ಮೈಸೂರು: ಪಾರಂಪರಿಕ ನಗರಿಯ ಎರಡು ಹೃದಯಗಳಂತಿದ್ದ ಲ್ಯಾನ್ಸ್ಡೌನ್ ಹಾಗೂ ದೇವರಾಜ ಮಾರುಕಟ್ಟೆ ಕಟ್ಟಡಗಳಲ್ಲಿ ಲ್ಯಾನ್ಸ್ಡೌನ್ ಭಗ್ನಹೃದಯವಾದರೆ, ‘ದೇವರಾಜ’ ಅರ್ಧಜೀವವಾಗಿದೆ.

ನಗರದ ಆರ್ಥಿಕತೆಯ ಚಾಲಕ ಶಕ್ತಿಯಾಗಿದ್ದ ಇವೆರಡರ ಸೌಂದರ್ಯ ಹಾಗೂ ಜೀವಂತಿಕೆಗೆ ಮಾರುಹೋದವರಿಲ್ಲ. ಅರಮನೆಯಷ್ಟೇ ದೇವರಾಜ ಮಾರುಕಟ್ಟೆಗೂ ಪ್ರವಾಸಿಗರು ಲಗ್ಗೆ ಇಡುತ್ತಿದ್ದರು. ಪಾರಂಪರಿಕ ಕಟ್ಟಡ ಗಳಲ್ಲೇ ಅದ್ಭುತ ಸೃಷ್ಟಿಯಾಗಿರುವ ಇದರೊಂದಿಗೆ ಜಿಲ್ಲೆಯ ಲಕ್ಷಾಂತರ ಕುಟುಂಬಗಳ ಜೀವನವೂ ನಿಂತಿದೆ.

ಶಿಥಿಲದತ್ತ ಸಾಗಿರುವ ಕಟ್ಟಡದ ಉಳಿವಿಗೆ ದೇಶದ ಸರ್ವೋಚ್ಛ ನ್ಯಾಯಾಲಯವು ಮಧ್ಯ ಪ್ರವೇಶಿಸಿರುವುದು ನಗರದ ಪಾರಂಪರಿಕ ಕಟ್ಟಡಗಳ ಉಳಿವಿಗೀಗ ಆಶಾಭಾವ ಮೂಡಿಸಿದೆ.

ಪರಿಶೀಲನೆ: ದೆಹಲಿಯ ‘ಇನ್ಟ್ಯಾಕ್’ (ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್) ಸಂಸ್ಥೆಯು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕಟ್ಟಡದ ಸುಸ್ಥಿತಿಯನ್ನು ಪರಿಶೀಲನೆ ಮಾಡಿದ್ದು, ಕಟ್ಟಡದ ಗೋಡೆ, ನೆಲಹಾಸು, ಮೆಟ್ಟಿಲು, ತಾರಸಿಯ ವಿಡಿಯೊ ಮಾಡಿಕೊಂಡು ವರದಿ ಸಲ್ಲಿಸಿದೆ. ಇದರೊಂದಿಗೆ ಭಾರತೀಯ ಪುರಾತತ್ವ ಇಲಾಖೆಯ ತಜ್ಞರ ತಂಡವೂ ಪರಿಶೀಲನೆ ನಡೆಸಿತ್ತು. ಎರಡೂ ವರದಿ ಆಧರಿಸಿ ಜುಲೈ 30ರಂದು ಅಂತಿಮ ತೀರ್ಪು ನೀಡಲಿದೆ. ಈಗ ನೀಡಿರುವ ಮಧ್ಯಂತರ ತೀರ್ಪಿನಲ್ಲಿ ಇಲ್ಲಿನ ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು ಅವರ ಸಲಹೆಯನ್ನು ಉಲ್ಲೇಖಿಸಿರುವುದು ವಿಶೇಷ.

