ಮೈಸೂರು: ‘ಮಹಿಳೆಯರು ಆರೋಗ್ಯಕ್ಕೆ ಆದ್ಯತೆ ನೀಡಬೇಕು’ ಎಂದು ಟಿ20 ಬ್ಲೈಂಡ್ (ಅಂಧ) ಮಹಿಳಾ ಕ್ರಿಕೆಟ್ ವರ್ಲ್ಡ್ ಕಪ್ ವಿಜೇತ ಭಾರತ ತಂಡದ ನಾಯಕಿ ದೀಪಿಕಾ ಟಿ.ಸಿ ಸಲಹೆ ನೀಡಿದರು.

ಇಲ್ಲಿನ ಕ್ಲಿಯರ್ಮೆಡಿ ಹೆಲ್ತ್ಕೇರ್ ಆಸ್ಪತ್ರೆ ವತಿಯಿಂದ ‘ವುಮೆನ್ ಫಾರ್ ವುಮೆನ್’ ಯೋಜನೆಯಡಿ ಈಚೆಗೆ ಪ್ರಾರಂಭಿಸಲಾದ ‘ಮಹಿಳಾ ಕ್ಯಾನ್ಸರ್ ಆರೈಕೆ ಕ್ಲಿನಿಕ್’ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಿಳೆಯರ ಆರೋಗ್ಯ ಸೇವೆಗೆ ಮಹತ್ವದ ಹೆಜ್ಜೆಯಾಗಿ ಕ್ಯಾನ್ಸರ್ ಆರೈಕೆ ಕ್ಲಿನಿಕ್ ತೆರೆಯಲಾಗಿದೆ’ ಎಂದರು.

ಕ್ಲಿಯರ್ಮೆಡಿ ಹೆಲ್ತ್ಕೇರ್ ನಿರ್ದೇಶಕ ಡಾ.ಶ್ರೀನಿವಾಸ್, ‘ಈ ಯೋಜನೆ ಕ್ಯಾನ್ಸರ್ ಚಿಕಿತ್ಸೆ ಒದಗಿಸುವ ಬದ್ಧತೆ ತೋರಿಸುತ್ತದೆ. ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆಯಾದರೆ ಬದುಕುಳಿಯುವ ಪ್ರಮಾಣ ಹೆಚ್ಚಿಸಬಹುದು’ ಎಂದು ಹೇಳಿದರು.

ಹಿರಿಯ ಶಸ್ತ್ರಚಿಕಿತ್ಸಾ ಕ್ಯಾನ್ಸರ್ ತಜ್ಞ ಡಾ.ರಕ್ಷಿತ್ ಶ್ರೀಂಗೇರಿ, ರೇಡಿಯೇಷನ್ ಆಂಕಾಲಜಿಸ್ಟ್ ಡಾ.ಮೆಖಲಾ, ಶಸ್ತ್ರ ಚಿಕಿತ್ಸಾ ಆಂಕಾಲಜಿಸ್ಟ್ ಡಾ.ರಾಜಲಕ್ಷ್ಮಿ ಇ.ಎಸ್ ಮಾತನಾಡಿದರು.

ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಪ್ರಿಯಾಂಕಾ ಸತೀಶ್, ‘ಮಹಿಳೆಯರು ಕುಟುಂಬದಲ್ಲಿ ಪ್ರಮುಖ ಪಾತ್ರ ವಹಿಸುವರು. ಹೀಗಾಗಿ ಆರೋಗ್ಯವನ್ನು ಆದ್ಯತೆಯಾಗಿ ಪರಿಗಣಿಸಬೇಕು’ ಎಂದು ಕಿವಿಮಾತು ಹೇಳಿದರು.

ಈ ವೇಳೆ ₹999 ದರದ ವಿಶೇಷ ಕ್ಯಾನ್ಸರ್ ತಪಾಸಣಾ ಪ್ಯಾಕೇಜ್ ಘೋಷಿಸಿದರು. ಈ ಪ್ರತಿ ಬುಧವಾರ, ಶನಿವಾರ ಸಾಮಾನ್ಯ ಆರೋಗ್ಯ ತಪಾಸಣೆ ಪ್ಯಾಕೇಜ್ ಒದಗಿಸಲಾಗುವುದು ಎಂದು ತಿಳಿಸಿದರು.

ಬ್ಯುಸಿನೆಸ್ ಹೆಡ್ ವೆಲ್ಮುಲ ಚಲಂ, ದಕ್ಷಿಣ ವಲಯ ನಿರ್ದೇಶಕ ರವಿಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-39-1222623773

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.