ತದೆ’ ಎಂದು ಮೈಸೂರು ಗ್ರಾಹಕರ ಪರಿಷತ್ ಸದಸ್ಯ ಎಸ್.ಶೈಲಜೇಶ್ ಹೇಳಿದರು.

‘ರಸ್ತೆಯು ಹೆಚ್ಚು ಮೋರಿಗಳನ್ನು ಮತ್ತು ನೀರನ್ನು ಅಲ್ಲಲ್ಲಿಯೇ ತಡೆದು ಹರಿಸುವ ಕಾಲುವೆಗಳನ್ನು ಹೊಂದುವುದು ಅಗತ್ಯ. ಪರಿಸರ ಸ್ನೇಹಿ ನಿರ್ಮಾಣ ವಿಧಾನವನ್ನು ಅನುಸರಿಸುವುದು. ಕಾಲುವೆಗಳ ನಿರಂತರ ನಿರ್ವಹಣೆ. ವಾಹನಗಳ ಓಡಾಟ ಒತ್ತಡ ಹೆಚ್ಚಳ ಆಗದಂತೆ ನೋಡಿಕೊಳ್ಳಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.