ಮೈಸೂರು: ‘ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾವು ವಿಶ್ವ ಪರಿಸರ ಮಾಸಾಚರಣೆಯನ್ನು ನಗರದಲ್ಲಿ ಜೂನ್ 5ರಿಂದ 30ರವರೆಗೆ ಆಯೋಜಿಸಿದೆ’ ಎಂದು ಸಂಸ್ಥೆಯ ಕಾರ್ಯಕ್ರಮ ಸಂಚಾಲಕ ಸಿ.ಡಿ.ಕೃಷ್ಣ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಜೂನ್ 5ರಂದು ಮಾಸಾಚರಣೆ ಉದ್ಘಾಟನೆಯಾಗಲಿದ್ದು, 7ರಂದು 5ಕೆ ‘ಗ್ರೀನ್ ಮೈಸೂರು ವಾಕ್ಥಾನ್’, 12 ಮತ್ತು 25ರಂದು ಗಿಡ ನೆಡುವಿಕೆ, 14ರಂದು ಸೈಕ್ಲಾಥಾನ್ ಮತ್ತು ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, 17ರಂದು ಮಹಿಳೆಯರಿಗೆ ಪರಿಸರ ಸ್ನೇಹಿ ಗೃಹೋಪಯೋಗಿ ಉತ್ಪನ್ನಗಳ ತಯಾರಿಕೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ’ ಎಂದರು.

‘20, 21ರಂದು ಪರಿಸರ ಸ್ನೇಹಿ ವಸ್ತುಪ್ರದರ್ಶನ, ಯೋಗ ದಿನಾಚರಣೆ, 28ರಂದು ಹಸಿರು ನಿಧಿ ಹುಡುಕಾಟ, 29ರಂದು ಚಾರಣ, 30ರಂದು ಸಮಾರೋಪ ಆಯೋಜಿಸಲಾಗಿದ್ದು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಹೇಳಿದರು.

ಜಿಎಸ್ಎಸ್ ಸಂಸ್ಥೆಯ ಶ್ರೀಹರಿ, ಪತ್ರಕರ್ತ ಮಹದೇವ್ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-39-1263195368

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.