ಮೈಸೂರು: ವಿಶ್ವ ಜೀರ್ಣಾಂಗ ಆರೋಗ್ಯ ದಿನಾಚರಣೆ ಅಂಗವಾಗಿ ಭಾರತೀಯ ಗ್ಯಾಸ್ಟ್ರೋಎಂಟರಾಲಜಿ ಸಂಸ್ಥೆಯ (ಐಎಸ್ಜಿ) ಕರ್ನಾಟಕ ವಿಭಾಗದಿಂದ ಮಣಿಪಾಲ್ ಆಸ್ಪತ್ರೆ ಸಹಯೋಗದಲ್ಲಿ ಇಲ್ಲಿನ ಚಾಮುಂಡಿಬೆಟ್ಟದಲ್ಲಿ ‘ಜೀರ್ಣಾಂಗ ಆರೋಗ್ಯ ಜಾಗೃತಿ ಅಭಿಯಾನ’ ನಡೆಸಲಾಯಿತು.

‘ಚಾಮುಂಡಿ ಬೆಟ್ಟ ಕ್ಲೈಂಬಥಾನ್ ಮತ್ತು ಸ್ವಚ್ಛತಾ ಅಭಿಯಾನದಲ್ಲಿ ವೈದ್ಯರು, ಆರೋಗ್ಯ ವೃತ್ತಿಪರರು, ಫಿಟ್ನೆಸ್ ಆಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

‘ನಿಮ್ಮ ಜೀರ್ಣಾಂಗದ ಆರೋಗ್ಯಕ್ಕೆ ಒಂದು ಸಣ್ಣ ಯತ್ನ, ನಿಮ್ಮ ಉತ್ತಮ ಆರೋಗ್ಯದತ್ತ ಒಂದು ದೊಡ್ಡ ಹೆಜ್ಜೆ’ ಎಂಬ ಘೋಷವಾಕ್ಯದೊಂದಿಗೆ ಜಾಗೃತಿ ಮೂಡಿಸಲಾಯಿತು. ಮೆಟ್ಟಿಲುಗಳ ಉದ್ದಕ್ಕೂ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ಕರ್ನಾಟಕ ಗ್ಯಾಸ್ಟ್ರೋಎಂಟರಾಲಜಿಅಸೋಸಿಯೇಷನ್ ಕಾರ್ಯದರ್ಶಿ ಡಾ.ಸತೀಶ್ ರಾವ್ ಎ.ಕೆ., ಅಧ್ಯಕ್ಷ ಡಾ.ಎಚ್.ಪಿ. ನಂದೀಶ್, ಮೈಸೂರು ‘ಗ್ಯಾಸ್ಟ್ರೋ ಕ್ಲಬ್’ ಸಂಚಾಲಕ ಡಾ.ರಾಮಕೃಷ್ಣ ನೇತೃತ್ವ ವಹಿಸಿದ್ದರು.

ಚಾಲನೆ ನೀಡಿದ ಡಿಎಚ್ಒ ಡಾ.ಪಿ.ಸಿ. ಕುಮಾರಸ್ವಾಮಿ, ‘ಆರೋಗ್ಯಕರ ಜೀರ್ಣಾಂಗ ಮತ್ತು ಸ್ವಚ್ಛ ಪರಿಸರವೇ ನಮ್ಮ ಉತ್ತಮ ಆರೋಗ್ಯದ ಅಡಿಪಾಯ’ ಎಂದು ತಿಳಿಸಿದರು.

ಮಣಿಪಾಲ್ ಆಸ್ಪತ್ರೆಯ ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಹಿರಿಯ ಕನ್ಸಲ್ಟೆಂಟ್ ಡಾ.ಸತೀಶ್ ರಾವ್ ಎ.ಕೆ., ‘ಹೃದಯದಷ್ಟೇ ನಮ್ಮ ಜೀರ್ಣಾಂಗ ವ್ಯವಸ್ಥೆಯೂ ಅತ್ಯಂತ ಪ್ರಮುಖವಾದುದು. ಹೊಟ್ಟೆಗೆ ಸಂಬಂಧಿಸಿದ ಯಾವುದೇ ದೀರ್ಘಕಾಲದ ಲಕ್ಷಣಗಳನ್ನು ಸಾಮಾನ್ಯ ಎಂದು ಕಡೆಗಣಿಸದೆ ವೈದ್ಯಕೀಯ ಸಲಹೆ ಪಡೆಯಬೇಕು’ ಎಂದು ಸಲಹೆ ನೀಡಿದರು.

ಕೆಎಂಸಿಎಸಿ ಹಾಗೂ ಮಣಿಪಾಲ್ ಆಸ್ಪತ್ರೆ ಮೈಸೂರಿನ ಕ್ಲಸ್ಟರ್ ನಿರ್ದೇಶಕ ಪ್ರಮೋದ್ ಕುಂದರ್, ಮಣಿಪಾಲ್ ಆಸ್ಪತ್ರೆ ನಿರ್ದೇಶಕ ಸಂದೀಪ್ ಪಟೇಲ್ ಬಿ.ಜೆ. ಮಾತನಾಡಿದರು. ಮಣಿಪಾಲ್ ಆಸ್ಪತ್ರೆಯ ಡಾ.ನಿಶ್ಚಯ್ ಆರ್. ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-39-1451437131

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.