ಎಚ್.ಡಿ.ಕೋಟೆ: ತಾಲ್ಲೂಕಿನ ಡಿ.ಬಿ. ಕುಪ್ಪೆ ಗ್ರಾಮ ಪಂಚಾಯಿತಿ ಜನಸ್ಪಂದನ ಕಾರ್ಯಕ್ರಮ, ವ್ಯಾಪ್ತಿಯ ಹಾಡಿಗಳಲ್ಲಿ ₹ 35 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಅನಿಲ್ ಚಿಕ್ಕಮಾದು ಚಾಲನೆ ನೀಡಿದರು.

ಜನಸ್ಪಂದನ ದಲ್ಲಿ ಸ್ಥಳೀಯರು, ಅರಣ್ಯ ಹಕ್ಕುಪತ್ರ ವಿತರಣೆ ವಿಳಂಬ, ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಅಭಾವ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿರುದಾಗಿ ಅಳಲು ತೋಡಿಕೊಂಡರು.

ಡಿ.ಬಿ.ಕುಪ್ಪೆ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ಗುತ್ತಿಗೆ ಆಧಾರದಲ್ಲಿ ಒಬ್ಬರು ವೈದ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೊರ ರೋಗಿಗಳ ಸಂಖ್ಯೆ ಜಾಸ್ತಿ ಇರುವುದರಿಂದ ಸ್ಟಾಫ್ನರ್ಸ್ ನೇಮಿಸಬೇಕು. ಹೆರಿಗೆ ಆಸ್ಪತ್ರೆ ಇಲ್ಲಿಯೇ ನಿರ್ಮಾಣ ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದರು. ಕಸ ವಿಲೇವಾರಿ ತ್ಯಾಜ್ಯ ಘಟಕ ನಿರ್ಮಾಣ, ಪಿಯು ಕಾಲೇಜು ಪ್ರಾರಂಭ, ಮದ್ಯಪಾನ ತಡೆಗೆ ಕಟ್ಟುನಿಟ್ಟಿನ ಕ್ರಮ, ರೈತರಿಗೆ ಬಿತ್ತನೆ ಬೀಜ ವಿತರಿಸಬೇಕು, ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸ್ಥಳೀಯರು ಶಾಸಕರ ಮುಂದಿಟ್ಟರು.

ಮೈಮೂಲ್ ಅಧ್ಯಕ್ಷ ಈರೇಗೌಡ, ಜಿಲ್ಲಾ ಪಂಶೀಲ್ದಾರ್ ಶ್ರೀನಿವಾಸ್, ಇಓ ಧರಣೇಶ್, ಎಸಿಎಫ್ ಮಧು, ಆರ್ ಎಫ್ ಒ ಸಿದ್ದರಾಜು, ತಾಲೂಕು ಆರೋಗ್ಯಧಿಕಾರಿ ರವಿಕುಮಾರ್, ಇನ್ಸ್ಪೆಕ್ಟರ್ ಚಂದ್ರಹಾಸ್, ಇ.ಇ. ರಮೇಶ್, ಅಬಕಾರಿ ಇನ್ಸ್ಪೆಕ್ಟರ್ ಶಿವರಾಜ್, ಸಿದ್ದರಾಮೇಗೌಡ, ಸಿಡಿಪಿಒ ದೀಪ, ಶಶಿಕಲಾ, ಪರಿಶಿಷ್ಟ ವರ್ಗ ಕಲ್ಯಾಣಾಧಿಕಾರಿ ಮಹೇಶ್, ನಾಗರಾಜು, ಸುಪ್ರೀತ್, ತಿರುಪತಿ, ಆದಿವಾಸಿ ಮುಖಂಡ ರಮೇಶ್, ಚೆಲುವೇಗೌಡ, ಅಭಿಲಾಶ್, ಬಾಲಯ್ಯ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-38-1006894994

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.