ಮೈಸೂರು: ಸೊಸೆಯನ್ನು ಕೊಲೆ ಮಾಡಿದ ಪ್ರಕರಣದ ಅಪರಾಧಿ ಗಂಟಯ್ಯನಿಗೆ ಇಲ್ಲಿನ 5ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

ಗಂಟಯ್ಯನ ಹಿರಿಯ ಮಗ ಚಿಕ್ಕಲೂರಯ್ಯ ಅವರನ್ನು ಕವಿತಾ ಮದುವೆಯಾಗಿದ್ದರು. ಆಕೆ ಎಟಿಎಂಇ ಕಾಲೇಜ್ನಲ್ಲಿ ಸ್ಟೋರ್ ಕೀಪರ್ ಕೆಲಸ ಮಾಡುತ್ತಿದ್ದರು. ಆಕೆಯೊಂದಿಗೆ ಮಾವಗಂಟಯ್ಯ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಆಕೆಗೆ ಮಹೇಶ ಎಂಬಾತನೊಂದಿಗೆ ಸಂಬಂಧ ಇದೆ ಎಂದು ಗುಂಟಯ್ಯ ಕಿರುಕುಳ ನೀಡುತ್ತಿದ್ದ. 2023ರ ಜುಲೈ10ರಂದು ರಾತ್ರಿ ಆಕೆ ಅನೈತಿಕ ಸಂಬಂಧಕ್ಕೆ ಸಹಕರಿಸಲಿಲ್ಲ ಎಂದು ಮುಂಜಾನೆ ಸುತ್ತಿಗೆಯಿಂದ ಆಕೆಯ ತಲೆ, ಹಣೆಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ. ಕವಿತಾ ಮೃತಪಟ್ಟಿದ್ದರು.

ಈ ಬಗ್ಗೆ ವರುಣಾ ಠಾಣೆಯ ಆಗಿನ ಇನ್ಸ್ಪೆಕ್ಟರ್ ಸ್ವರ್ಣ ಜಿ.ಎಸ್. ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ರೂಪಾ ಕೆ.ಎನ್. ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ₹ 1.50 ಲಕ್ಷ ದಂಡ ವಿಧಿಸಿದ್ದು, ವಿಚಾರಣೆ ವೇಳೆ ಸುಳ್ಳು ಸಾಕ್ಷಿ ನುಡಿದ ಸರ್ಕಾರಿ ಅಧಿಕಾರಿ ಮೈಕಲ್ ಮ್ಯಾಥ್ಯೂ ವಿರುದ್ಧ ಇಲಾಖಾ ವಿಚಾರಣೆ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ಬಿ.ಇ.ಯೋಗೇಶ್ವರ್ ವಾದ ಮಂಡಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-39-664396479

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.