ಮೈಸೂರು: ತಾಲ್ಲೂಕಿನ ಕೆಂಚಲಗೂಡು ಗ್ರಾಮದ ‘ಕಲಿಯುವ ಮನೆ’ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ‘ಒಡನಾಟ’ ಕಾರ್ಯಾಗಾರದ ಸಮಾರೋಪದಲ್ಲಿ ಪಾಲ್ಗೊಂಡ ಮಕ್ಕಳು ಗಾಯನ, ನೃತ್ಯ ಪ್ರದರ್ಶನ ನೀಡಿ ಸಂಭ್ರಮಿಸಿದರು.

ಸಮತಾ ಅಧ್ಯಯನ ಕೇಂದ್ರ, ಲಯನ್ಸ್ ಕ್ಲಬ್ ಆಫ್ ಮೈಸೂರು ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಂಗಳೂರಿನ ತರಿಕಿಟ ಕಲಾ ಕಮ್ಮಟ ಬಳಗದ ವಾಣಿ ಪೆರಿಯೋಡಿ, ಚೈತ್ರಾ, ಹರ್ಷಿತಾ ಅವರು ಹೇಳಿಕೊಟ್ಟ ಹಾಡಿಗೆ ಮಕ್ಕಳು ದನಿಗೂಡಿಸಿದರು. ವಿದ್ಯಾರ್ಥಿಗಳಾದ ನೇಸರ, ಚೇತನಾ, ಅನುಶ್ರೀ, ದೀಕ್ಷಿತಾ, ಸಂಜನಾ, ನಿಖಿಲ್, ನವೀನ್ ಅನುಭವ ಹಂಚಿಕೊಂಡರು.

ಶಾಲೆಯ ಸಂಸ್ಥಾಪಕ ಎಂ.ಆರ್.ಅನಂತಕುಮಾರ್ ಮಾತನಾಡಿ, ‘ಹಾಡು, ಕತೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳು ಮಕ್ಕಳ ಅಭಿವ್ಯಕ್ತಿಗೆ ಅವಕಾಶ ನೀಡುತ್ತವೆ. ಆತ್ಮವಿಶ್ವಾಸವನ್ನು ಮೂಡಿಸುತ್ತವೆ. ಜೀವನ ಕೌಶಲ, ಲಿಂಗತ್ವ ಸಂವೇದನೆ, ದೌರ್ಜನ್ಯ, ತಾರತಮ್ಯಗಳ ಕುರಿತಂತೆ ಮಕ್ಕಳಲ್ಲಿ ಅರಿವು ಮೂಡಿಸಲು ಕಾರ್ಯಾಗಾರದಿಂದ ಸಾಧ್ಯವಾಯಿತು’ ಎಂದರು.

ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷೆ ಸಬಿಹಾ ಭೂಮಿಗೌಡ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-39-1913187177

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.