ಮೈಸೂರು: ನಗರದ ಹಳೆ ಕಟ್ಟಡ, ಕಾಂಪೌಂಡ್ಗಳು ದುರಂತಕ್ಕೆ ಕಾದಿದ್ದು, ಮಳೆಗಾಲ ಆರಂಭಕ್ಕೆ ಕೆಲವೇ ದಿನ ಬಾಕಿ ಇದ್ದರೂ ಪಾಲಿಕೆ ಮತ್ತು ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿಲ್ಲ. ವಾರದ ಹಿಂದಷ್ಟೇ ಬೆಂಗಳೂರಿನ ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಮೃತಪಟ್ಟಿದ್ದು, ಇಲ್ಲಿನ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಪಾರಂಪರಿಕ ನಗರಿಯಲ್ಲಿ ಶತಮಾನಕ್ಕೂ ಹಳೆಯದಾದ ಕಟ್ಟಡಗಳಿವೆ. ದುರಸ್ತಿಗೆ ಬಂದಿದ್ದರೂ ಸಂರಕ್ಷಿಸುವುದಿರಲಿ, ಕೊನೆಯ ಪಕ್ಷ ಮುನ್ನೆಚ್ಚರಿಕೆ ಕ್ರಮವಹಿಸಿ, ಅಪಾಯಕರ ಸ್ಥಳವೆಂದು ಘೋಷಿಸಿ, ನಾಗರಿಕರ ಸಂಚಾರವನ್ನು ನಿರ್ಬಂಧಿಸಿಲ್ಲ.

ಲಾನ್ಸ್ಡೌನ್ ಕಟ್ಟಡದ ಹಿಂಭಾಗದ ರಸ್ತೆಯು ಯಮಲೋಕದ ದಾರಿಯಂತಿದ್ದು, ಎರಡೂ ಬದಿ ಹಳೆಯ ಕಟ್ಟಡಗಳು ಪಾಳು ಸುರಿಯುತ್ತಿವೆ. ‘ಜಗನ್ಮೋಹನ ಬಂಗ್ಲೆ ರಸ್ತೆ 1ನೇ ಕ್ರಾಸ್’ ಎಂಬ ನಾಮಫಲಕವಿರುವ ರಸ್ತೆಯಲ್ಲಿ ಮಳಿಗೆಗಳು ಕಾರ್ಯಾಚರಿಸುತ್ತಿವೆ. ಅವುಗಳ ಮಾಲೀಕರು ಮತ್ತು ಬಾಡಿಗೆದಾರರಿಗೆ ನೋಟಿಸ್ ನೀಡಿ ತೆರವು ಮಾಡಲು ಮುಂದಾಗದಿರುವುದಕ್ಕೆ ಪಾರಂಪರಿಕ ತಜ್ಞರು ಹಾಗೂ ನಾಗರಿಕರಿಂದ ಆತಂಕ ವ್ಯಕ್ತವಾಗಿದೆ.

ವಿನೋಬಾ ರಸ್ತೆಯ ಶ್ರೀರಾಮಪೇಟೆಯಲ್ಲಿರುವ ಕಟ್ಟಡ ಪಾಳು ಬಿದ್ದಿದ್ದು, ಐದು ಮಳಿಗೆಗಳಲ್ಲಿ ಒಂದು ಮಳಿಗೆ ನಡೆಯುತ್ತಿದೆ. ಅಪಾಯದ ಕರೆಗಂಟೆಯಾಗಿದೆ. ದೇವರಾಜ ಮಾರುಕಟ್ಟೆಗೆ ಹೋಗಲು ಫುಟ್ಪಾತ್ ಅನ್ನು ಬಳಕೆ ಮಾಡುತ್ತಿದ್ದಾರೆ. ಮಳೆ ಬಂದರೆ ಜನರು ನಿಲ್ಲುತ್ತಿದ್ದಾರೆ. ಜಡಿಮಳೆಗೆ ಉರುಳುವ ಭೀತಿ ಮೂಡಿದ್ದರೂ ಇದುವರೆಗೂ ಪಾಲಿಕೆಯು ಇತ್ತ ತಲೆ ಹಾಕಿಲ್ಲ.

ದೇವರಾಜ ಮಾರುಕಟ್ಟೆ, ಲ್ಯಾನ್ಸ್ಡೌನ್ ಕಟ್ಟಡ, ಮಂಡಿ ಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆ ಸೇರಿದಂತೆ 100ಕ್ಕೂ ಹೆಚ್ಚು ಕಟ್ಟಡಗಳು ಶಿಥಿಲವಾಗಿದ್ದು, ಕಾಯಕಲ್ಪಕ್ಕೆ ದಶಕಗಳಿಂದಲೂ ಕಾದಿವೆ. ಹಲವು ಅರಮನೆಗಳ ವಿವಿಧ ಭಾಗಗಳು ಕುಸಿಯುವ ಹಂತದಲ್ಲಿವೆ.

ಮಂಡಿ ಮಾರುಕಟ್ಟೆಯ ಮಳಿಗೆಗಳ ಹೆಂಚುಗಳು ಒಡೆದಿವೆ. ಗೋಡೆಗಳು ಚಕ್ಕೆಗಳಂತೆ ಏಳುತ್ತಿದ್ದು, ಮೂರ್ನಾಲ್ಕು ಮಳೆಗಾಲ ಬಂದರೆ ಕುಸಿಯುವ ಆತಂಕ ವ್ಯಾಪಾರಿಗಳದು. ಅಗ್ರಹಾರದ ವಾಣಿವಿಲಾಸ ಮಾರುಕಟ್ಟೆ ಶಿಥಿಲಾವಸ್ಥೆಯಲ್ಲಿದೆ. ಮಳಿಗೆಗಳ ಸೂರು ಕಳಚುತ್ತಿದೆ. ಪ್ರವೇಶದ್ವಾರ ಬೀಳುವ ಹಂತದಲ್ಲಿದ್ದರಿಂದ ಎರಡು ಕಡೆ ಮುಚ್ಚಲಾಗಿದೆ. ಬಾಡಿಗೆದಾರರು ಜೀವಭಯದಲ್ಲಿಯೇ ವ್ಯಾಪಾರ ನಡೆಸಬೇಕಿದೆ. ದೇವರಾಜ ಮಾರುಕಟ್ಟೆಯ ಉತ್ತರದ್ವಾರ 2016ರಲ್ಲಿಯೇ ಬಿದ್ದಿದ್ದರೂ ಅದರ ಮರು ನಿರ್ಮಾಣವಾಗಿಲ್ಲ. ಲ್ಯಾನ್ಸ್ಡೌನ್ ಕಟ್ಟಡ ಮರು ನಿರ್ಮಾಣ ದಶಕದಿಂದಲೂ ನನೆಗುದಿಗೆ ಬಿದ್ದಿದೆ.

ಈ ಕುರಿತ ಪ್ರತಿಕ್ರಿಯೆಗೆ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಅವರಿಗೆ ಕರೆ ಮಾಡಿದ್ದರೂ ಸ್ವೀಕರಿಸಲಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-39-1810558989

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.