‘ಸೆಸ್ಕ್’ ತಾಂತ್ರಿಕ ನಿರ್ದೇಶಕ ಮುನಿಗೋಪಾಲ್ ರಾಜು ಮಾತನಾಡಿ, ‘ಈ ಬಾರಿ ದೀಪಾಲಂಕಾರಕ್ಕೆ ವಿಶೇಷ ಮೆರಗು ನೀಡುವ ನಿಟ್ಟಿನಲ್ಲಿ ಚಿಂತನೆ ನಡೆದಿದ್ದು, ನಿರೀಕ್ಷೆಯೂ ಹೆಚ್ಚಿದೆ. ಹೊಸತನದ ಜತೆಗೆ ಗುಣಮಟ್ಟ, ಸುರಕ್ಷತೆಗೂ ಆದ್ಯತೆ ನೀಡಬೇಕಿದೆ. ಆದ್ದರಿಂದ ಗುಣಮಟ್ಟದ ದೀಪಗಳನ್ನು ಬಳಸುವ ಹಾಗೂ ಉತ್ತಮ ಕೆಲಸ ಮಾಡುವ ಅಗತ್ಯವಿದೆ. ಆರಂಭದ 3-4 ದಿನಗಳ ಮೊದಲೇ ಪರಿಪೂರ್ಣವಾದ ಲೈಟಿಂಗ್ ಮಾಡಿ, ಟ್ರಯಲ್ ನಡೆಸಬೇಕು’ ಎಂದು ತಿಳಿಸಿದರು.