ಮೈಸೂರು: ‘ಸೀಳು ತುಟಿ, ಸೀಳು ಅಂಗುಳ ಹಾಗೂ ಮುಖ ಚಹರೆಯ ನ್ಯೂನ್ಯತೆ ಉಳ್ಳವರನ್ನು ಪತ್ತೆಹಚ್ಚಿ ಅವರಿಗೆ ಸಿಗುವ ಚಿಕಿತ್ಸೆಯ ಸೌಲಭ್ಯ ನೀಡಲು ಜೊತೆಯಾಗಿ ಕೆಲಸ ಮಾಡಬೇಕಿದ್ದು, ಸ್ವಯಂ ಸೇವಾ ಸಂಸ್ಥೆ (ಐಎಸ್ಸಿಎಲ್ಪಿಸಿಎ) ಜೊತೆಗೆ ಸರ್ಕಾರವೂ ಕೈಜೋಡಿಸಲಿದೆ’ ಎಂದು ಆರೋಗ್ಯ ಮತ್ತು ಮಕ್ಕಳ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್)ಯಲ್ಲಿ ಸೀಳು ತುಟಿ, ಸೀಳು ಅಂಗುಳ ಹಾಗೂ ಮುಖ ಚಹರೆ ನ್ಯೂನ್ಯತೆ (ಕ್ರಾನಿಫೇಶಿಯಲ್ ಅನೊಮಲೀಸ್) ಸಂಘಟನೆಯು ಗುರುವಾರ ಆಯೋಜಿಸಿದ್ದ 24ನೇ ವಾರ್ಷಿಕ ಸಮ್ಮೇಳನ ‘ಇಂಡೊಕ್ಲೆಟ್ಕಾನ್ 2026’ ಉದ್ಘಾಟಿಸಿ ಮಾತನಾಡಿದರು.

‘ಈ ರೀತಿಯ ಸಮಸ್ಯೆಗಳನ್ನು ಗುರುತಿಸಿ, ಪರಿಹರಿಸದೆ ಇದ್ದ ಕಾರಣ ಅವು ಇನ್ನೂ ದೇಶದಲ್ಲಿ ಉಳಿದಿದೆ. ಗ್ರಾಮೀಣ ಹಾಗೂ ಸಣ್ಣ ನಗರಗಳಲ್ಲಿ ಸೀಳು ತುಟಿ, ಸೀಳು ಅಂಗುಳ ಕುರಿತು ಮಾಹಿತಿ ಇಲ್ಲದೆ, ಅನಗತ್ಯ ಚಿಕಿತ್ಸೆ ಪಡೆಯುತ್ತಿರುವವರು ಇದ್ದಾರೆ. ಅಂತಹವರನ್ನು ಪತ್ತೆಹಚ್ಚಿ, ಸರಿಯಾದ ಚಿಕಿತ್ಸಾ ವಿಧಾನದ ಬಗ್ಗೆ ಅರಿವು ಮೂಡಿಸಬೇಕಿದೆ’ ಎಂದು ಹೇಳಿದರು.

‘ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016 ಅಡಿಯಲ್ಲಿ ಸೀಳು ಬಾರಿ, ಅಂಗುಳ ಇರುವವರಿಗೆ ವೈದ್ಯಕೀಯ ಚಿಕಿತ್ಸೆಗಷ್ಟೇ ನಿಯಮ ಇವೆ. ಆದರೆ ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಭಾಗವಹಿಸುವಿಕೆಯಲ್ಲಿ ಅವರಿಗೂ ಸಮಾನ ಅವಕಾಶ ಇವೆ. ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸಿಬ್ಬಂದಿಗಳ ಮೂಲಕ ಸೀಳು ಸಂಬಂಧಿತ ಸಮಸ್ಯೆ ಇರುವವರನ್ನು ಪತ್ತೆ ಹಚ್ಚಲು ಸರ್ಕಾರದ ಮೂಲಕ ಕ್ರಮವಹಿಸುತ್ತೇವೆ. ಎನ್ಜಿಒಗಳು, ವೈದ್ಯರು, ಪೋಷಕರು ಹಾಗೂ ಸಂಘ– ಸಂಸ್ಥೆಗಳು ಒಂದೇ ವೇದಿಕೆಯಡಿ ಕಾರ್ಯ ನಿರ್ವಹಿಸಬೇಕು’ ಎಂದರು.

‘ಸಮ್ಮೇಳನದಲ್ಲಿ ಜ್ಞಾನ ಹಂಚಿಕೊಳ್ಳುವ ಮೂಲಕ, ತಂತ್ರಜ್ಞಾನ ಬಳಸಿಕೊಂಡು ನೀಡುವ ಚಿಕಿತ್ಸೆಯ ಸವಾಲು ಕುರಿತು ಚರ್ಚೆ ನಡೆಯಬೇಕಿದೆ. ನಾವೀನ್ಯತೆಗಳನ್ನು ಅನ್ವೇಷಿಸುವ ಮೂಲಕ ನಮ್ಮ ದೇಶದಲ್ಲಿ ಸೀಳು ಆರೈಕೆಯ ಪರಿಸರ ವ್ಯವಸ್ಥೆ ರೂಪಿಸಬೇಕು. ವರ್ಚುವಲ್ ಸರ್ಜಿಕಲ್ ಪ್ಲಾನಿಂಗ್, ಪ್ರಿ ಸರ್ಜಿಕಲ್ ಇನ್ಫೆಂಟ್ ಆರ್ಥೋಪೆಡಿಕ್ಸ್ ಮತ್ತು ವಿಶೇಷ ಸ್ಪೀಚ್ ಥೆರಪಿ ತರಬೇತಿ ಸೇರಿದಂತೆ ಆಧುನಿಕ ಪ್ರಗತಿಗಳ ಬಗ್ಗೆ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

ಸೀಳು ಸಂಬಂಧಿ ಸಮಸ್ಯೆಗಳ ಕುರಿತು ಕೆಲಸ ಮಾಡುತ್ತಿರುವ ‘ಸ್ಮೈಲ್ ಟ್ರೈನ್ ಇಂಡಿಯಾ’ ಎನ್ಜಿಒ ಸಂಸ್ಥೆಯ ರೇಣು ಮೆಹ್ತಾ ಅವರನ್ನು ಸನ್ಮಾನಿಸಲಾಯಿತು.

ಐಎಸ್ಸಿಎಲ್ಪಿಸಿಎ ಅಧ್ಯಕ್ಷೆ ಡಾ.ಎಂ.ಪುಷ್ಪಾವತಿ, ಕಾರ್ಯದರ್ಶಿ ಡಾ. ಪ್ರೀತಂ ಎನ್.ಶೆಟ್ಟಿ, ಡಾ.ಎಸ್.ಗೋಪಿಶಂಕರ್ ಭಾಗವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-38-449247272

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.