ಮೈಸೂರು: ರಂಗಾಂತರಂಗ ಮೈಸೂರು ಮಕ್ಕಳ ಅಭಿನಯ ರಂಗಶಾಲೆಯಿಂದ ಜೂನ್ನಿಂದ ಫೆಬ್ರುವರಿವರೆಗೆ ಪ್ರತಿ ಶನಿವಾರ ಮತ್ತು ಭಾನುವಾರ ಮಕ್ಕಳಿಗಾಗಿ ರಂಗ ತರಬೇತಿ ನೀಡಲಾಗುವುದು ಎಂದು ರಂಗಾಂತರಂಗ ಸಂಸ್ಥಾಪಕ ಕೀರ್ತಿರಾಜ್ ಕೆ.ಎಂ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಿಳಾ ಸದನ ನಾರಾಯಣಶಾಸ್ತ್ರಿ ರಸ್ತೆ, ದೇವರಾಜ ಮೊಹಲ್ಲಾದಲ್ಲಿ ತರಬೇತಿ ನಡೆಯಲಿದೆ. ಶನಿವಾರ ಮಧ್ಯಾಹ್ನ 3.30ರಿಂದ ಸಂಜೆ 6.30ರವರೆಗೆ ಹಾಗೂ ಭಾನುವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ತರಬೇತಿ ನಡೆಯಲಿದೆ ಎಂದರು.

ರಂಗಾಂತರಂಗ ಮಕ್ಕಳಿಗಾಗಿ ಶಿಬಿರ, ನಾಟಕೋತ್ಸವ ಆಯೋಜಿಸುತ್ತಿದೆ. ಮಕ್ಕಳ ವ್ಯಕ್ತಿತ್ವ ವಿಕಸನ ಮತ್ತು ವಿದ್ಯಾಭ್ಯಾಸಕ್ಕೆ ಪೂರಕವಾಗಿ ತರಬೇತಿ ನೀಡಲಾಗುತ್ತದೆ. ನೋಂದಣಿಗೆ ಮೊ.ಸಂ. 97399 19004 ಸಂಪರ್ಕಿಸಬಹುದು ಎಂದರು.

ರಂಗಕರ್ಮಿ ಮೈಮ್ ರಮೇಶ್ ಮಾತನಾಡಿ, ‘ಧಾರಾವಾಹಿಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸಮಾಜದ ಕುರಿತು ಮಕ್ಕಳಿಗೆ ಅರಿವು ಮೂಡಿಸಲು ರಂಗಭೂಮಿ ಸಹಕಾರಿ’ ಎಂದು ಹೇಳಿದರು.

ಸಾಹಿತಿ ನಾ. ದಿವಾಕರ ಮಾತನಾಡಿದರು. ರಂಗಾಂತ ರಂಗದ ಸಹ ನಿರ್ದೇಶಕ ಗೌರಿಶಂಕರ್, ಸಿಂಧು ನಟರಾಜ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-39-504031625

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.