ಮೈಸೂರು: ‘ದೇಶದ ಆರ್ಥಿಕ ಬೆಳವಣಿಗೆಯು ವೇಗವಾಗಿ ಸಾಗುತ್ತಿದ್ದರೂ, ಆರ್ಥಿಕ ಅಸ್ಥಿರತೆ ಸವಾಲು ಎದುರಾಗಿದೆ. ಅದಕ್ಕಾಗಿ ನಾವು ಎಲ್ಲರೂ ಸಿದ್ಧರಾಗಿರಬೇಕು’ ಎಂದು ಬಿಲ್ಡರ್ ಅಸೋಸಿಯೇಷನ್ನ ಸಾಮಾನ್ಯ ಮಂಡಳಿ ಮತ್ತು ವ್ಯವಸ್ಥಾಪಕ ಸಮಿತಿಯ ಸದಸ್ಯ ಕೆ.ಶ್ರೀರಾಮ್ ಹೇಳಿದರು.

ಇಲ್ಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಮೈದಾನದಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ), ಕ್ರೆಡಾಯ್, ಮೈಸೂರು ಬಿಲ್ಡರ್ಸ್ ಚಾರಿಟಬಲ್ ಫೌಂಡೇಷನ್ಗಳ ಸಹಯೋಗದಲ್ಲಿ ಶುಕ್ರವಾರ ಆರಂಭವಾದ ‘ಮೈ ರಿಯಾಲ್ಟಿ 2026’ ರಿಯಲ್ ಎಸ್ಟೇಟ್ ಎಕ್ಸ್ಪೋ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರಸ್ತುತ ಭಾರತದ ಆರ್ಥಿಕತೆಯು ಜಾಗತಿಕ ಮತ್ತು ದೇಶೀಯ ಅಂಶಗಳಿಂದಾಗಿ ಅತ್ಯಂತ ಗಂಭೀರವಾಗಿದೆ. ಸಾಮಾಜಿಕ ಅಶಾಂತಿಯೂ ಉಂಟಾಗುವ ಸಾಧ್ಯತೆ ನಡುವೆಯೂ ದೇಶವು ಸಾಕಷ್ಟು ಮಟ್ಟಿಗೆ ಸುರಕ್ಷಿತ ಸ್ಥಿತಿಯಲ್ಲಿದೆ’ ಎಂದರು.

‘ರಿಯಲ್ ಎಸ್ಟೇಟ್ ಮತ್ತು ಕೈಗಾರಿಕಾ ವಲಯದವರು ಆತಂಕಕ್ಕೆ ಒಳಗಾಗದೆ, ತಾಳ್ಮೆಯಿಂದ ನಡೆದುಕೊಳ್ಳಬೇಕು. ಕ್ರಿಕೆಟ್ನಲ್ಲಿ ಕೆಟ್ಟ ಪಿಚ್ನಲ್ಲೂ ಉತ್ತಮ ಬ್ಯಾಟ್ಸ್ಮನ್ಗಳು ಹೇಗೆ ಆಡುತ್ತಾರೋ, ಹಾಗೆಯೇ ನಾವು ಸಹ ಧೈರ್ಯದಿಂದ ಈ ಪರಿಸ್ಥಿತಿ ಎದುರಿಸಬೇಕು’ ಎಂದು ಸಲಹೆ ನೀಡಿದರು.

‘ತಂತ್ರಜ್ಞಾನವು ಭಾರತದ ಭವಿಷ್ಯವಾಗಿದೆ. ಭಾರತವು ಪ್ರಗತಿ ಸಾಧಿಸುವಲ್ಲಿ ಮಹತ್ವದ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ. ಕಟ್ಟಡ ನಿರ್ಮಾಣ ವಲಯದ ಹೊಸ ವಿಷಯ ತಿಳಿಯಲು ಎಕ್ಸ್ಪೋ ಸಹಕಾರಿಯಗಿದೆ’ ಎಂದು ತಿಳಿಸಿದರು.

ಪ್ರದರ್ಶನದಲ್ಲಿ ವಾಸ್ತುಶಿಲ್ಪಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು, ಬಿಲ್ಡರ್ಸ್ ಭಾಗವಹಿಸಿದ್ದಾರೆ. ಗೃಹೋಪಯೋಗಿ ವಸ್ತು, ಎಲೆಕ್ಟ್ರಾನಿಕ್ಸ್ ಉಪಕರಣಗಳು, ಆಟೊಮೊಬೈಲ್ ಉಪಕರಣ, ಯಂತ್ರೋಪಕರಣ, ಗೃಹ ಅಲಂಕಾರಿಕಉತ್ಪನ್ನಗಳು ಇವೆ.

ಮೈ ರಿಯಾಲ್ಟಿ ಚೇರ್ಮನ್ ಅಶ್ವಿನ್ ಆರ್. ಪಾಳೇಗಾರ್, ಬಿಎಐ ಚೇರ್ಮನ್ ಪ್ರಭಾಕರ್ ರಾವ್, ಕ್ರೆಡಾಯ್ ಅಧ್ಯಕ್ಷ ಹರೀಶ್ಶೆಣೈ, ಗೌರವ ಕಾರ್ಯದರ್ಶಿ ನಾಗರಾಜ್ ವಿ. ಭೈರಿ, ಕಾರ್ಯದರ್ಶಿ ಎಂ.ಡಿ. ಪ್ರವೀಣ್ ಪಾಲ್, ಕಾರ್ಯದರ್ಶಿ ಕೆ.ಎಸ್. ಪ್ರಕಾಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-39-1260658674

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.