ಮೈಸೂರು: ಇಲ್ಲಿನ ಸರಸ್ವತಿಪುರಂನ ಕಾಂತರಾಜ ಅರಸು ರಸ್ತೆಯಲ್ಲಿರುವ ಶಿಥಿಲಗೊಂಡಿದ್ದ ಡಾ.ಎಸ್.ರಾಧಾಕೃಷ್ಣನ್ ಸ್ಮಾರಕ ಕಟ್ಟಡದ ದುರಸ್ತಿ ಕೈಗೊಳ್ಳಲು ಪರಿಶೀಲಿಸುವಂತೆ ಕೋರಿ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಾದ ಎಂ.ಕೆ.ಸವಿತಾ ಅವರು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

‘ಪ್ರಜಾವಾಣಿ’ಯು ಇದೇ ಮೇ ಮೊದಲ ವಾರದಲ್ಲಿ ಆರಂಭಿಸಿದ್ದ ‘ಅಪಾಯವಿದೆ ಎಚ್ಚರ’ ಸರಣಿಯಲ್ಲಿ ‘ಕುಸಿಯುತ್ತಿದೆ ರಾಧಾಕೃಷ್ಣನ್ ಸ್ಮಾರಕ’ ಎಂಬ ಶೀರ್ಷಿಕೆಯಲ್ಲಿ ಮೇ 5ರಂದು ವರದಿಯನ್ನು ಪ್ರಕಟಿಸಿತ್ತು. ಈ ಕಾರಣದಿಂದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು, ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಪರಿಶೀಲನೆ ನಡೆಸಿ, ದುರಸ್ತಿಗೆ ಸೂಚಿಸಿದ್ದರು.

‘ಕಾಮಗಾರಿ ಅತ್ಯವಶ್ಯವಾಗಿದ್ದು, ಕಟ್ಟಡವು ಪಾರಂಪರಿಕ ಆಗಿರುವುದರಿಂದ ಆಯುಕ್ತರು ಡಾ.ಎಸ್.ರಾಧಾಕೃಷ್ಣನ್ ತತ್ವಶಾಸ್ತ್ರ ಮತ್ತು ಭಾರತೀಯ ಸಂಸ್ಕೃತಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ದುರಸ್ತಿ ಕಾಮಗಾರಿಯನ್ನು ತ್ವರಿತವಾಗಿ ಪರಿಗಣಿಸಿ, ಮುಂದಿನ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು’ ಎಂದು ಸವಿತಾ ಕೋರಿದ್ದಾರೆ.

2012ರಲ್ಲಿ ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ದೊರೆಸ್ವಾಮಿ ಅವರು ನೀಡಿದ ₹ 78 ಲಕ್ಷ ವೆಚ್ಚದಲ್ಲಿ ಕಟ್ಟಡವು ಪುನಶ್ಚೇತನಗೊಂಡಿತ್ತು. ಇಲ್ಲಿ ಗ್ರಂಥಾಲಯ ಆರಂಭಿಸಿತ್ತು. ಶಿಥಿಲಗೊಂಡು ಚಾವಣಿ ಕುಸಿದುಬಿದ್ದ ವರದಿ ಪತ್ರಿಕೆಯಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕರು ಭೇಟಿ ನೀಡಿದ್ದರು.

ದುರಸ್ತಿ ಕಾಮಗಾರಿ ಕಾರ್ಯ ಕೈಗೊಳ್ಳುವುದಾಗಿ ಸಂಸ್ಥೆಯು ವಿಶ್ವವಿದ್ಯಾಲಯಕ್ಕೆ ತಿಳಿಸಿತ್ತು.

‘ಐದು ವರ್ಷಗಳ ನಿರ್ವಹಣೆ ನಿಯಮ ಅನುಸರಿಸಿ ದುರಸ್ತಿ ಕೈಗೊಳ್ಳಲು ಅಭ್ಯಂತರ ಇಲ್ಲ’ ಎಂದು ಕುಲಸಚಿವರು ಪಿಇಎಸ್ ಸಂಸ್ಥೆಗೂ ಪತ್ರ ಬರೆದಿದ್ದಾರೆ. ಮಳೆಗಾಲಕ್ಕೂ ಮೊದಲು ಕಟ್ಟಡದ ರಕ್ಷಣೆ ಆಗಬೇಕಿದೆ. ಪುರಾತತ್ವ ಇಲಾಖೆ ತ್ವರಿತವಾಗಿ ಸ್ಪಂದಿಸುವುದಷ್ಟೇ ಬಾಕಿ ಇದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-39-1089307971

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.