ಮೈಸೂರು: ‘ಆರಂಭಿಕ ರೋಗನಿರ್ಣಯವು ಚಿಕಿತ್ಸೆಗಿಂತ ಉತ್ತಮ’ ಎಂದು ಭಾರತ್ ಆಸ್ಪತ್ರೆ ಮತ್ತು ಆಂಕಾಲಾಜಿ ಸಂಸ್ಥೆಯ ಪೀಡಿಯಾಟ್ರಿಕ್ ಆಂಕಾಲಜಿಸ್ಟ್ ಡಾ.ಸೌಮ್ಯಾ ಜೆ. ಹೇಳಿದರು.

ನಗರದ ಜೆಎಸ್ಎಸ್ ಆಸ್ಪತ್ರೆಯಲ್ಲಿಶುಕ್ರವಾರ ಆಯೋಜಿಸಿದ್ದ ವಿಶ್ವ ಹಿಮೊಫಿಲಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿಮೊಫಿಲಿಯಾ ರಕ್ತದ ಕಾಯಿಲೆಯಾಗಿದೆ. ಇದು ರಕ್ತ ಹೆಪ್ಪುಗಟ್ಟದಂತೆ ಮಾಡುವ ಅಪರೂಪದ ಆನುವಂಶಿಕ ಕಾಯಿಲೆ. ಇದರಿಂದ ಸಣ್ಣ ಗಾಯಗಳಿಗೂ ದೀರ್ಘಕಾಲದವರೆಗೆ ರಕ್ತಸ್ರಾವವಾಗುತ್ತದೆ. ಮಾಂಸಖಂಡಗಳಲ್ಲಿ ರಕ್ತಸೋರುವಿಕೆ, ಬಿಳಿಮಚ್ಚೆ, ಸಂಧಿವಾತ ಈ ಲಕ್ಷಣಗಳ ಬಗ್ಗೆ ಆರಂಭದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಮುಂದೆ ಆಗುವ ತೊಡಕುಗಳನ್ನು ತಡೆಗಟ್ಟಬಹುದು’ ಎಂದು ತಿಳಿಸಿದರು.

‘ಹಿಮೊಫಿಲಿಯಾ ಕಾಯಿಲೆಯು ಇತ್ತೀಚಿನದಲ್ಲ. ಹಿಂದೆ, ಜನರಲ್ಲಿ ಇದರ ಬಗ್ಗೆ ಅರಿವು ಮತ್ತು ಜಾಗೃತಿಯ ಕೊರತೆಯಿಂದಾಗಿ, ಪ್ರಾರಂಭದಲ್ಲೆ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯ ಆಗುತ್ತಿರಲಿಲ್ಲ. ಈಗ ತಂತ್ರಜ್ಞಾನ ಮತ್ತು ಹಲವು ಸಂಶೋಧನೆಗಳಿಂಧ ಜಾಗೃತಿ ಹೆಚ್ಚಾಗುತ್ತಿದೆ ಹಾಗೂ ಚಿಕಿತ್ಸೆ ಕೂಡ ಲಭ್ಯವಿದೆ’ ಎಂದರು.

ಜೆಎಸ್ಎಸ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿ.ಪಿ. ಮಧು ಮಾತನಾಡಿ, ‘ಹಿಮೊಫಿಲಿಯಾ ಕಾಯಿಲೆ ಬಂದರೆ ಜೀವನವೇ ಮುಗಿಯಿತು ಎಂದುಕೊಳ್ಳಬಾರದು. ಸೂಕ್ತ ಚಿಕಿತ್ಸೆ ಪಡೆದರೆ ಸಾಮಾನ್ಯರಂತೆ ಜೀವನ ನಡೆಸಬಹುದು. ಆರೋಗ್ಯ ಕ್ಷೇತ್ರದ ಸಂಶೋಧನೆಗಳ ಪರಿಣಾಮ ಈ ಕಾಯಿಲೆಗೆ ಚಿಕಿತ್ಸೆ ಮತ್ತು ಔಷಧಿಗಳು ಲಭ್ಯ ಇದೆ’ ಎಂದು ಹೇಳಿದರು.

ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಿಡಿಎಸ್ಎ ಕೇಂದ್ರದ ಮುಖ್ಯ ಸಂಯೋಜಕ ಡಾ.ಎಂ.ಡಿ.ರವಿ, ರೋಗಲಕ್ಷಣವಿಜ್ಞಾನ ಪ್ರಯೋಗಾಲಯದ ಮುಖ್ಯಸ್ಥೆ ಡಾ.ಆಶಾ ಎಂ., ರಕ್ತ ಕೇಂದ್ರ ವಿಭಾಗದ ಅಧಿಕಾರಿ ಡಾ.ಪಲ್ಲವಿ ಪಿ., ಮೈಸೂರು ಹಿಮೊಫಿಲಿಯಾ ಸೊಸೈಟಿಯ ಕಾರ್ಯದರ್ಶಿ ಪ್ರವೀಣ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-39-712018665

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.