ಮೈಸೂರು: ಒಂದೇ ನೋಂದಣಿ ಸಂಖ್ಯೆಯ ಎರಡು ದ್ವಿಚಕ್ರ ವಾಹನ ಪತ್ತೆಯಾಗಿದ್ದು, ಆರ್ಟಿಒ ಅಧಿಕಾರಿಗಳು ಅಸಲಿ ಸಂಖ್ಯೆ ಹೊಂದಿರುವ ವಾಹನ ಪತ್ತೆಹಚ್ಚುವ ಸವಾಲು ಎದುರಿಸುತ್ತಿದ್ದಾರೆ.

ನಗರದ ಕೆಎಸ್ಆರ್ಟಿಸಿ ನೌಕರ ಜಯಂತ್ ಹಾಗೂ ಆಂಧ್ರ ಪ್ರದೇಶ ಮೂಲದ ಯೋಧರೊಬ್ಬರ ಬುಲೆಟ್ ಬೈಕ್ಗಳಿಗೆ ಒಂದೇ ನೋಂದಣಿ ಸಂಖ್ಯೆ ಇದೆ. ಇದು ಸಾರಿಗೆ ನಿಯಮಕ್ಕೆ ವಿರುದ್ಧವಾಗಿದ್ದು, ಪಶ್ಚಿಮ ಆರ್ಟಿಒ ಕಚೇರಿಯಲ್ಲಿ ಆಂಧ್ರಪ್ರದೇಶದ ವ್ಯಕ್ತಿ ದೂರು ನೀಡಿದ್ದಾರೆ.

‘ಆರ್ಟಿಒ ವತಿಯಿಂದ ಎರಡು ಬೈಕ್ಗಳಿಗೆ ಎಂಇಜಿ 2261 ಎಂಬ ಸಂಖ್ಯೆ ನೀಡಲಾಗಿದೆ. ಚಾರ್ಸಿ ಸಂಖ್ಯೆಯೂ ಒಂದೇ ರೀತಿ ಇದೆ. ಇಬ್ಬರು ಮಾಲೀಕರಲ್ಲೂ ಸರಿಯಾದ ದಾಖಲೆಗಳೂ ಇವೆ. ಎರಡೂ ಬೈಕ್ಗಳನ್ನು ಸುಪರ್ದಿಗೆ ಪಡೆದು ಪರಿಶೀಲನೆ ನಡೆಸುತ್ತಿದ್ದೇವೆ. ಮಂಗಳೂರು ಆರ್ಆರ್ಸಿಗೆ ಪತ್ರ ವ್ಯವಹಾರ ಮಾಡಿದ್ದು, ಮೂಲ ದಾಖಲೆ ನೀಡುವಂತೆ ತಿಳಿಸಿದ್ದೇವೆ. ಬೈಕ್ ತಯಾಕರಾದ ರಾಯಲ್ ಎನ್ಫೀಲ್ಡ್ ಸಂಸ್ಥೆಗೂ ದಾಖಲೆ ಒದಗಿಸುವಂತೆ ತಿಳಿಸಿದ್ದು, ಅವರು ಮಾಹಿತಿ ನೀಡಿದ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ್ ಈಶ್ವರ್ ಚವ್ಹಾಣ್ ತಿಳಿಸಿದರು.

‘ತಾಂತ್ರಿಕ ತೊಂದರೆಯಿಂದ ಈ ರೀತಿ ಆಗಿದೆಯೇ ಎಂಬುದನ್ನೂ ಪರಿಶೀಲಿಸಲಿದ್ದೇವೆ’ ಎಂದು ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-37-859715508

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.