ಮೈಸೂರು: ನಗರದ ಚೆಲುವಾಂಬ ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಆರು ತಿಂಗಳಲ್ಲಿ 68 ನವಜಾಶ ಶಿಶುಗಳು ಮೃತಪಟ್ಟಿವೆ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣ ವಾರು ವಿಶ್ಲೇಷಣಾತ್ಮಕ ವರದಿ ಸಿದ್ಧಪಡಿಸಿ ಸಲ್ಲಿಸುವಂತೆ ಹಾಗೂ ಮರಣಪ್ರಮಾಣ ತಡೆಯುವಂತೆ ಸೂಚಿಸಲಾಗಿದೆ.

ಈ ವರ್ಷದ ಜನವರಿಯಿಂದ ಮಾರ್ಚ್ವರೆಗೆ ಆಸ್ಪತ್ರೆಗೆ ದಾಖಲಾದ 48 ಗಂಟೆಗಳ ಒಳಗೆ 23 ಶಿಶು ಮರಣ ಪ್ರಕರಣ ನಡೆದಿರುವುದು ಕಳವಳಕ್ಕೆ ಕಾರಣವಾಗಿದೆ.

‘ಪ್ರತಿ ಪ್ರಕರಣದ ಅಧ್ಯಯನ ನಡೆಸಬೇಕು. ಕೆಳ ಹಂತದ ಆಸ್ಪತ್ರೆಗಳ ಲೋಪವೇನು, ನಂತರದ ಹಂತದ ಆಸ್ಪತ್ರೆಗೆ ಕಳುಹಿಸುವಲ್ಲಿ ವಿಳಂಬ ಮಾಡಿದ್ದಾರೆಯೇ, ಚೆಲುವಾಂಬ ಆಸ್ಪತ್ರೆಯವರ ಪಾತ್ರವೇನು ಎಂಬ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಆಸ್ಪತ್ರೆ ಹಾಗೂ ಎಂಎಂಸಿಆರ್ಐ (ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆ) ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ಆಸ್ಪತ್ರೆಯಲ್ಲಿ ಕಳೆದ ವರ್ಷದ ಆಗಸ್ಟ್ನಲ್ಲಿ 9, ಡಿಸೆಂಬರ್ನಲ್ಲಿ 8, ಮಾರ್ಚ್ನಲ್ಲಿ 9 ಶಿಶು ಮೃತಪಟ್ಟಿದ್ದವು. ಜನವರಿಯಲ್ಲಿ 15, ಫೆಬ್ರುವರಿಯಲ್ಲಿ 18, ಮಾರ್ಚ್ನಲ್ಲಿ 9 ಶಿಶುಗಳ ಮರಣ ಸಂಭವಿಸಿದೆ. ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ಸಾವಿನ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿರುವುದು ಮೂಲ ಗಳಿಂದ ತಿಳಿದುಬಂದಿದೆ.

ಆಸ್ಪತ್ರೆಗೆ ಮೈಸೂರು ನಗರ, ಜಿಲ್ಲೆಯೊಂದಿಗೆ, ನೆರೆಯ ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆ ಗಳಿಂದಲೂ ಹೆರಿಗೆಗೆ ದಾಖಲಾಗುತ್ತಾರೆ. ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರ ಸಂಖ್ಯೆಯೇ ಜಾಸ್ತಿ ಇರುತ್ತದೆ. ಇಲ್ಲಿ ಇತ್ತೀಚಿನ ದಿನಗಳಲ್ಲಿ ಶಿಶು ಮರಣ ಪ್ರಕರಣ ಹೆಚ್ಚುತ್ತಿರುವುದು ಅಂಕಿ–ಅಂಶಗಳಿಂದ ದೃಢಪಟ್ಟಿದೆ.

ಜಿಲ್ಲೆಯ ಇತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಆಗದ ‘ಕ್ರಿಟಿಕಲ್ ಪ್ರಕರಣ’ಗಳಲ್ಲಿ ಶಿಶುಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುತ್ತಿದೆ.

ಈ ಆಸ್ಪತ್ರೆಯಲ್ಲಿ ಶಿಶು ವೈದ್ಯರು ಬೇಕಿರುವುದು ಆರು. ಅದರಲ್ಲಿ 5 ಹುದ್ದೆಗಳು ಖಾಲಿ ಇವೆ. ಶುಶ್ರೂಷಕರ ಹುದ್ದೆಗಳು 96 ಮಂಜೂರಾಗಿದ್ದು, 59 ಮಂದಿಯಷ್ಟೆ ನಿರ್ವಹಿಸುತ್ತಿದ್ದಾರೆ. ಗ್ರೂಪ್ ‘ಡಿ’ 16 ಹುದ್ದೆಗಳಿದ್ದು, 12 ಹುದ್ದೆಗಳು ಖಾಲಿ ಇವೆ. ಇದು ಕೂಡ, ತೊಡಕಾಗಿ ಪರಿಣಮಿಸಿದೆ ಎನ್ನುತ್ತಾರೆ ಅಧಿಕಾರಿಗಳು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-51-1811679080

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.