ಮೈಸೂರು: ಇಲ್ಲಿನ ಸಪ್ನ ಬುಕ್ ಹೌಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಡಿಜಿಪಿ ಡಿ.ವಿ. ಗುರುಪ್ರಸಾದ್ ರಚಿಸಿದ ‘ಪಾಕ್ನಲ್ಲಿ ನಮ್ಮ ಧುರಂಧರರು’ ಪುಸ್ತಕವನ್ನು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಬಿಡುಗಡೆಗೊಳಿಸಿದರು.

ಅವರು ಮಾತನಾಡಿ, ‘ಗುರುಪ್ರಸಾದ್ ಅವರೊಂದಿಗೆ ಕಾರ್ಯನಿರ್ವಹಿಸುವಾಗ ಉತ್ತಮ ಪ್ರಕರಣಗಳನ್ನು ತನಿಖೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದರು. ಶಿಷ್ಯಂದಿರನ್ನು ಪ್ರೀತಿಸಿ ಅವರನ್ನು ಮುನ್ನೆಲೆಗೆ ತರುವ ಅವರ ವಿಶೇಷ ಗುಣದಿಂದ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದಾರೆ’ ಎಂದರು.

‘ಈ ಪುಸ್ತಕದಲ್ಲಿ ಅನೇಕ ಕುತೂಹಲಕಾರಿ ವಿಷಯಗಳು ಇವೆ. ಪಾಕಿಸ್ತಾನದಲ್ಲಿರುವ ವಿಚಾರಗಳ ಬಗ್ಗೆ ವಿಸ್ತೃತ ಬರಹವಿದೆ. ಪುಸ್ತಕದ ಓದು ಹೆಚ್ಚಿನ ಜ್ಞಾನ ನೀಡುತ್ತದೆ. ಹೀಗಾಗಿ ಯುವ ಸಮೂಹ ಓದಿನ ಕಡೆಗೆ ಮನಸ್ಸು ಮಾಡಬೇಕು’ ಎಂದು ಹೇಳಿದರು.

ನಿವೃತ್ತ ಡಿಜಿಪಿ ಡಿ.ವಿ. ಗುರುಪ್ರಸಾದ್ ಮಾತನಾಡಿ, ‘ಸಿನಿಮಾ ಎಂಬುದು ಸತ್ಯಕ್ಕೆ ಹತ್ತಿರವಿರುವ ಘಟನೆ ಆಧರಿಸಿ ಮಾಡುವುದು. ಈ ಹಿಂದೆ ಪಾಕಿಸ್ತಾನದ ಐಎಸ್ಐ ಭಾರತಕ್ಕೆ ಖೋಟಾ ನೋಟುಗಳನ್ನು ಮುದ್ರಿಸಿ ಕಳುಹಿಸುತ್ತಿದ್ದರೆಂಬ ಕಾರಣಕ್ಕೆ ಒಂದು ಸಾವಿರ ನೋಟು ಚಲಾವಣೆ ನಿಷೇಧಿಸಿರುವುದು’ ಎಂದರು.

ಪತ್ರಕರ್ತ ಕೂಡ್ಲಿ ಗುರುರಾಜ್, ಡಿಆರ್ಡಿಒ ನಿವೃತ್ತ ಪಿಆರ್ಒ ಎಸ್. ಜಯಪ್ರಕಾಶ್ ರಾವ್, ಚಾಮರಾಜನಗರ ಲೋಕಾಯುಕ್ತ ಡಿವೈಎಸ್ಪಿ ಗಜೇಂದ್ರ ಪ್ರಸಾದ್, ಪತ್ರಕರ್ತೆ ರೇಣುಕಾ ಮಂಜುನಾಥ್, ನಂಜನಗೂಡು ಮೋಹನ್ ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-38-643661707

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.