ಮೈಸೂರು: ‘ಪ್ರತಿಯೊಬ್ಬ ವಚನಕಾರರು ಕಾಯಕದ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಜೊತೆಗೆ ವಚನಗಳ ಕಾಣಿಕೆ ನೀಡಿದ್ದಾರೆ’ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕಲಾಮಂದಿರದಲ್ಲಿ ಸೋಮವಾರ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇತಿಹಾಸದಲ್ಲಿ ದೇವರ ದಾಸಿಮಯ್ಯ (ಜೇಡರ ದಾಸಿಮಯ್ಯ), ಶಂಕರ ದಾಸಿಮಯ್ಯ ಹಾಗೂ ಶಿವ ದಾಸಿಮಯ್ಯ ಎಂಬ ಹೆಸರುಗಳಲ್ಲಿ ಇವರನ್ನು ಕಾಣಬಹುದು. ದೇವರ ದಾಸಿಮಯ್ಯನವರು ಬಟ್ಟೆ ನೇಯುವ, ಶಂಕರ ದಾಸಿಮಯ್ಯನವರು ಬಣ್ಣ ಹಾಕುವ ಮತ್ತು ಶಿವ ದಾಸಿಮಯ್ಯ ಬಟ್ಟೆ ಹೊಲಿಯುವ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ದೇವರ ದಾಸಿಮಯ್ಯ ಅವರನ್ನು ಚಾಲುಕ್ಯ ದೊರೆ ಜಯಸಿಂಹನ ಮಹಾರಾಣಿಯಾದ ಸುಗ್ಗಲಾದೇವಿ ಅವರಿಗೆ ಶಿವನ ಅನುಗ್ರಹವನ್ನು ಮಾಡಿದ ಗುರುಗಳೆಂದು ಕರೆಯುತ್ತೇವೆ’ ಎಂದರು.

‘ಈ ಜಯಂತಿಗಳ ಆಚರಣೆ ಮೂಲಕ ನಮ್ಮ ಹಿರಿಯರು ಬದುಕಿದ ಹಾದಿಯನ್ನು ನೆನಪಿಸಿಕೊಂಡು ನಮ್ಮ ವರ್ತಮಾನ ಬದುಕನ್ನು ಎಚ್ಚರಿಸುವ ಪ್ರಯತ್ನವನ್ನು ಮಾಡೋಣ’ ಎಂದು ಆಶಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಡಾ. ಡಿ. ತಿಮ್ಮಯ್ಯ, ‘ದೇವರ ದಾಸಿಮಯ್ಯ ಸಮಾಜಕ್ಕೆ ಕಾಯಕ ನಿಷ್ಠೆ ಮತ್ತು ಸಮಾನತೆಯ ತತ್ವ ಸಾರಿದ ಮಹಾನ್ ಶರಣರು’ ಎಂದು ಬಣ್ಣಿಸಿದರು.

‘ಬಸವಣ್ಣನವರಿಗಿಂತ ಹಿರಿಯರಾದ ದಾಸಿಮಯ್ಯ ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಒಂದು ಕಡೆ ದೈವಭಕ್ತಿ ಹಾಗೂ ಶ್ರದ್ಧೆಯಿದ್ದರೆ, ಮತ್ತೊಂದೆಡೆ ಕಾಯಕದಲ್ಲಿ (ನೇಯ್ಗೆ) ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡ ಶರಣ ಅವರು’ ಎಂದು ಬಣ್ಣಿಸಿದರು.

‘ಸಮ ಸಮಾಜದ ನಿರ್ಮಾಣದಲ್ಲಿ ನೇಕಾರ, ಕುಂಬಾರ ಹಾಗೂ ಚಮ್ಮಾರರಂತಹ ಕಾಯಕ ವರ್ಗಗಳ ಪಾತ್ರ ದೊಡ್ಡದು. ಕಾಯಕ ಶರಣರು ಕೇವಲ ತಮ್ಮ ಸ್ವಾರ್ಥಕ್ಕಾಗಿ ಬದುಕದೆ, ಸಮಾಜದ ಏಕತೆ ಮತ್ತು ಸಮಗ್ರತೆಗಾಗಿ ಶ್ರಮಿಸಿದ್ದಾರೆ. ಇಂದು ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದರೆ, ಅದರಲ್ಲಿ ಈ ಶರಣರ ತತ್ವಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ’ ಎಂದರು.

ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಸ್ವಾಮಿ ಮಹಮೇದಾನಂದ ಆಶೀರ್ವಚನ ನೀಡಿ, ‘ನಾವು ಮಾಡುವ ಕಾಯಕ ಯಾವಾಗಲೂ ಶಿವನು ಮೆಚ್ಚುವಂತಿರಬೇಕು. ಕೇವಲ ಸುಂದರವಾದ ಬಟ್ಟೆ ಧರಿಸುವುದರಿಂದ ಮಾನ ಉಳಿಯುವುದಿಲ್ಲ, ನಮ್ಮ ಚಾರಿತ್ರ್ಯದಿಂದ ಅದು ಸಾಧ್ಯ. ಆಂತರ್ಯದ ಶುದ್ಧಿಯಿಲ್ಲದ ಬಾಹ್ಯ ಅಲಂಕಾರ ವ್ಯರ್ಥ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ಕರ್ನಾಟಕ ರಾಜ್ಯ ನೇಕಾರರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಸೋಮಶೇಖರ್, ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ, ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಗೌರವ ಅಧ್ಯಕ್ಷ ಆರ್. ಮೂರ್ತಿ, ಅಧ್ಯಕ್ಷ ಎಸ್. ದಿನೇಶ್ ಯಜಮಾನ್, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಕೆ.ಎನ್. ಸುಬ್ರಹ್ಮಣ್ಯ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಂಜುಳಾ, ಕಾಂಗ್ರೆಸ್ ಮುಖಂಡರಾದ ಎಚ್.ವಿ. ರಾಜೀವ್, ಶಿವಣ್ಣ ಪಾಲ್ಗೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-39-1942534877

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.