ಶಿಥಿಲದತ್ತ ಕಟ್ಟಡ: ಚಿಕ್ಕಗಡಿಯಾರ ದಿಂದ ಧನ್ವಂತರಿ ರಸ್ತೆವರೆಗೆ ಸುಮಾರು 1 ಕಿ.ಮೀ ಸುತ್ತಳತೆ ಹೊಂದಿರುವ ಮಾರುಕಟ್ಟೆಯು ಎಂಜಿನಿಯರಿಂಗ್ ವಿಸ್ಮಯಕ್ಕೆ ಸಾಕ್ಷಿ. 1886ರಲ್ಲಿ ಕಲ್ಯಾಣಿ ಮೈದಾನದ ಪಶ್ಚಿಮ ಭಾಗದಲ್ಲಿ 3.67 ಎಕರೆ ವಿಸ್ತೀರ್ಣದಲ್ಲಿ ಇಂಡೊ– ಸಾರ್ಸನಿಕ್ ಶೈಲಿಯಲ್ಲಿ 10ನೇ ಚಾಮರಾಜ ಒಡೆಯರ್ ಅವರು ನಿರ್ಮಿಸಿದ್ದರು. 5 ವರ್ಷದ ಅವಧಿಯಲ್ಲಿ ಪೂರ್ಣಗೊಂಡ ಮಾರುಕಟ್ಟೆಯು ದೊಡ್ಡದಾದ್ದರಿಂದ, ಮೈಸೂರು ರಾಜ್ಯವನ್ನು ತಮಿಳುನಾಡಿನ ತಿರುಚಿನಾಪಳ್ಳಿವರೆಗೆ ವಿಸ್ತರಿಸಿದ್ದ ‘ದೊಡ್ಡ ದೇವರಾಜ ಒಡೆಯರ್’ ಅವರ ಹೆಸರನ್ನು ಇಡಲಾಗಿತ್ತು. ಈ ಮಾರುಕಟ್ಟೆಯ ಸುತ್ತಲ ಪ್ರದೇಶಕ್ಕೆ ದೇವರಾಜ ಮೊಹಲ್ಲಾ ಎಂಬ ಹೆಸರೂ ಬಂದಿತು.

ಕೆಡವಲಾಯಿತು: ಮಾರುಕಟ್ಟೆಯ ಉತ್ತರ ದ್ವಾರವನ್ನು ರಾಜಕಾರಣಿಗಳ ಹುನ್ನಾರದಿಂದ 2016ರಲ್ಲಿ ಕೆಡವಲಾಯಿತು. 8 ಮಳಿಗೆಗಳು ನೆಲಸಮಗೊಂಡವು. ಅಲ್ಲಿಂದ ಅರ್ಧ ಭಾಗದವರೆಗೂ ಶಿಥಿಲವಾಗುತ್ತಲೇ ಇದ್ದರೂ, ಕಾಯಕಲ್ಪಕ್ಕೆ ಮುಂದಾಗಿಲ್ಲ.

ಸ್ವಚ್ಛತೆ ಮರೀಚಿಕೆ: ‘ಆವರಣದೊಳಗೆ ಪ್ರವೇಶಿಸುತ್ತಿದ್ದಂತೆ ಹೂ ಗಂಧದ ಪರಿಮಳ ಹಬ್ಬಿದ್ದರೂ, ಕಸ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಕೆಲ ದಶಕದ ಹಿಂದಿನವರೆಗೂ ಸ್ವಚ್ಛತೆ ಕಾಪಾಡಲಾಗುತ್ತಿತ್ತು. ಉತ್ತರ ಭಾಗದ ದ್ವಾರದಲ್ಲಿ ನೀರನ್ನು ಹರಿಬಿಟ್ಟು ಮಾರ್ಬಲ್ ಕಲ್ಲುಹಾಸನ್ನು ಸ್ವಚ್ಛಗೊಳಿಸ ಲಾಗುತ್ತಿತ್ತು. ಕೆಲವೇ ನಿಮಿಷದಲ್ಲಿ ಒಂದು ಹನಿ ನೀರು ಅಂಗಳದಲ್ಲಿ ನಿಲ್ಲುತ್ತಿರಲಿಲ್ಲ. ಅಂತ ಒಳಚರಂಡಿ ವ್ಯವಸ್ಥೆ ಇತ್ತು. ಈಗ ನಿರ್ಲಕ್ಷ್ಯ ಮಾಡಲಾಗಿದೆ’ ಎನ್ನುತ್ತಾರೆ ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-39-223521612

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.