ಮೈಸೂರು: ‘ಭ್ರಷ್ಟಾಚಾರ ಹಾಗೂ ಆಡಳಿತ ವೈಫಲ್ಯವೇ ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ನಿಜವಾದ ಸಾಧನೆ. ಅಭಿವೃದ್ಧಿ ವಿಚಾರದಲ್ಲಿ ಶೂನ್ಯ ಸಾಧನೆ ಮಾಡಿದೆ’ ಎಂದು ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಟೀಕಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಸಾಧನಾ ಸಮಾವೇಶ ಮಾಡುತ್ತಿರುವುದು ಹಾಸ್ಯಾಸ್ಪದ. ಅನೀತಿ, ಅಧರ್ಮ, ಅರಾಜಕತೆ, ಭಷ್ಟಾಚಾರವೇ ಸಾಧನೆಯೇ’ ಎಂದು ಪ್ರಶ್ನಿಸಿದರು.

‘ಸರ್ಕಾರದ ಸಚಿವರು ಸಾಲು ಸಾಲು ಹಗರಣಗಳಲ್ಲಿ ಮುಳುಗಿದ್ದಾರೆ. ಬಿ.ನಾಗೇಂದ್ರ ವಾಲ್ಮೀಕಿ ನಿಗಮದಲ್ಲಿ ₹127 ಕೋಟಿ ದೋಚಿದ್ದು, ಇನ್ನೂ ₹125 ಕೋಟಿ ವಾಪಸ್ ಪಡೆದಿಲ್ಲ. ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ಮತ್ತು ಪ್ರಭಾವ ದುರುಪಯೋಗದ ಸಂಬಂಧ ಇಡಿಯಲ್ಲಿ ಪ್ರಕರಣ ದಾಖಲಾಗಿದೆ. ಜಮೀರ್ ಅಹಮದ್ ವಿರುದ್ಧ ಕಲ್ಯಾಣ ಕರ್ನಾಟಕ ನಿಧಿ ಹಂಚಿಕೆಯಲ್ಲಿ ಸ್ವಪಕ್ಷದ ಶಾಸಕರಿಂದಲೇ ಭ್ರಷ್ಟಾಚಾರದ ಆರೋಪ ಇದೆ. ಬೈರತಿ ಸುರೇಶ್, ರಹೀಮ್ ಖಾನ್ ವಿರುದ್ಧ ಅಮೃತ ಯೋಜನೆ ಹಾಗೂ ನಗರಾಭಿವೃದ್ಧಿ ನಿಧಿಯಲ್ಲಿ ಹಣ ದುರುಪಯೋಗದ ಆರೋಪಗಳು ತನಿಖಾ ಹಂತದಲ್ಲಿವೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೇ ಮೈಸೂರಿನ ಬಹುಕೋಟಿ ಮುಡಾ ಹಗರಣದ ಕಲೆ ಅಂಟಿಕೊಂಡಿದೆ. ಇವೇ ಅವರ ಸಾಧನೆ’ ಎಂದರು.

‘ರಾಜ್ಯ ಸರ್ಕಾರ ಬಸ್ ದರ, ವಿದ್ಯುತ್ ದರ, ಶೇ.20 ರಷ್ಟು ಸ್ಟಾಂಪ್ ಡ್ಯೂಟಿ ಹಾಗೂ ಹಾಲಿನ ದರವನ್ನು ಏಕಾಏಕಿ ಹೆಚ್ಚಳ ಮಾಡಿದೆ. ಹಾಲಿನ ಮೇಲಿನ ₹5 ಸಬ್ಸಿಡಿ ನಿಲ್ಲಿಸಲಾಗಿದೆ. ಇದಲ್ಲದೆ ರಾಜ್ಯದಲ್ಲಿ ಸುಮಾರು 350 ಸರ್ಕಾರಿ ಶಾಲೆಗಳನ್ನು ಮುಚ್ಚಲು ಆದೇಶಿಸಿರುವುದು ಬಡವರ ಶಿಕ್ಷಣಕ್ಕೆ ಮಾರಕವಾಗಿದೆ’ ಎಂದು ಆರೋಪಿಸಿದರು.

‘ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ಮಾತಿನಂತೆ ಜಾರಿ ಮಾಡಿದ್ದೇವೆ ಎಂದು ಬೀಗುವ ಸರ್ಕಾರ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದೆ. 2023– 24ರಲ್ಲಿ ಗ್ಯಾರಂಟಿಗಳಿಗೆ ₹ 36 ಸಾವಿರ ಕೋಟಿ ನೀಡಿದ್ದರೆ, ₹ 82 ಸಾವಿರ ಕೋಟಿ ಸಾಲ ಮಾಡಲಾಗಿದೆ. 2024-25 ರಲ್ಲಿ ₹ 56 ಸಾವಿರ ಕೋಟಿ ನೀಡಿ, ₹1.05 ಲಕ್ಷ ಕೋಟಿ ಸಾಲ ಮಾಡಲಾಗಿದೆ. 2025– 26ರಲ್ಲಿ ₹52 ಸಾವಿರ ಕೋಟಿ ವ್ಯಯಿಸಿ, ₹1.16 ಲಕ್ಷ ಕೋಟಿ ಸಾಲ ಮಾಡಲಾಗಿದೆ. ಪ್ರಸ್ತುತ ಸಾಲಿನಲ್ಲಿ ₹1.32 ಲಕ್ಷ ಕೋಟಿ ಸಾಲ ಮಾಡಲು ಅಂದಾಜಿಸಲಾಗಿದೆ. ಇವುಗಳ ಬಡ್ಡಿ ಪಾವತಿಗೇ ಸಾರ್ವಜನಿಕರ ತೆರಿಗೆ ಹಣದ ಪೈಕಿ ₹45 ಸಾವಿರ ಕೋಟಿ ವ್ಯಯಿಸಲಾಗುತ್ತಿದೆ. ಸಾಲ ಮಾಡಿ ಗ್ಯಾರಂಟಿ ಕೊಡುವುದೇ ಇವರ ಸಾಧನೆಯೇ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮುಖಂಡರಾದ ಸೋಮಸುಂದರ್, ವಸಂತಕುಮಾರ್, ಬಿ.ಎಂ.ರಘು, ರುದ್ರಮೂರ್ತಿ, ಕಾರ್ತಿಕ್ ಮರಿಯಪ್ಪ, ಶಿವರಾಜ್, ಸಂತೋಷ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-39-2020068960

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.