ಮೈಸೂರು: ‘ನಗರದ ದೇವರಾಜ ಮಾರುಕಟ್ಟೆ ಸಂಪೂರ್ಣ ಪಾರಂಪರಿಕ ಕಟ್ಟಡವಲ್ಲ’ ಎಂದು ಮಾಜಿ ಮೇಯರ್ ಎಸ್. ಸಂದೇಶ್ ಸ್ವಾಮಿ ಪ್ರತಿಪಾದಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಸುಮಾರು ಏಳು ಎಕರೆ ವಿಸ್ತೀರ್ಣ ಹೊಂದಿರುವ ಈ ಮಾರುಕಟ್ಟೆಯಲ್ಲಿ ಸುತ್ತಲೂ ಹದಿನೈದು ಅಡಿ ಅಳತೆಯಲ್ಲಿ ಚೌಕಕಾರವಾಗಿ ನಿರ್ಮಿಸಿ ರುವ ಕಟ್ಟಡ ಮಾತ್ರ ಪಾರಂಪರಿಕ ಸೌಧವಾಗಿದೆ. ಅದರ ಮಧ್ಯ ಭಾಗದ ಲ್ಲಿರುವ ಸುಮಾರು ಐದು ಎಕರೆ ವಿಸ್ತೀರ್ಣದ ಕಲ್ನಾರ್ ಶೀಟ್ ಕಟ್ಟಡವು ಸಾಮಾನ್ಯವಾದುದು’ ಎಂದು ತಿಳಿಸಿದ್ದಾರೆ.

‘ಈ ಜಾಗದಲ್ಲಿ, ನಾನು ಮೇಯರ್ ಹಾಗೂ ಕೆ.ಎಸ್. ರಾಯ್ಕರ್ ಆಯುಕ್ತರಾಗಿದ್ದಾಗ ತಲಾ ಎರಡಂತಸ್ತಿನ ವಾಹನ ನಿಲ್ದಾಣ ತಾಣ ಹಾಗೂ ಮಳಿಗೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಆದರೆ, ಅನುಮತಿ ಸಿಗಲಿಲ್ಲ’ ಎಂದು ಹೇಳಿದ್ದಾರೆ.

‘ಇಲ್ಲಿ ಅಧಿಕೃತವಾಗಿ 750–800 ವ್ಯಾಪಾರಿಗಳಿದ್ದಾರೆ. ಕೆಲವರು ಮಳಿಗೆಯನ್ನು ಪರಭಾರೆ ಮಾಡಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿವೆ’ ಎಂದು ಆರೋಪಿಸಿದ್ದಾರೆ.

‘ದುರಸ್ತಿಗೆ ಅನುದಾನ ಒದಗಿಸು ವಂತೆ ಸಂಸದ ಯದುವೀರ್ ಅವರು ಮುಖ್ಯಮಂತ್ರಿ ಅವರನ್ನು ಕೋರಿದ್ದಾರೆ. ಮೈಸೂರಿನವರೇ ಆದ ಸಿದ್ದರಾಮಯ್ಯ ಅವರು ಕಾಳಜಿ ವಹಿಸಿ ನಗರದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಮುಂದಾಗಬೇಕು’ ಎಂದು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-39-1947145545

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.