ಮೈಸೂರು: ಪ್ರತಿ ಮಕ್ಕಳ ಕೈಯಲ್ಲೂ ಇದ್ದ ಬಣ್ಣ ಬಣ್ಣದ ಪೆನ್ಸಿಲ್, ವಾಟರ್ ಕಲರ್, ಕ್ಯಾನ್ವಾಸ್ಗಳು ಪರಿಸರದ ಚಿತ್ರ ಮೂಡಿಸಿದವು. ‘ಪರಿಸರ ಉಳಿಸಿ, ‘ನೀರು ಉಳಿಸಿ ಬದುಕು ರಕ್ಷಿಸಿ’, ‘ಮಾಲಿನ್ಯ ನಿಯಂತ್ರಿಸಿ’, ‘ಸುತ್ತಲಿನ ಪರಿಸರ ಹಾಳುಗೆಡವದಿರಿ’ ಮೊದಲಾದ ಘೋಷಣೆಗಳು ಕ್ಯಾನ್ವಾಸ್ನಲ್ಲಿ ಮೂಡಿಬಂದವು.

ಪರಿಸರ ಉಳಿವಿನ ಘೋಷಣೆಗಳು, ಪ್ಲಾಸ್ಟಿಕ್ ಬಳಕೆಯ ಅಪಾಯಗಳು, ಪ್ಲಾಸ್ಟಿಕ್ ಬಿಡಿ ಬಟ್ಟೆ ಚೀಲಗಳನ್ನೇ ಬಳಸಿ ಎಂದು ಮಕ್ಕಳು ತಮ್ಮ ಚಿತ್ರದ ಮೂಲಕ ಪರಿಸರ ಉಳಿವಿನ ಕಳಕಳಿಯನ್ನು ಮುಂದಿಟ್ಟರು.

ಇವೆಲ್ಲವೂ ಸಾಧ್ಯವಾಗಿದ್ದು, ವಿಶ್ವ ಪರಿಸರ ದಿನದ ಅಂಗವಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ‘ಮಡಿಲು’ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಜಂಟಿಯಾಗಿ ಮಂಗಳವಾರ ಕಲಾಮಂದಿರದ ಆವರಣದಲ್ಲಿ ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ.

ಚಿತ್ರಕಲೆ ಸ್ಪರ್ಧೆಯಲ್ಲಿ 1ನೇ ತರಗತಿಯಿಂದ 8ನೇ ತರಗತಿ ವಿದ್ಯಾರ್ಥಿಗಳು, 5ರಿಂದ 7ನೇ ತರಗತಿ, 8ರಿಂದ 10ನೇ ತರಗತಿ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ 8ರಿಂದ 10ನೇ ತರಗತಿಯ 45 ಶಾಲೆಗಳ 550 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸ್ಪರ್ಧೆಯ ವಿಜೇತರಿಗೆ ಜೂನ್ 5ರಂದು ಬಹುಮಾನ ವಿತರಿಸಲಾಗುವುದು ಎಂದು ಮಡಿಲು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶ್ರೀನಿವಾಸ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-39-1943724860

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.