ಮೈಸೂರು: ‘ಕಾಂಗ್ರೆಸ್ ಪಕ್ಷವು ಹಿಂಬಾಗಿಲಿನಿಂದ ಚುನಾವಣಾ ಅಕ್ರಮ ನಡೆಸಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಪ್ರತಿಯೊಂದು ವಾರ್ಡ್ನಲ್ಲೂ ನೇರ ಹಸ್ತಕ್ಷೇಪ ನಡೆದಿದ್ದು, ಸಚಿವರು, ಶಾಸಕರು ಮತ್ತು ಅನೇಕ ನಿಗಮಗಳ ಅಧ್ಯಕ್ಷರನ್ನು ಚುನಾವಣಾ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ನಿಯಂತ್ರಿಸಲು ನಿಯೋಜಿಸಲಾಗಿತ್ತು’ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ದೂರಿದ್ದಾರೆ.

‘ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಸಂಘಟಿತವಾಗಿ ಹಣ ಹಂಚಿಕೆ ನಡೆದಿರುವುದು ಕಂಡುಬಂದಿದೆ. ಇದು ಸ್ವತಂತ್ರ ಮತ್ತು ನ್ಯಾಯಸಮ್ಮತ ಚುನಾವಣೆಯ ಆತ್ಮವನ್ನು ಹಾಳು ಮಾಡುತ್ತದೆ. ಈ ಫಲಿತಾಂಶವು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಳಒಪ್ಪಂದ ನಡೆದಿರುವ ಬಗ್ಗೆ ಅನುಮಾನಗಳನ್ನು ಹುಟ್ಟಿಸುತ್ತದೆ. ಇಂತಹ ರಾಜಕೀಯ ಹೊಂದಾಣಿಕೆಗಳು, ನಿಜವಾದ ಪರ್ಯಾಯ ಶಕ್ತಿಗಳಾದ ಎಸ್ಡಿಪಿಐಯನ್ನು ಹಿನ್ನಡೆಗೊಳಿಸುವ ಮೂಲಕ ಪ್ರಮುಖ ಪಕ್ಷಗಳು ಪರಸ್ಪರ ರಕ್ಷಿಸಿಕೊಳ್ಳುತ್ತಿದೆ’ ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-39-1458481813

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.