ಮೈಸೂರು: ‘ರಾಜ್ಯದಲ್ಲಿ ವೇಗವಾಗಿ ನಡೆಯುತ್ತಿರುವ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯ ಕಾರಣದಿಂದಾಗಿ ನ್ಯಾಯಾಲಯದಲ್ಲಿ ಪರಿಸರ ಸಂಬಂಧಿತ ಮೊಕದ್ದಮೆಗಳು ಹೆಚ್ಚಲಿವೆ. ಹೀಗಾಗಿ ಪರಿಸರ ಕಾನೂನು ಭವಿಷ್ಯದಲ್ಲಿ ಪ್ರಾಮುಖ್ಯತೆ ಪಡೆಯಲಿದೆ’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ತಿಳಿಸಿದರು.

ಇಲ್ಲಿನ ವಿದ್ಯಾವಿಕಾಸ ಶೈಕ್ಷಣಿಕ ಟ್ರಸ್ಟ್ ಹಾಗೂ ವಿದ್ಯಾವಿಕಾಸ ಕಾನೂನು ಶಿಕ್ಷಣ ಸಂಸ್ಥೆಯು ಶುಕ್ರವಾರ ಆಯೋಜಿಸಿದ್ದ ಪ್ರೊ. ಸಿ.ಕೆ.ಎನ್. ರಾಜಾ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಪರಿಸರ ಕಾನೂನು’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಮಾನವ ಹಕ್ಕು ಹಾಗೂ ಪರಿಸರ ಕಾನೂನು ಪರಸ್ಪರ ಸಂಬಂಧ ಹೊಂದಿವೆ. ಭಾರತೀಯ ಸಂವಿಧಾನದ 21ನೇ ವಿಧಿಯಡಿ ಮಾನವ ಹಕ್ಕುಗಳು ಹಾಗೂ ಪರಿಸರ ಹಕ್ಕುಗಳು ರಕ್ಷಿಸಲ್ಪಟ್ಟಿವೆ. ಎಂ.ಸಿ. ಮೆಹ್ತಾ ವಿರುದ್ಧ ಭಾರತ ಒಕ್ಕೂಟದ ಪ್ರಕರಣದಲ್ಲಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ’ ಎಂದರು.

ಸಹಾಯ: ‘ಕಾನೂನು ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶ ತೆರೆದುಕೊಳ್ಳುತ್ತಿದೆ. ಪರಿಸರ ಕಾನೂನು ಸೂಕ್ಷ್ಮ ವಿಚಾರವಾಗಿದ್ದು, ಸಮಾಜಕ್ಕೆ ಪ್ರಸ್ತುತ ಸಮಯದಲ್ಲಿ ಅತ್ಯಗತ್ಯ ವಿಚಾರವಾಗಿದೆ. ಇದರ ಅಧ್ಯಯನದಿಂದ ಸಮಾಜಮುಖಿ ಕೆಲಸಗಳಿಗೂ ಸಹಾಯಕವಾಗಲಿದೆ’ ಎಂದು ಹೇಳಿದರು.

‘ದ್ವಿಪಕ್ಷೀಯತೆಗೆ ಹಿಂದಿರುಗಿ’ ಕುರಿತು ಮಾತನಾಡಿದ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಮಾಜಿ ಕುಲಪತಿ ಪ್ರೊ.ಎ.ಜಯಗೋವಿಂದ, ‘ಜಾಗತಿಕ ರಾಜತಾಂತ್ರಿಕತೆಯಲ್ಲಿ ಮಹತ್ವದ ಬದಲಾವಣೆಗಳು ನಡೆಯುತ್ತಿವೆ. ಅನೇಕ ರಾಷ್ಟ್ರಗಳು ಬಹುಪಕ್ಷೀಯತೆಗಿಂತ ದ್ವಿಪಕ್ಷೀಯ ಒಪ್ಪಂದಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ವ್ಯಾಪಾರ, ರಕ್ಷಣಾ ಸಹಕಾರ, ತಂತ್ರಜ್ಞಾನ ವಿನಿಮಯ, ಹವಾಮಾನ ನೀತಿ ಹಾಗೂ ಪ್ರಾದೇಶಿಕ ಭದ್ರತೆ ವಿಚಾರಗಳಲ್ಲಿ ದ್ವಿಪಕ್ಷೀಯತೆ ಪರಿಣಾಮಕಾರಿ ಪಾತ್ರ ವಹಿಸುತ್ತಿದೆ’ ಎಂದು ತಿಳಿಸಿದರು.

ಪರಿಸರ ಕಾನೂನು ಪುಸ್ತಕದ ಸಂಪಾದಕರಾದ ಪ್ರೊ.ಈಶ್ವರ ಭಟ್ ಹಾಗೂ ಪ್ರೊ.ಎಂ.ಕೆ. ರಮೇಶ್, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮಾಜಿ ಕುಲಪತಿ ನಿರಂಜನ ವಾನಳ್ಳಿ, ವಿದ್ಯಾವಿಕಾಸ್ ಶೈಕ್ಷಣಿಕ ಟ್ರಸ್ಟ್ ಕಾರ್ಯದರ್ಶಿ ಕವೀಶ್ ಗೌಡ. ವಿ, ಕಾಲೇಜಿನ ಪ್ರಾಂಶುಪಾಲರಾದ ರಾಜೇಶ್ವರಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-39-252692852

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.