ಮೈಸೂರು: ಚಾಮುಂಡಿ ಬೆಟ್ಟದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದ ಆವರಣವೇ ತ್ಯಾಜ್ಯದಲ್ಲಿ ಮುಳುಗಿ ಹೋಗಿದೆ.

ಇಲ್ಲಿನ ಬಹುಮಹಡಿ ವಾಹನ ನಿಲ್ದಾಣದ ಹಿಂಬದಿ ನಿರ್ಮಿಸಿರುವ ತ್ಯಾಜ್ಯ ಸಂಸ್ಕರಣಾ ಘಟಕದ ಎದುರು ಪ್ಲಾಸ್ಟಿಕ್ ತ್ಯಾಜ್ಯದ ರಾಶಿಯು ಇಳಿಜಾರಿನಲ್ಲಿ ಹರಡಿ, ಅರಣ್ಯದತ್ತ ಸಾಗುತ್ತಿದೆ. ಪಕ್ಕದಲ್ಲಿಯೇ ಭಕ್ತರು ಬಿಟ್ಟುಹೋದ ಚಪ್ಪಲಿ, ಶೂಗಳ ದೊಡ್ಡ ರಾಶಿಯೇ ಬಿದ್ದಿದೆ.

ಏಕ ಬಳಕೆ ಪ್ಲಾಸ್ಟಿಕ್, ಪೇಪರ್, ರಟ್ಟಿನ ಡಬ್ಬಗಳು, ಊಟದ ತಟ್ಟೆಗಳು, ಪ್ಲಾಸ್ಟಿಕ್ ಲೋಟಗಳು, ಪೂಜಾ ಸಾಮಗ್ರಿಯ ಕವರ್ಗಳು... ಹೀಗೆ ಹಲವು ಬಗೆಯ ತ್ಯಾಜ್ಯಗಳು ಸೂಕ್ತ ಸಮಯದಲ್ಲಿ ವಿಲೇವಾರಿಯಾಗದೇ ಸಂಪೂರ್ಣ ಸ್ಥಳವನ್ನೇ ಆವರಿಸಿದೆ. ಇಡೀ ಪರಿಸರವನ್ನೇ ಕಲುಷಿತಗೊಳಿಸಿದೆ. ಮಳೆ, ಗಾಳಿ ಬಂದಾಗ ದೂರದ ಸ್ಥಳಗಳಿಗೂ ವ್ಯಾಪಿಸುತ್ತಿದೆ.

ದೇವಸ್ಥಾನ ಆವರಣದಲ್ಲಿ ಸಂಗ್ರಹವಾಗುವ ಕಸಗಳನ್ನು ಮಾತ್ರ ಇಲ್ಲಿ ಸಂಸ್ಕರಣೆ ಮಾಡಲಾಗುತ್ತದೆ. ಹಂತ ಹಂತವಾಗಿ ವಿಲೇವಾರಿಯಾಗಲಿದೆ ಎನ್ನುವ ಸಿಬ್ಬಂದಿ ಮಾತುಗಳು ವಾಸ್ತವ ಸ್ಥಿತಿಗೆ ದೂರವಾಗಿದೆ. ಎಷ್ಟೋ ದಿನಗಳಿಂದ ಸಂಗ್ರಹವಾಗಿರುವ, ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿರುವ ತ್ಯಾಜ್ಯವು ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಅಥವಾ ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಧೋರಣೆಯನ್ನು ತೋರಿಸುತ್ತಿದೆ.

ಚಪ್ಪಲಿ ಹೊರೆ: ದೇವಸ್ಥಾನಕ್ಕೆ ಬರುವ ಭಕ್ತರು ಎಲ್ಲೆಂದರಲ್ಲಿ ಚಪ್ಪಲಿಗಳನ್ನು ಬಿಡುವುದು. ಬೇಕೆಂದೇ ಅವುಗಳನ್ನು ತ್ಯಜಿಸಿ ಪಾಪ ಕಳೆಯಿತು ಎಂದು ಹೊರಡುವುದು ಸಂಸ್ಕರಣಾ ಘಟಕದಲ್ಲಿ ಚಪ್ಪಲಿಗಳ ರಾಶಿ ಬೆಳೆಯಲು ಕಾರಣವಾಗಿದೆ. ಎಲ್ಲವನ್ನು ಇಲ್ಲಿ ತಂದು ಹಾಕಿ ತುಂಬ ದಿನಗಳಾಗಿವೆ. ನಿತ್ಯವೂ ಮತ್ತಷ್ಟು ಸೇರ್ಪಡೆ ಆಗುತ್ತದೆ ಎನ್ನುತ್ತಾರೆ ಘಟಕದ ಬಳಿಯ ಸಿಬ್ಬಂದಿ.

