ಮೈಸೂರು: ಕಾಂತರಾಜ ಅರಸು ರಸ್ತೆಯಲ್ಲಿರುವ ಡಾ.ಎಸ್.ರಾಧಾಕೃಷ್ಣನ್ ಕಟ್ಟಡದ ಎಡಭಾಗದ ಚಾವಣಿಯು ಈಗಾಗಲೇ ಕುಸಿದಿದ್ದು, ಇಡೀ ಪಾರಂಪರಿಕ ಕಟ್ಟಡ ಬೀಳುವ ಆತಂಕ ಮೂಡಿದೆ.

ಕುಕ್ಕರಹಳ್ಳಿ ಕೆರೆಯ ಪದ್ಮ ವೃತ್ತದಿಂದ ಅಗ್ನಿಶಾಮಕ ಠಾಣೆಗೆ ಸಾಗುವಾಗ ಎಡಬದಿಯಲ್ಲಿ ಭವ್ಯ ಕಟ್ಟಡವಿದ್ದು, ಇಲ್ಲಿಯೇ ದೇಶದ ಮೊದಲ ಉಪರಾಷ್ಟ್ರಪತಿ ಹಾಗೂ 2ನೇ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಮೂರು ವರ್ಷ ವಾಸವಿದ್ದರು. 2012ರಲ್ಲಿ ಪುನರುಜ್ಜೀವನಗೊಂಡಿದ್ದ ಸರಸ್ವತಿಪುರಂನ ಈ ಪಾರಂಪರಿಕ ಕಟ್ಟಡವು ಆಡಳಿತದ ದಿವ್ಯ ನಿರ್ಲಕ್ಷ್ಯದಿಂದ ಅವಸಾನದ ಹಂತಕ್ಕೆ ತಲುಪಿದೆ.

ಬೀಳಲು ಇನ್ನೊಂದು ಜಡಿಮಳೆಗೆ ಕಾಯುತ್ತಿದೆ.

ನೂರು ವರ್ಷದ ಇತಿಹಾಸ: 1916ರಲ್ಲಿ ಮೈಸೂರು ವಿಶ್ವವಿದ್ಯಾಲಯವು ವಿಶ್ವವಿಖ್ಯಾತ ಅಧ್ಯಾಪಕರಿಂದ ತುಂಬಿತ್ತು. ಆ ವೇಳೆ ಆಗಿನ ಕುಲಪತಿ ಪ್ರೊ.ಎಚ್.ವಿ.ನಂಜುಂಡಯ್ಯ ಅವರು ತತ್ವಶಾಸ್ತ್ರ ಅಧ್ಯಯನ ವಿಭಾಗಕ್ಕೆ ಮೇರು ಜ್ಞಾನಿಯನ್ನು ಆಯ್ಕೆ ಮಾಡಲು ನಿರ್ಧರಿಸಿದ್ದರು. 1916ರಲ್ಲಿ ಆಕ್ಸ್ಫರ್ಡ್ ಪದವೀಧರರಾದ ಎ.ಆರ್.ವಾಡಿಯಾ ಅವರನ್ನು ಕರೆದುಕೊಂಡು ಬಂದರು. ನಂತರ ಮೈಸೂರು ಹಿರಿಯಣ್ಣ, ಮದ್ರಾಸ್ನ ಪ್ರೆಸಿಡೆನ್ಸಿ ಕಾಲೇಜಿನ ಮೇರು ಪ್ರತಿಭೆ ರಾಧಾಕೃಷ್ಣನ್ ಅವರನ್ನು ಪ್ರಾಧ್ಯಾಪಕ ಹುದ್ದೆಗೆ ನೇಮಕ ಮಾಡಲಾಯಿತು. ಆಗ ಸರ್ವಪಲ್ಲಿ ಅವರಿಗೆ 29 ವರ್ಷ. ಅಲ್ಲಿಂದ 1921ರವರೆಗೆ ಇದೇ ಮನೆಯಲ್ಲಿ ಉಳಿದಿದ್ದರು. ಇಲ್ಲಿಯೇ ಮೊದಲ ಪುಸ್ತಕವಾದ ‘ರಬೀಂದ್ರನಾಥ ಟ್ಯಾಗೋರರ ತತ್ವಜ್ಞಾನ’ ಬರೆದರು.

