ಮೈಸೂರು: ‘ಪಂಡಿತ್ ದೀನ್ದಯಾಳ್ ಉಪಾಧ್ಯಾಯರು ಪ್ರತಿಪಾದಿಸಿದ ತತ್ವಗಳು ಭಾರತೀಯ ಸಂಸ್ಕೃತಿಯ ಮತ್ತು ಜೀವನ ಪದ್ಧತಿಯ ಮೂಲಾಧಾರವಾಗಿದ್ದು, ಸಾರ್ವಕಾಲಿಕವಾಗಿವೆ. ಎಲ್ಲರೂ ಒಂದೇ ಎನ್ನುವ ಅವರ ಏಕಾತ್ಮ ಮಾನವ ದರ್ಶನ ತತ್ವವು ಅಧ್ಯಾತ್ಮ ಮತ್ತು ಭೌತಿಕ ಜೀವನದ ಸಮನ್ವಯವಾಗಿದೆ’ ಎಂದು ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಪ್ರತಿಪಾದಿಸಿದರು.

ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ‘ಪ್ರಜ್ಞಾ ಪ್ರವಾಹ’ ಮತ್ತು ‘ಶ್ಯಾಮ್ ಪ್ರಸಾದ್ ಮುಖರ್ಜಿ ಸಂಶೋಧನಾ ಪ್ರತಿಷ್ಠಾನ’ವು ಆಯೋಜಿಸಿದ್ದ 3 ದಿನಗಳ ‘ಏಕಾತ್ಮ ಮಾನವ ದರ್ಶನ– ಭಾರತದ ವಿಶ್ವದೃಷ್ಟಿ’ ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

‘ಏಕಾತ್ಮ ಮಾನವ ದರ್ಶನವು ಭಾರತೀಯ ಸಂಸ್ಕೃತಿಯ ಜೀವನ ದರ್ಶನವಾಗಿದೆ. ವ್ಯಕ್ತಿ, ಸಮಾಜ, ದೇಶ ಮತ್ತು ಪ್ರಕೃತಿಯ ನಡುವೆ ಸಾಮರಸ್ಯವನ್ನು ಪ್ರತಿಪಾದಿಸುವ ಇದು ವಿಶ್ವ ಕಲ್ಯಾಣವನ್ನು ಬಯಸುತ್ತದೆ. ಅಂತ್ಯೋದಯದ ಗುರಿಯನ್ನು ಹೊಂದಿದೆ. ಸ್ವದೇಶಿ ಆಧಾರಿತ ಅರ್ಥವ್ಯವಸ್ಥೆಯನ್ನು ಬಲಪಡಿಸುತ್ತದೆ. ಆರ್ಥಿಕತೆಯಲ್ಲದೇ ಸರ್ವಾಂಗೀಣ ವಿಕಾಸವನ್ನು ಬಯಸುತ್ತದೆ’ ಎಂದರು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ದೀನದಯಾಳರ ಸಂದೇಶಗಳನ್ನು ಅನುಷ್ಠಾನಗೊಳಿಸುವ ಕಾರ್ಯ ದೇಶದೆಲ್ಲೆಡೆ ನಡೆಯಬೇಕು. ರಾಷ್ಟ್ರಧರ್ಮ, ಸ್ವದೇಶಿ ಪತ್ರಿಕೆ ಆರಂಭಿಸಿದ ಅವರು ಏಕಾತ್ಮ ಮಾನವ ದರ್ಶನವನ್ನು ಪ್ರಬಲವಾಗಿ ಪ್ರತಿಪಾದಿಸಿದರು. ಸಾಮೂಹಿಕವಾಗಿ ಬದುಕಲು ಕುಟುಂಬಕ್ಕೆ ಸಮಾಜ, ರಾಷ್ಟ್ರ ಮುಖ್ಯ. ಮನುಷ್ಯ ಇಡೀ ಬ್ರಹ್ಮಾಂಡದ ಅವಿಭಾಜ್ಯ ಎಂದು ಭಾವಿಸಿದರೆ ಸಂಘರ್ಷಗಳಿರುವುದಿಲ್ಲ ಎಂಬುದು ಅವರ ನಂಬಿಕೆ ಆಗಿತ್ತು’ ಎಂದು ಸ್ಮರಿಸಿದರು.

ವರ್ಚ್ಯುವಲ್ನಲ್ಲಿ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಮಾತನಾಡಿದರು. ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಪ್ರಜ್ಞಾ ಪ್ರವಾಹ ಸಂಸ್ಥೆಯ ದಕ್ಷಿಣ ಪ್ರಾಂತದ ಸಂಚಾಲಕ ಪ್ರದೀಪ್ ಭಾರದ್ವಾಜ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-39-874752484

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.