ಮಣ್ಣಿನಲ್ಲಿ ಬೆರೆಯುತ್ತಿದೆ ಪ್ಲಾಸ್ಟಿಕ್: ಘಟಕದ ಎದುರು ಸುರಿದಿರುವ ಪ್ಲಾಸ್ಟಿಕ್ ಧರೆ ಇಳಿಜಾರಿನಲ್ಲಿ ಜಾರುತ್ತಿದೆ. ಜೋರು ಮಳೆ ಬಂದಾಗ ನೀರಿನಲ್ಲಿ ತೊಯ್ದು ದೇವಿಕೆರೆ ಪಕ್ಕದ ಕಾಲುವೆ ಮೂಲಕ ಅರಣ್ಯ ಪ್ರದೇಶ ಸೇರುವ ಆತಂಕ ಎದುರಾಗಿದೆ. ಈಗಾಗಲೇ ಕಾಡಿನ ಪ್ರದೇಶದಲ್ಲಿ ಅಲ್ಲಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಂಡುಬರುತ್ತಿವೆ. ಜೆಸಿಬಿ ಬಳಸಿ ಸಮೀಪದ ಜಾಗವನ್ನೂ ಮಟ್ಟ ಮಾಡಿರುವುದು ಮಣ್ಣಿನಲ್ಲಿ ತ್ಯಾಜ್ಯ ಬೆರೆತು ಸಂಸ್ಕರಣೆ, ವಿಲೇವಾರಿಗೂ ದೊರಕದ ಅಸಾಧ್ಯ ಸನ್ನಿವೇಶ ಸೃಷ್ಟಿಯಾಗುತ್ತಿದೆ.

ದೇವಸ್ಥಾನ ಆವರಣದಲ್ಲಿರುವ ಅಂಗಡಿಗಳಲ್ಲಿನ ತ್ಯಾಜ್ಯವೂ ಸಮಸ್ಯೆ ಉಲ್ಬಣಿಸುವಂತೆ ಮಾಡಿದೆ. ನೀರಿನ ಬಾಟಲ್ಗಳೂ ಸೇರಿದಂತೆ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಆವರಣವಾಗಿ ದೇವಸ್ಥಾನವನ್ನು ನೋಡಿಕೊಳ್ಳಬೇಕು. ಸಂಸ್ಕರಣ ಘಟಕಗಳಿಂದ ನಿಯಮಿತವಾಗಿ ತ್ಯಾಜ್ಯ ಸಂಸ್ಕರಿಸಿ ವಿಲೇವಾರಿ ಮಾಡುವುದು, ತ್ಯಾಜ್ಯ ಸಂಗ್ರಹದಷ್ಟೇ ಮುಖ್ಯ. ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎನ್ನುವುದು ಪರಿಸರವಾದಿಗಳ ಆಗ್ರಹ.

ಈ ಬಗ್ಗೆ ಪ್ರತಿಕ್ರಿಯಿಸಲು ಪ್ರಾಧಿಕಾರದ ಸದಸ್ಯ-ಕಾರ್ಯದರ್ಶಿ ಎಂ.ಜೆ.ರೂಪಾ ಅವರು ಕರೆ ಸ್ವೀಕರಿಸಲಿಲ್ಲ.

'ಅನಿಯಂತ್ರಣ ವ್ಯವಸ್ಥೆಯ ಭಾಗವಿದು'

'ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಆರಂಭವಾದಾಗ ಇಂಥ ಸಮಸ್ಯೆಗಳು ದೂರಾಗಬಹುದು ಎಂದು ಭಾವಿಸಿದ್ದೆವು. ಆದರೆ, ಯಾವುದೇ ಪ್ರಯೋಜನವಾಗುತ್ತಿಲ್ಲ' ಎಂದು ಮೈಸೂರು ಗ್ರಾಹಕ ಪರಿಷತ್ತಿನ ಭಾಮಿ ವಿ.ಶೆಣೈ ಬೇಸರ ವ್ಯಕ್ತಪಡಿಸಿದರು.

'ತ್ಯಾಜ್ಯ ನಿರ್ವಹಣೆಯು ಇಷ್ಟು ಬೃಹದಾಕಾರ ಸಮಸ್ಯೆಯಾಗಿ ಏಕೆ ಸೃಷ್ಟಿಯಾಯಿತು ಎನ್ನುವುದನ್ನು ನಾವು ಅರಿಯಬೇಕು. 50 ವರ್ಷದ ಹಿಂದೆ 50 ಮನೆಗಳೂ ಇಲ್ಲದ ಬೆಟ್ಟವು ಇಂದು ತನ್ನ ಸಾಮರ್ಥ್ಯವನ್ನು ಮೀರಿದ ಕಟ್ಟಡಗಳು, ಅಂಗಡಿಗಳ ಹೊರೆಯನ್ನು ಹೊರುತ್ತಿದೆ. ನಿಯಂತ್ರಣದಲ್ಲಿ ಸ್ಥಳೀಯ ಆಡಳಿತವು ಸಂಪೂರ್ಣ ವಿಫಲವಾಗಿದೆ. ಈ ಎಲ್ಲ ಸಮಸ್ಯೆಗಳು ಒಂದಕ್ಕೊಂದು ಸಂಬಂಧಿಸಿವೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.