ಮೈಸೂರು: ‘ಪ್ರಕೃತಿ ಸಂರಕ್ಷಣೆಯ ಜವಾಬ್ದಾರಿಯನ್ನು ಎಲ್ಲರೂ ನಿರ್ವಹಿಸಬೇಕು’ ಎಂದು ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.

ಟೀಂ ಮೈಸೂರು ವತಿಯಿಂದ ‘ಹಸಿರು ಮೈಸೂರು ಅಭಿಯಾನ’ಕ್ಕಾಗಿ ನೂತನವಾಗಿ ಸೇರ್ಪಡೆಯಾದ ‘ಟೀಂ ಮೈಸೂರು ನೀರಿನ ಟ್ಯಾಂಕರ್’ ಉದ್ಘಾಟನೆಯನ್ನು ಭಾನುವಾರ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನೆರವೇರಿಸಿ ಅವರು ಮಾತನಾಡಿದರು.

‘ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಟೀಂ ಮೈಸೂರು ಒಳ್ಳೆಯ ಕೆಲಸ ಮಾಡುತ್ತಿದೆ. ನಗರದಲ್ಲಿ ಗಿಡಗಳನ್ನು ನೆಡುವುದು ಮಾತ್ರವಲ್ಲದೇ ಅವುಗಳಿಗೆ ನೀರನ್ನು ಹಾಕಿ ಬೆಳೆಸುವ ಮೂಲಕ ಹಸಿರು ಅಭಿಯಾನವನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯವಾದುದು. ಈ ತಂಡದಿಂದ ಇನ್ನೂ ಉತ್ತಮ ಕಾರ್ಯಗಳು ನಡೆಯಲಿ’ ಎಂದು ಆಶಿಸಿದರು.

ಮುಖ್ಯ ಅತಿಥಿಯಾಗಿದ್ದ ಶಾಸಕ ಟಿ.ಎಸ್. ಶೀವತ್ಸ, ‘ಟೀಂ ಮೈಸೂರು ಹನ್ನೆರಡು ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಸಮಾಜಮುಖಿ ಚಟುವಟಿಕೆಗೆ ಆದ್ಯತೆ ನೀಡುತ್ತಿರುವುದು ಹೆಮ್ಮೆಯ ವಿಷಯ’ ಎಂದು ಹೇಳಿದರು.

ಜೆ.ಎಸ್.ಎಸ್. ಮಹಾವಿದ್ಯಾಪೀಠದ ಆಡಳಿತಾಧಿಕಾರಿ ನಿರಂಜನ್ ಮೂರ್ತಿ ಹಾಗೂ ತಂಡದ ಸದಸ್ಯ ಕಿರಣ್ ಜೈರಾಮ್ ಗೌಡ ಮಾತನಾಡಿದರು.

ಟೀಂ ಮೈಸೂರುಗೆ ಆರ್ಥಿಕ ಸಹಾಯ ನೀಡಿದವರನ್ನು ಸನ್ಮಾನಿಸಲಾಯಿತು.

ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಕ್ಲೂಬರ್ ಸಂಸ್ಥೆಯ ಶ್ರೀಪಾದ್ ಆಚಾರ್ಯ, ಲೆಟ್ಸ್ ಡು ಇಟ್ ಸಂಸ್ಥೆಯ ಮುಖ್ಯಸ್ಥ ಶಿವಶಂಕರ್, ತಂಡದ ಹಿರಿಯಣ್ಣ, ಸಂಚಾಲಕ ಗೋಕುಲ್ ಗೋವರ್ಧನ್, ಅನಿಲ್ ಜೈನ್, ಹರೀಶ್ ಬಾಬು, ರಾಮಪ್ರಸಾದ್, ಶಿವಪ್ರಸಾದ್, ಮನೋಹರ್, ಅಭಿನಂದನ್, ನಿಶ್ಚಿತ್, ಆನಂದ್, ಯತೀಶ್, ರಾಘವೇಂದ್ರ, ಬಾಲಕೃಷ್ಣ, ಗಣೇಶ್, ಸುಮಂತ್, ಹರೀಶ್ ಇಟ್ಟಿಗೆಗೂಡು, ತಿಲಕ್, ಶೇಖರ್, ಚಂದನ್, ಹರೀಶ್ ಶೆಟ್ಟಿ, ಹರೀಶ್ ಗೋಕುಲಂ, ಬಸವರಾಜ್ ಬೆಳವಾಡಿ, ಬಸವರಾಜ್ ಬಳ್ಳಾರಿ, ಮಂಜು ಹುಣಸೂರು, ನಾರಾಯಣ್, ತ್ರಿಮೂರ್ತಿ, ಮಹಿಳಾ ಸದಸ್ಯರಾದ ಉಮಾ, ಜ್ಯೋತಿ, ಉಷಾ, ಶಾಂತ, ಸಹನಾ, ಸುಕೃತಾ, ಕಾವೇರಿ, ಸುಗುಣ ಶೇಖರ್, ನಂದಿನಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-39-121974008

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.