ಮೈಸೂರು: ‘ಮಕ್ಕಳ ಮೇಲೆ ಪೋಷಕರು ನಿಗಾ ವಹಿಸಬೇಕು’ ಎಂದು ವಿಜಯನಗರ ಎಸಿಪಿ ರವಿಪ್ರಸಾದ್ ಸಲಹೆ ನೀಡಿದರು.

ಇಲ್ಲಿನ ಕಿರುರಂಗಮಂದಿರದಲ್ಲಿ ನೇಪಥ್ಯ ರಂಗ ತಂಡವು ಶನಿವಾರ ಆಯೋಜಿಸಿದ್ದ ‘ಹಾಡು ಆಟ ಆಡು’ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘14 ವರ್ಷದ ಮಕ್ಕಳು ಕೂಡ ಕೊಕೇನ್, ಸಲ್ಯೂಷನ್ ಮೊದಲಾದ ಮಾದಕವಸ್ತುಗಳನ್ನು ಸೇವಿಸುವುದು ಕಂಡು ಬರುತ್ತಿದೆ. ಆದ್ದರಿಂದ ಮಕ್ಕಳಿಗೆ ಸ್ವಲ್ಪ ಸಮಯ ನೀಡಬೇಕು. ಏನು ಮಾಡುತ್ತಾರೆ, ಎಲ್ಲಿಗೆ ಹೋಗುತ್ತಾರೆ. ಯಾರೊಂದಿಗೆ ಇರುತ್ತಾರೆ ಎಂಬುದನ್ನು ಗಮನಿಸಿ, ಆ ಮೂಲಕ ದಾರಿತಪ್ಪದಂತೆ ನೋಡಿಕೊಳ್ಳಬೇಕು’ ಎಂದರು.

ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ‘ಮೊದಲೆಲ್ಲಾ ಬೇಸಿಗೆ ರಜೆ ಬಂದರೆ ಮಕ್ಕಳು ಅಜ್ಜ- ಅಜ್ಜಿಯ ಮನೆಗೆ ಹೋಗುತ್ತಿದ್ದರು. ಈ ಸಂಪರ್ಕ ಯುಗದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ’ ಎಂದು ಹೇಳಿದರು.

ರೋಟರಿ ಜಿಲ್ಲಾ ಗೌರ್ನರ್ ಯಶಸ್ವಿ ಸೋಮಶೇಖರ್, ನಿರಂತರ ರಂಗತಂಡದ ಸಂಸ್ಥಾಪಕ ಎ.ಎಂ.ಸುಗುಣ, ರೋಟರ್ಯಾಕ್ಟ್ ಕ್ಲಬ್ ಡಿಆರ್ಸಿಸಿ ಶಕುಂತಲಾ ಎಲಿಜಬೆತ್, ರಂಗಕರ್ಮಿ ದೀಪಕ್ ಮೈಸೂರು ಮಾತನಾಡಿದರು.

ನೇಪಥ್ಯ ರಂಗ ತಂಡದ ಗೌತಮ್, ಸಂತೋಷ್, ಸಾಗರ್ ಪಾಲ್ಗೊಂಡಿದ್ದರು. ನಂತರ ಎರಡು ನಾಟಕ, ನೃತ್ಯ, ಜನಪದ ಗೀತೆಗಳನ್ನು ಮಕ್ಕಳು ಪ್ರಸ್ತುತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-39-647668794

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.