ಮೈಸೂರು: ನಂಜನಗೂಡು ತಾಲ್ಲೂಕಿನ ದೇವಿರಮ್ಮ ಪ್ರಜಾವಾಣಿ ವಾರ್ತೆ ನಹಳ್ಳಿ ಪಾಳ್ಯ ನಿವಾಸಿ ಅಂಗವಿಕಲ ಸ್ವಾಮಿ ಎಂಬುವರ ಕೊಲೆ ಪ್ರಕರಣದಲ್ಲಿ ಜಿಲ್ಲಾ ಪೊಲೀಸರು ಕುಣಿಗಲ್ನ ಶ್ರೀನಿವಾಸ ಮತ್ತು ಗಂಗಾಧರ ಅವರನ್ನು ಬಂಧಿಸಿದ್ದು, ಅವರೂ ಅಂಗವಿಕಲರೇ ಆಗಿದ್ದಾರೆ.

ಸ್ವಾಮಿ ಪತ್ನಿ ಸವಿತಾ ಅವರಿಗೆ ಕೂಡ ವಾಕ್ ಮತ್ತು ಶ್ರವಣ ಸಮಸ್ಯೆಯಿತ್ತು. ನಾಲ್ಕು ವರ್ಷದ ಹಿಂದೆ ಇವರು ಪ್ರೀತಿಸಿ ಮದುವೆಯಾಗಿದ್ದರು. 3 ವರ್ಷದ ಮಗಳು ಇದ್ದಳು.

ಈ ವೇಳೆ ದಂಪತಿಗೆ ಪರಿಚಯವಾದ ಶ್ರೀನಿವಾಸ, ಸವಿತಾ ಅವರನ್ನು ತಮ್ಮದಾಗಿಸಿಕೊಳ್ಳಬೇಕೆಂಬ ದುರಾಸೆಯಿಂದ ಸ್ನೇಹಿತ ಗಂಗಾಧರ ಹಾಗೂ ಮತ್ತೊಬ್ಬ ವ್ಯಕ್ತಿಯೊಂದಿಗೆ ಸೇರಿ ಸ್ವಂತ ಊರಾದ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಅಮ್ಮತ್ತೂರಿಗೆ ಕರೆದೊಯ್ದಿದ್ದನು. ಜಮೀನಿನಲ್ಲಿ ಮದ್ಯಪಾನ ಮಾಡಿಸಿ ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದರು. ನಂತರ ಶವಕ್ಕೆ ಕಲ್ಲನ್ನು ಕಟ್ಟಿ ಬಾವಿಗೆ ಎಸೆದಿದ್ದರು. ಪತಿ ಬಾರದಿದ್ದಾಗ ಸವಿತಾ ಅವರು ಮಾರ್ಚ್ 4ರಂದು ನಂಜನಗೂಡು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.

ಸ್ವಾಮಿ ನಾಪತ್ತೆಯಾದ ದಿನವೇ ಅವರ ಮೊಬೈಲ್ ಅನ್ನು ಸವಿತಾಗೆ ಶ್ರೀನಿವಾಸ ನೀಡಿದ್ದನು ಹಾಗೂ ವಿಡಿಯೊ ಕಾಲ್ನಲ್ಲಿ ಆರೋಪಿಯ ಸಂಜ್ಞಾ ಭಾಷೆ ಸರಿಯಿಲ್ಲವೆಂಬ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಕೃತ್ಯ ಮಾಡಿರುವುದು ಗೊತ್ತಾಗಿದೆ. ಪೊಲೀಸರು ವಿಚಾರಣೆ ವೇಳೆ ಆಯಿಷ್ ತಜ್ಞರ ನೆರವನ್ನೂ ಪಡೆದಿದ್ದರು.

ಎರಡು ತಿಂಗಳ ನಂತರ ಬಾವಿಯಲ್ಲಿದ್ದ ಶವ ಹೊರತೆಗೆಯಲಾಗಿದ್ದು, ಸ್ವಾಮಿ ಅವರ ತಾಯಿ, ಮಗನ ಶವವೆಂದು ಗುರುತಿಸಿದರು. ಮತ್ತೊಬ್ಬ ಆರೋಪಿಯ ಶೋಧಕ್ಕಾಗಿ ಕಾರ್ಯಾಚರಣೆ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಎಸ್.ಆನಂದ, ಎಸ್ಐ ನಾಗರಾಜು, ಎಎಸ್ಐ ಮಹೇಶ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-37-1420645717

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.