ಮೈಸೂರು: ‘ಸಹಕಾರಿ ಸಂಸ್ಥೆಯ ನಿಯಮದಲ್ಲಿನ ಬದಲಾವಣೆಗಳ ಕುರಿತು ಸಿಬ್ಬಂದಿಗಳಲ್ಲಿ ಮಾಹಿತಿ ಇರಬೇಕು. ಇದರಿಂದ ಗ್ರಾಹಕರಿಗೆ ಶ್ರೇಷ್ಠ ಮಟ್ಟದ ಸೇವೆ ಒದಗಿಸಲು ಸಾಧ್ಯ’ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಶಿಕ್ಷಣ ನಿಧಿ ಸಲಹಾ ಸಮಿತಿ ಸದಸ್ಯ ಎಚ್.ವಿ.ರಾಜೀವ್ ತಿಳಿಸಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯು ಎಂಜಿನಿಯರಿಂಗ್ ಸಂಸ್ಥೆಯಲ್ಲಿ ಮಂಗಳ ವಾರ ಆಯೋಜಿಸಿದ್ದ ವಿಷಯಾಧಾರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಆಸಕ್ತ ತಂಡಗಳಿಗೆ ಸಂಸ್ಥೆ ರಚಿಸಲು ಅವಕಾಶ ನೀಡುವುದೇ ಸಹಕಾರಿ ಸಿದ್ಧಾಂತದ ಉದ್ದೇಶ. ಆಸಕ್ತಿಯಿಂದ ಕಟ್ಟಿ ಬಳಿಕ ಹಂತ, ಹಂತವಾಗಿ ಬೆಳೆಯುವ ಪುಟ್ಟ ಸಂಸ್ಥೆಗಳೂ ದೀರ್ಘ ಕಾಲ ದೃಢವಾಗಿ ಕೆಲಸ ಮಾಡುತ್ತವೆ. ಸಂಸ್ಥೆಯ ಕುರಿತು ಎಲ್ಲರಲ್ಲೂ ಆತ್ಮೀಯತೆಯ ಭಾವನೆ ಇರುವುದರಿಂದ ಸಂಸ್ಥೆಗಳಲ್ಲಿ ತಪ್ಪು ನಡೆದಾಗ ಮಾಹಿತಿ ನೀಡುತ್ತಾರೆ, ರಾಜ್ಯ ಸಂಸ್ಥೆಯು ಅದನ್ನು ಸರಿಪಡಿಸಿ ಜನರಿಗೆ ವಂಚನೆ ಆಗದಂತೆ ತಡೆಯುತ್ತಿದೆ’ ಎಂದರು.

‘ಹೊಸ ಸಹಕಾರಿ ಕಾಯ್ದೆ ಜಾರಿಯಾದ ಬಳಿಕ ಅದರಲ್ಲಿನ ಹೊಸತನ ತಿಳಿಸಲು ನಿರಂತರ ತರಬೇತಿ ನೀಡುತ್ತಿದ್ದೇವೆ. 59 ಆಕ್ಟ್ ಕುರಿತೂ ಮಾಹಿತಿ ಇಲ್ಲದ ಅನೇಕ ಜನರು ಇದ್ದಾರೆ. ಈ ಜಡತ್ವ ಹೋಗಬೇಕು. ಚುನಾವಣೆಗೆ ನಿಲ್ಲಲು ನಾಮಿನೇಶನ್ ಅಗತ್ಯ ಎಂಬ ಕಾನೂನು ಬಂದಿದೆ. ಇದರಿಂದ ಅನೇಕರು ದೂರ ಉಳಿಯುವ ಸಾಧ್ಯತೆ ಇದೆ. ಈ ಬಗ್ಗೆ ನ್ಯಾಯಾಲಯದಲ್ಲೂ ವಿಚಾರಣೆ ನಡೆಯುತ್ತಿದೆ. ಇಂತಹ ಸೂಕ್ಷ್ಮ ವಿಚಾರಗಳು ನಮ್ಮ ಸಿಬ್ಬಂದಿಗೆ ತಿಳಿದಿರಬೇಕು’ ಎಂದು ಹೇಳಿದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ವೃತ್ತಿಪರ ನಿರ್ದೇಶಕ ಬಿ.ಮಹದೇವ ಸ್ವಾಮಿ, ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ, ಸೌಹಾರ್ದ ಅಭಿವೃದ್ಧಿ ಅಧಿಕಾರಿ ಆರ್.ಎಸ್.ಸುರೇಶ್, ಉಡುಪಿಯ ಸಾಲಿಗ್ರಾಮದ ಗುರುನರಸಿಂಹ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಾಹಕ ಸೋಮಯಾಜಿ, ಮಂಡ್ಯ ಮತ್ತು ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಎಸ್.ಸಿ.ಭಗೀರಥ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-39-1458309466

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.