ಮೈಸೂರು: ಹೊಸ ಸಂವತ್ಸರಕ್ಕೆ ಮುನ್ನಡಿ ಆಗಿರುವ ಯುಗಾದಿ ಹಬ್ಬದ ಸ್ವಾಗತಕ್ಕೆ ನಗರವೂ ಸೇರಿದಂತೆ ಜಿಲ್ಲೆಯ ಜನರು ಸಜ್ಜಾಗಿದ್ದು, ಹಬ್ಬದ ಮುನ್ನಾ ದಿನವಾದ ಬುಧವಾರ ಸಿದ್ಧತೆ ಜೋರಾಗಿತ್ತು. ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಹೆಚ್ಚಿತ್ತು.

ಮಾವು–ಬೇವಿನೊಂದಿಗೆ ಹಬ್ಬವನ್ನು ಸ್ವಾಗತಿಸುವುದು ವಾಡಿಕೆ. ಈ ಎರಡೂ ಸೊಪ್ಪುಗಳ ಮಿಶ್ರಣವನ್ನುಳ್ಳ ಸಣ್ಣ ಕಟ್ಟುಗಳನ್ನು ಕೊಳ್ಳಲು ಮಾರುಕಟ್ಟೆಗೆ ಬಂದ ಗ್ರಾಹಕರು ಅದರೊಟ್ಟಿಗೆ ಹಬ್ಬಕ್ಕೆ ಬೇಕಾದ ಇನ್ನಿತರ ಹೂ–ಹಣ್ಣು , ಪೂಜಾ ಸಾಮಗ್ರಿಗಳನ್ನೂ ಕೊಂಡೊಯ್ದರು. ಮಾವಿನ ಸೊಪ್ಪು ಸಣ್ಣ ಕಟ್ಟಿಗೆ ₹20 ಹಾಗೂ ಬೇವು ₹10ರಂತೆ ಚೌಕಾಸಿಯ ವ್ಯಾಪಾರ ನಡೆಯಿತು.

ನಗರದ ಪ್ರಮುಖ ಮಾರುಕಟ್ಟೆಗಳಾದ ದೇವರಾಜ ಮಾರುಕಟ್ಟೆ, ಅದಕ್ಕೆ ಹೊಂದಿಕೊಂಡಂತೆ ಇರುವ ಚಿಕ್ಕಗಡಿಯಾರ ವೃತ್ತಗಳಲ್ಲಿ ಬೆಳಿಗ್ಗೆಯಿಂದಲೇ ಜನಜಂಗುಳಿ ಹೆಚ್ಚಿತ್ತು. ಸಂಜೆಯಾಗುತ್ತಲೇ ಗ್ರಾಹಕರ ಸಂಖ್ಯೆ ದುಪ್ಪಟ್ಟಾಯಿತು.

ಯುಗಾದಿಯಂದು ಹೋಳಿಗೆ ಮಾಡಿ ಸವಿಯುವುದು ವಾಡಿಕೆ. ಹಬ್ಬಕ್ಕೆ ಬೇಕಾದ ಪದಾರ್ಥಗಳ ಖರೀದಿಗೆ ಜನರು ಆಸಕ್ತಿ ತೋರಿದರು. ಈ ಬಾರಿ ತೊಗರಿ ಬೇಳೆ ಸೇರಿದಂತೆ ಹೆಚ್ಚಿನ ಪದಾರ್ಥಗಳು ಕೈಗೆ ಎಟಕುವ ದರದಲ್ಲೇ ಇವೆ. ಬೇಳೆ ಪ್ರತಿ ಕೆ.ಜಿ.ಗೆ ₹110–120, ಹೆಸರುಬೇಳೆ ₹110, ಮೈದಾ ₹50, ಬೆಲ್ಲ ₹60ರಂತೆ ವ್ಯಾಪಾರ ನಡೆದಿತ್ತು. ಕಡಲೆಬೀಜ ಕೊಂಚ ದರ ಏರಿಸಿಕೊಂಡಿದ್ದು ₹200–220ರಂತೆ ಮಾರಾಟವಾಯಿತು. ಈ ಹಬ್ಬಕ್ಕೆ ಅಡುಗೆ ಎಣ್ಣೆಗಳು ದುಬಾರಿ ಆಗಿದ್ದು, ಸೂರ್ಯಕಾಂತಿ ಎಣ್ಣೆ ಲೀಟರ್ಗೆ ₹180ಕ್ಕೆ ದರ ಹೆಚ್ಚಾಗಿತ್ತು.

ಹಣ್ಣುಗಳ ದರದಲ್ಲಿ ಹೆಚ್ಚು ವ್ಯತ್ಯಾಸ ಇರಲಿಲ್ಲ. ಸೇಬು ಹಾಗೂ ದಾಳಿಂಬೆ ದುಬಾರಿ ಆಗಿದ್ದು, ಕೆ.ಜಿ.ಗೆ ₹250ರವರೆಗೂ ಮಾರಾಟವಾದವು. ಏಲಕ್ಕಿ ಬಾಳೆ ಬೆಲೆ ಕೊಂಚ ತಗ್ಗಿದ್ದು, ಹಬ್ಬದಲ್ಲೂ ₹70–80ರ ಸರಾಸರಿಯಲ್ಲಿ ವ್ಯಾಪಾರವಾಯಿತು. ದ್ರಾಕ್ಷಿ ಅಗ್ಗವಾಗಿದ್ದು, ಕೆ.ಜಿ.ಗೆ ₹100, ಸಪೋಟ –₹60, ಮೂಸಂಬಿ ಹಾಗೂ ಕಿತ್ತಳೆ–₹60, ಕಲ್ಲಂಗಡಿ–₹25, ಖರ್ಬೂಜ–₹40ರಂತೆ ವ್ಯಾಪಾರವಾಯಿತು.

