ಮೈಸೂರು: ಇಲ್ಲಿನ ಜೆಎಸ್ಎಸ್ ಆಸ್ಪತ್ರೆ ಸಮೀಪ, ಕೇಂದ್ರದ ಮಾಜಿ ಸಚಿವ ಗುರುಪಾದಸ್ವಾಮಿ ಅವರ ಮನೆಯ ಮುಂಭಾಗದ ಚರಂಡಿಗೆ ಮುಚ್ಚಿದ್ದ ಕಾಂಕ್ರೀಟ್ ಹಾಸು ಒಡೆದು ಹೋಗಿದ್ದು, ಶನಿವಾರ ಬೆಳಿಗ್ಗೆ ಹಸುವೊಂದು ಅದರೊಳಗೆ ಬಿದ್ದು ಸಿಲುಕಿಕೊಂಡಿತ್ತು.

ಹಸು ಮೇಲೆ ಬರಲಾಗದೆ ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿದ ಎಸ್. ಪ್ರಕಾಶ್ ಹಾಗೂ ಸಾರ್ವಜನಿಕರು, ನಗರಪಾಲಿಕೆ ಸಿಬ್ಬಂದಿ ಮತ್ತು ಕೆ.ಆರ್. ಸಂಚಾರ ಠಾಣೆಯ ಸಿಬ್ಬಂದಿ ಎಂ.ಸುನೀಲ್ ಜೊತೆ ಸೇರಿಕೊಂಡು ಹಸುವನ್ನು ಮೇಲೆ ಎತ್ತುವಲ್ಲಿ ಯಶಸ್ವಿಯಾದರು. ಚರಂಡಿಯ ಬಳಿ ಬ್ಯಾರಿಕೇಡ್ ಇಡಲಾಗಿದೆ.

‘ತಾತ್ಕಾಲಿಕವಾಗಿ ಇಡಲಾಗಿದೆಯಾದರೂ, ಗುಂಡಿಯನ್ನು ತಕ್ಷಣವೇ ಮುಚ್ಚಬೇಕು. ಇಲ್ಲದಿದ್ದರೆ ಪಾದಚಾರಿಗಳೂ ಗುಂಡಿಗೆ ಬಿದ್ದು, ತೊಂದರೆ ಅನುಭವಿಸುವ ಅಪಾಯವಿದೆ. ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-39-1791738967

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.