ಮೈಸೂರು: ದೇವರಾಜ ಮಾರುಕಟ್ಟೆಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರನ್ನು ದೇವರಾಜ ಮಾರುಕಟ್ಟೆ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.

ಬಳಿಕ ಮಾತನಾಡಿದ ಅವರು, ‘ದೇವರಾಜ ಮಾರುಕಟ್ಟೆಯನ್ನು ಪುನರುಜ್ಜೀವನ ಮಾಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿರುವುದು ಸ್ವಾಗತಾರ್ಹ. ಈ ನಿರ್ಧಾರಕ್ಕೆ ಸರ್ಕಾರವು ಸಕಾರಾತ್ಮವಾಗಿ ಸ್ಪಂದಿಸಬೇಕು. ನ್ಯಾಯಾಲಯದಲ್ಲಿ ಈ ಬಗ್ಗೆ ಮತ್ತೆ ಮುಂದುವರೆದು ವ್ಯಾಪಾರಿಗಳಿಗೆ ಸಮಸ್ಯೆ ಮಾಡಬಾರದು’ ಎಂದರು.

‘ಈ ಕಟ್ಟಡ ಹಾಗೂ ಲ್ಯಾನ್ಸ್ಡೌನ್ ಕಟ್ಟಡದ ನವೀಕರಣಕ್ಕೆ ಕ್ಯಾಬಿನೆಟ್ನಲ್ಲಿ ಸರ್ಕಾರ ಮೀಸಲಿಟ್ಟುರುವ ಹಣವನ್ನು ಪುನರುಜ್ಜೀವನಕ್ಕೆ ಬಳಸಬೇಕು. ಈ ಬಗ್ಗೆ ಮುಖ್ಯಮಂತ್ರಿಗೂ ಪತ್ರ ಬರೆದು ಮನವರಿಕೆ ಮಾಡಿದ್ದೇವೆ. ಕೆಲಸದ ವೇಳೆ ಒಂದು ಭಾಗ ಬಿಟ್ಟುಕೊಟ್ಟು ಸಹಕಾರ ನೀಡುವುದಾಗಿ ಮಾರಾಟಗಾರರು ತಿಳಿಸಿದ್ದಾರೆ’ ಎಂದು ಹೇಳಿದರು.

‘2005 ರಿಂದ ಮಾರಾಟಗಾರರು ಹಾಗೂ ಸರ್ಕಾರದ ನಡುವೆ ಹೋರಾಟ ನಡೆಯುತ್ತಿದೆ. ಅಂದೇ ಪುನರುಜ್ಜೀವನ ಮಾಡುತ್ತಿದ್ದರೆ ಇಂದು ಕಟ್ಟಡ ಶಿಥಿಲವಾಗುತ್ತಿರಲಿಲ್ಲ. ಆದರೆ ಅನೇಕರು ಶಾಮೀಲಾಗಿ ಇದನ್ನು ಒಡೆದು ಹೊಸತಾಗಿ ಕಟ್ಟಲೇಬೇಕು ಎಂಬ ನಿಟ್ಟಿನಲ್ಲಿ ಮುಂದುವರೆದಿರುವುದರಿಂದ ಹೀಗಾಗಿದೆ. ಈಗಲಾದರೂ ಆಧುನಿಕ ಕಾಲದ ಸವಲತ್ತುಗಳನ್ನು ಒದಗಿಸಿಕೊಂಡು ಪುನರುಜ್ಜೀವನ ಮಾಡಬೇಕು. ಗ್ರೇಟರ್ ಮೈಸೂರು ಯೋಜನೆಯಲ್ಲಿ ನಗರದ ಇನ್ನುಳಿದ ಮಾರುಕಟ್ಟೆಗಳನ್ನೂ ಅಭಿವೃದ್ಧಿಪಡಿಸಬೇಕು’ ಎಂದು ಒತ್ತಾಯಿಸಿದರು.

ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘದ ಅಧ್ಯಕ್ಷ ಎಸ್.ಮಹದೇವು, ವಿಶ್ವೇಶ್ವರಯ್ಯ ಕಟ್ಟಡದ ಅಧ್ಯಕ್ಷ ಮಹಮ್ಮದ್ ಇಬ್ರಾಹಿಂ, ಮಂಡಿ ಮಾರುಕಟ್ಟೆ ಬಾಡಿಗೆದಾರರ ಸಂಘದ ಅಧಕ್ಷ ಕೆ. ಪ್ರೇಮ್ ಕುಮಾರ್, ಪಿ. ಎಂ. ಸುಬ್ರಹ್ಮಣಿರಾವ್, ಹೀರಾಚಂದ್, ಪಿ.ಎನ್. ಸುಬ್ರಹ್ಮಣ್ಯ, ಹೂವಿನ ವರ್ತಕರ ಸಂಘದ ಅಧ್ಯಕ್ಷ ಎನ್ ಮಂಜುನಾಥ್, ನಾಗೇಂದ್ರ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-39-1711639716

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.