ಜವಳಿ ಖರೀದಿ ಸಂಭ್ರಮ: ಹಬ್ಬಕ್ಕೆಂದು ಹೊಸ ಬಟ್ಟೆ ಖರೀದಿ ಜೋರಾಗಿದ್ದು, ನಗರದ ಜವಳಿ ಮಳಿಗೆಗಳಿಗೆ ಗ್ರಾಹಕರು ಲಗ್ಗೆ ಇಟ್ಟರು. ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ, ಗಾಂಧಿ ವೃತ್ತ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶ ಗಳಲ್ಲಿ ಸಂಜೆ ಹೆಚ್ಚಿನ ಜನಸಂದಣಿ ಕಂಡುಬಂತು.

ದೇವಸ್ಥಾನಗಳಲ್ಲಿ ಸ್ವಚ್ಛತೆ: ಯುಗಾದಿ ಅಮಾವಾಸ್ಯೆ ಅಂಗವಾಗಿ ಬುಧವಾರ ಬಹುತೇಕ ದೇಗುಲಗಳಲ್ಲಿ ಸ್ವಚ್ಛತಾ ಕಾರ್ಯಗಳು ನಡೆದವು. ಗುರುವಾರ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಅದಕ್ಕೆ ಬೇಕಾದ ಸಿದ್ಧತೆಗಳು ಜೋರಾಗಿದ್ದವು.

ಹೊನ್ನೇರು ಕಟ್ಟಲು ಸಿದ್ಧತೆ: ಯುಗಾದಿ ಯಂದು ‘ಹೊನ್ನೇರು’ ಕಟ್ಟುವುದಕ್ಕೆ ಹಳ್ಳಿಹಳ್ಳಿಗಳಲ್ಲಿ ಸಿದ್ಧತಾ ಕಾರ್ಯಗಳು ನಡೆದಿವೆ. ಎತ್ತುಗಳನ್ನು ಸಾಕಿರುವವರು ಕಡ್ಡಾಯವಾಗಿ ತಮ್ಮ ಹೊಲಕ್ಕೆ ಹೋಗಿ ಉಳುಮೆ ಕಾರ್ಯ ಆರಂಭಿಸುವುದು ಯುಗಾದಿ ವಿಶೇಷ. ಅದಕ್ಕೆಂದೇ ಅವರೆಲ್ಲ ತಮ್ಮ ತಮ್ಮ ಎತ್ತುಗಳ ಸಿಂಗಾರ ಕಾರ್ಯದಲ್ಲಿ ತೊಡಗಿದ್ದರು.

ಕನಕಾಂಬರ ಕೆ.ಜಿ.ಗೆ ₹1 ಸಾವಿರ

ಹಬ್ಬದ ಹಿನ್ನೆಲೆಯಲ್ಲಿ ಹೂವುಗಳಿಗೆ ಬೇಡಿಕೆ ಹೆಚ್ಚಾಗಿದ್ದು ಕನಕಾಂಬರ ಪ್ರತಿ ಕೆ.ಜಿ.ಗೆ ₹1 ಸಾವಿರದವರೆಗೂ ಬೆಲೆ ಏರಿಸಿಕೊಂಡಿತ್ತು. ಮಂಗಳ ವಾರ ಅಲ್ಲಲ್ಲಿ ವ್ಯಾಪಕ ಮಳೆಯಾದ ಕಾರಣಕ್ಕೆ ಮಾರುಕಟ್ಟೆಗೆ ಗುಣ ಮಟ್ಟದ ಹೂವು ಬಂದಿರಲಿಲ್ಲ. ಹೀಗಾಗಿ ಬುಧವಾರ ಮಧ್ಯಾಹ್ನದ ತರುವಾಯ ಬೆಲೆ ಇನ್ನಷ್ಟು ಹೆಚ್ಚಾಯಿತು. 100 ಗ್ರಾಂಗೆ ₹100ರಂತೆ ಮಾರಾಟ ನಡೆದಿತ್ತು. ಘಮ್ಮೆನ್ನುವ ಮೈಸೂರು ಮಲ್ಲಿಗೆಗೂ ಬೇಡಿಕೆ ಹೆಚ್ಚಿದ್ದು ಕೆ.ಜಿ.ಗೆ ₹600ರಂತೆ ವ್ಯಾಪಾರ ವಾಯಿತು. ಸೇವಂತಿಗೆ ಪ್ರತಿ ಕೆ.ಜಿ.ಗೆ ₹200 ಹಾಗೂ ಮಾರಿಗೆ ₹80–100 ಬೆಲೆ ಇತ್ತು. ಬಿಡಿ ಗುಲಾಬಿ ₹300 ಕಾಕಡ–₹400 ರಂತೆ ಮಾರಾಟ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.