ಮೈಸೂರು: ‘ಜನರ ಬಳಿ ತಲುಪುವುದೇ ನಿಜವಾದ ಅಭಿವೃದ್ಧಿ ಎಂದು ಪ್ರೊ.ಕಾರ್ತಿಕ್ ಮುರಳೀಧರನ್ ಪ್ರತಿಪಾದಿಸಿದ್ದರು’ ಎಂದು ಪ್ರೊ.ಟಿ.ಎಸ್. ವೇಣುಗೋಪಾಲ್ ತಿಳಿಸಿದರು.

ಕಲಾಸುರುಚಿ ಕುತೂಹಲಿ ಕನ್ನಡ ಮತ್ತು ದಿ ಅಕಾಡೆಮಿ ಟ್ರಸ್ಟ್ ಸುರುಚಿ ರಂಗಮನೆಯಲ್ಲಿ ಶನಿವಾರ ಆಯೋಜಿಸಿದ್ದ ‘ಅರ್ಥಾರ್ಥ ಭಾರತದ ಆರ್ಥಿಕ ಬೆಳವಣಿಗೆಯ ಕಥನ ಪ್ರೊ.ಕಾರ್ತಿಕ್ ಮುರಳೀಧರನ್ ಅವರ ನೋಟ’ ವಿಷಯದ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದೇಶದಲ್ಲಿ ಸರ್ಕಾರಿ ಹಾಗೂ ಖಾಸಗಿ ಕುರಿತು ಅನೇಕ ಚರ್ಚೆಗಳಿವೆ. ಖಾಸಗಿಯು ಹೆಚ್ಚು ಪರಿಣಾಮಕಾರಿ ಎಂಬ ಭಾವನೆ ಜನರಲ್ಲಿದೆ. ಜನರು ಸರ್ಕಾರಿ ವ್ಯವಸ್ಥೆ ಬಳಸಿದಾಗ, ಅಲ್ಲಿ ಪ್ರಶ್ನಿಸುವವರು ಇದ್ದಾಗ ವ್ಯವಸ್ಥೆ ಅಚ್ಚುಕಟ್ಟಾಗಿ ಸಾಗಲು ಸಾಧ್ಯ. ಆದರೆ ಜನ ಖಾಸಗಿ ಕಡೆಗೆ ವಾಲುತ್ತಿರುವುದರಿಂದ ಸರ್ಕಾರಿ ವ್ಯವಸ್ಥೆ ದುರ್ಬಲವಾಗುತ್ತಿದೆ. ಸರ್ಕಾರಿ ವ್ಯವಸ್ಥೆ ಬಲವಾದರೆ ಮಾತ್ರ ನಾವು ಕಡಿಮೆ ಖರ್ಚಿನಲ್ಲಿ ಅಭಿವೃದ್ಧಿ ಮಾಡಲು ಸಾಧ್ಯ’ ಎಂದರು.

‘ಅಮರ್ತ್ಯಸೇನ್ ಅವರಂತಹ ತಜ್ಞರು ಸರ್ಕಾರಿ ವ್ಯವಸ್ಥೆ ಬಲಪಡಿಸಬೇಕು ಎನ್ನುತ್ತಾರೆ. ಆರೋಗ್ಯ, ಶಿಕ್ಷಣ ಖಾಸಗೀಕರಣ ಸರಿಯಲ್ಲ ಎನ್ನುತ್ತಾರೆ. ಅದೇ ರೀತಿ ಅನೇಕರು ಖಾಸಗೀಕರಣದ ಪರವಾಗಿಯೂ ಇದ್ದಾರೆ. ಆದರೆ ಕಾರ್ತಿಕ್ ಮುರಳೀಧರನ್ ಅವರು ಯಾವ ವ್ಯವಸ್ಥೆಯಾದರೂ ಜನೋಪಯೋಗಿ ಆಗಿರಬೇಕು’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-39-630866260

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.