ಬೀಳ್ಕೊಡುಗೆ: ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿದ್ದ, ‘ಜಾತ್ಯತೀತ’ ಶಬ್ದವನ್ನು ಪ್ರಸ್ತಾವನೆಯಲ್ಲಿ ಸೇರಿಸಬೇಕೆಂದು ಒತ್ತಾಯಿಸಿದ್ದ ಅರ್ಥಶಾಸ್ತ್ರಜ್ಞ ಪ್ರೊ.ಕುಶಾಲ್ ಶಾ, ಎ.ಆರ್.ವಾಡಿಯಾ ಮೊದಲಾದವರು 1921ರಲ್ಲಿ ರಾಧಾಕೃಷ್ಣನ್ ಅವರಿಗೆ ಅದ್ದೂರಿ ಬೀಳ್ಕೊಡುಗೆ ನೀಡಿದ್ದರು. ಪ್ರೊ.ಯಮುನಾಚಾರ್ಯ ಸೇರಿದಂತೆ ಮುಂದೆ ಪ್ರಸಿದ್ಧರಾದ ತತ್ವಜ್ಞಾನಿಗಳು ಶಿಷ್ಯರ ಗುಂಪಿನಲ್ಲಿದ್ದರು. ರಾಧಾಕೃಷ್ಣನ್ ಅವರು ಉಪರಾಷ್ಟ್ರಪತಿಯಾದಾಗ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಾರೋಟಿನಲ್ಲಿ ರೈಲು ವನಿಲ್ದಾಣದವರಿಗೆ ಮೆರವಣಿಗೆಯಲ್ಲಿ ಕರೆದೊಯ್ದು ಗೌರವ ನೀಡಿದ್ದರು.

ನೆನಪಿನ ಸ್ಮಾರಕ:ಸರ್ವಪಲ್ಲಿ ನಿವಾಸವಾದ ಕಾರಣ ವಿಶ್ವವಿದ್ಯಾಲಯವು ‘ಡಾ.ಎಸ್.ರಾಧಾಕೃಷ್ಣನ್ ತತ್ವಶಾಸ್ತ್ರ ಮತ್ತು ಭಾರತೀಯ ಸಂಸ್ಕೃತಿ ಕೇಂದ್ರ’ವನ್ನು ಆರಂಭಿಸಿತ್ತು. 100 ವರ್ಷ ತುಂಬಿದ್ದ ಕಾರಣ ಕಟ್ಟಡ ದುರಸ್ತಿಗೆ ವಿಶ್ವವಿದ್ಯಾಲಯವು ಮುಂದಾಗಿತ್ತು. ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ದೊರೆಸ್ವಾಮಿ ಅವರ ₹ 78 ಲಕ್ಷ ಕೊಡುಗೆಯಿಂದ 2012ರಲ್ಲಿ ಪುನರುಜ್ಜೀವನವನ್ನು ಕಟ್ಟಡವು ಕಂಡಿತು. ಮಳೆ–ಗಾಳಿಗೆ ಶಿಥಿಲವಾಗಿದ್ದ ಗೋಡೆಗಳು, ಚಾವಣಿ, ಕೊಠಡಿಗಳನ್ನು ದುರಸ್ತಿ ಮಾಡಲಾಗಿತ್ತು. ಆಗಿನ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಉದ್ಘಾಟನೆಯನ್ನು ಮಾಡಿದ್ದರು.

ನಂತರ ತತ್ವಶಾಸ್ತ್ರ ಸಂಬಂಧಿತ ಪುಸ್ತಕಗಳು, ನೆನಪಿನ ಛಾಯಾಚಿತ್ರಗಳಿಂದ ಬಂಗಲೆಯು ತುಂಬಿತ್ತು. ಈಗ ಮೊದಲ ಮಹಡಿ ಸಂಪೂರ್ಣ ಹಾಳಾಗಿದೆ. ವಿಶ್ವವಿದ್ಯಾಲಯವು ದುರಸ್ತಿ ಮಾಡಿ ಸಂರಕ್ಷಿಸಿಕೊಳ್ಳಬೇಕಾದ ಜವಾಬ್ದಾರಿ ಮರೆತು, ಸಂಪೂರ್ಣವಾಗಿ ಕಟ್ಟಡವನ್ನು ಸಾರ್ವಜನಿಕ ಪ್ರವೇಶದಿಂದ ಮುಚ್ಚಿದೆ.

ಈ ಕುರಿತ ಪ್ರತಿಕ್ರಿಯೆಗೆ ತತ್ವಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಮತ್ತು ಕುಲಪತಿ ಅವರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-39-291117571

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.