ಮೈಸೂರು: ಇಲ್ಲಿನ ಹುಣಸೂರು ರಸ್ತೆಯ ಭಾರತೀಯ ಭಾಷಾ ಸಂಸ್ಥಾನದಲ್ಲಿ (ಸಿಐಐಎಲ್) ಏ.12ರಿಂದ 14ರವರೆಗೆ ‘ಎಥ್ನೋಗ್ರಫಿ (ಕುಲಶಾಸ್ತ್ರೀಯ) ಮತ್ತು ಸಂಸ್ಕೃತಿ ದಾಖಲಾತಿ’ ಕುರಿತು ಕಾರ್ಯಾಗಾರ ಹಮ್ಮಿಕೊಳಲಾಗಿದೆ.

ಭೋಪಾಲ್ನ ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ ಹಾಗೂ ಆಂಥ್ರೋಪೋಸ್ ಇಂಡಿಯಾ ಫೌಂಡೇಷನ್ (ಎಐಎಫ್) ಸಹಯೋಗದಲ್ಲಿ ನಡೆಯಲಿದೆ.

ಭಾರತದ ಪಶ್ಚಿಮ ಮತ್ತು ದಕ್ಷಿಣ ಭಾಗಗಳ ಸಂಶೋಧಕರು ಹಾಗೂ ಪಂಡಿತರ ಸಂಶೋಧನಾ ಕೌಶಲಗಳನ್ನು ಬಲಪಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮದ ಒಂದು ಭಾಗವಾಗಿದೆ.

12ರಂದು ಬೆಳಿಗ್ಗೆ 9.30ಕ್ಕೆ ಚಾಮರಾಜನಗರ ವಿ.ವಿ. ಕುಲಪತಿ ಪ್ರೊ.ಗಂಗಾಧರ್ ಉದ್ಘಾಟಿಸುವರು. ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದ ನಿರ್ದೇಶಕ ಪ್ರೊ.ಅಮಿತಾಬ್ ಪಾಂಡೆ, ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರೊ.ಸುನೀತಾ ರೆಡ್ಡಿ, ಭಾರತೀಯ ಭಾಷಾ ಸಂಸ್ಥಾನದ ಉಪ ನಿರ್ದೇಶಕ ಪ್ರೊ.ಪಿ.ಆರ್. ಧರ್ಮೇಶ್ ಫರ್ನಾಂಡೀಸ್ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-39-1868074891

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.