ಮೈಸೂರು: ಮಾಲಿನ್ಯ ನಿಯಂತ್ರಣ, ಇಂಧನ ಉಳಿತಾಯ ಹಾಗೂ ಪರಿಸರ ಸ್ನೇಹಿಯಾದ ‘ಎಲೆಕ್ಟ್ರಿಕ್ ಬಸ್’ಗಳ ಸಂಚಾರಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದ ಭಾಗವಾಗಿ ನಗರದಲ್ಲಿ ಪ್ರತ್ಯೇಕ ಡಿಪೊ ನಿರ್ಮಾಣಕ್ಕೆ ಸರ್ಕಾರ ಯೋಜನೆ ಸಿದ್ಧಪಡಿಸಿದೆ.

ನಗರದಲ್ಲಿ ಕೆಎಸ್ಆರ್ಟಿಸಿಯ ನಗರ ಹಾಗೂ ಗ್ರಾಮಾಂತರ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಎರಡಕ್ಕೂ ಪ್ರತ್ಯೇಕ ನಿಲ್ದಾಣಗಳಿವೆ. ಈಗ, ‘ಇವಿ ಬಸ್’ಗಳಿಗೆಂದೇ ಪ್ರತ್ಯೇಕವಾಗಿ ಡಿಪೊ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಯೋಜನೆ ಸಿದ್ಧಪಡಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕಾಮಗಾರಿ ಆರಂಭಗೊಂಡಲ್ಲಿ ಅದನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವ ಉದ್ದೇಶವನ್ನು ಸಾರಿಗೆ ಇಲಾಖೆಯಿಂದ ಹೊಂದಲಾಗಿದೆ.

ಬನ್ನಿಮಂಟಪದ ಘಟಕ–1ರ ಸಮೀಪದಲ್ಲಿರುವ 4.50 ಎಕರೆ ಜಾಗವನ್ನು ಇದಕ್ಕಾಗಿ ಗುರುತಿಸಲಾಗಿದೆ. ₹ 7 ಕೋಟಿ ವೆಚ್ಚದಲ್ಲಿ ಡಿಪೊ ನಿರ್ಮಾಣಗೊಳ್ಳಲಿದೆ. ಇದು ಸಿದ್ಧಗೊಂಡಲ್ಲಿ, ನಗರದಲ್ಲಿ ಸಂಚಾರಕ್ಕಾಗಿ ಮೊದಲ ಹಂತದಲ್ಲಿ 100 ಇವಿ ಬಸ್ಗಳು ದೊರೆಯಲಿವೆ.

ಗ್ರಾಮಾಂತರ ಕೇಂದ್ರ ಬಸ್ ನಿಲ್ದಾಣವನ್ನು (ಸಬ್ ಅರ್ಬನ್) ಕೂಡ ಬನ್ನಿಮಂಟಪಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದ್ದು, ಹೊಸ ಬಸ್ ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕೆ ಸಮೀಪದಲ್ಲೇ ಹೊಸದಾಗಿ ‘ಇವಿ ಬಸ್ ಡಿಪೊ’ ಸಿದ್ಧಗೊಳ್ಳಲಿದೆ. ಇದರಿಂದಾಗಿ ಆ ಭಾಗದಿಂದಲೇ ಹೆಚ್ಚಿನ ಬಸ್ಗಳ ಕಾರ್ಯಾಚರಣೆ ಹಾಗೂ ಸಂಚಾರ ನಡೆಯಲಿದೆ.

100 ಇವಿ ಬಸ್: ಎಲೆಕ್ಟ್ರಿಕ್ ಬಸ್ ಡಿಪೊ ನಿರ್ಮಾಣಗೊಂಡ ನಂತರ ಹೊಸ ಇವಿ ಬಸ್ಗಳು ದೊರೆಯಲಿವೆ. ಈ ಬಸ್ಗಳು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ಕಾರ್ಯಾಚರಣೆ ನಡೆಸಲಿವೆ.

‘ಇವಿ ಬಸ್ ಡಿಪೊ ನಿರ್ಮಾಣಕ್ಕಾಗಿ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಡಿಪೊ ಸಿದ್ಧಗೊಂಡು, ಅಗತ್ಯ ಮೂಲಸೌಲಭ್ಯ ಕಲ್ಪಿಸಿದ ನಂತರ ನಗರ ವಿಭಾಗಕ್ಕೆ ನೂರು ಎಲೆಕ್ಟ್ರಿಕ್ ಬಸ್ಗಳನ್ನು ನೀಡಲಾ ಗುತ್ತದೆ. ಎಲ್ಲವೂ ಸಿದ್ಧಗೊಳ್ಳಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಆ ಬಸ್ಗಳ ಖರೀದಿ ಮೊದಲಾದ ಪ್ರಕ್ರಿಯೆ ಇಲಾಖೆಯ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ’ ಎಂದು ಕೆಎಸ್ಆರ್ಟಿಸಿ ಮೈಸೂರು ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ. ವೀರೇಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಏಕಕಾಲದಲ್ಲಿ 25 ಬಸ್ಗಳಿಗೆ ಚಾರ್ಜಿಂಗ್ ಪಾಯಿಂಟ್ಗಳು, ಮೇಲ್ವಿ ಚಾರಕರು ಮತ್ತು ಇತರ ಸಿಬ್ಬಂದಿಗೆ ವಿಶ್ರಾಂತಿ ಕೊಠಡಿಗಳು, ಭದ್ರತಾ ಸಿಬ್ಬಂದಿ ಕೊಠಡಿಗಳು, ಘಟಕದ ಉಸ್ತುವಾರಿ ಅಧಿಕಾರಿಗೆ ಪ್ರತ್ಯೇಕ ಕೊಠಡಿ ನಿರ್ಮಾಣಕ್ಕೆ ಯೋಜಿಸಲಾಗಿದೆ. ಕಾಂಪೌಂಡ್, ದುರಸ್ತಿ ಘಟಕ, ಪಾರ್ಕಿಂಗ್, ಚಾಲಕ, ನಿರ್ವಾಹಕರಿಗೆ ಶೌಚಾಲಯ ಸೇರಿ ಅಗತ್ಯ ಸೌಕರ್ಯ ಕಲ್ಪಿಸಲಾಗುತ್ತದೆ. ಚಾರ್ಜಿಂಗ್ ಸ್ಟೇಷನ್ಗಾಗಿ ಪ್ರತ್ಯೇಕವಾಗಿ ವಿದ್ಯುತ್ ಕೇಂದ್ರ ಸ್ಥಾಪನೆಗೆ ಉದ್ದೇಶಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಪ್ರಸ್ತುತ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಿಂದ ಮೈಸೂರು ಡಿಪೊದಿಂದ 7 ಶೆಡ್ಯೂಲ್ ಹಾಗೂ ಬೆಂಗ ಳೂರು ವಿಭಾಗದಿಂದ 7 ಶೆಡ್ಯೂಲ್ ಇವಿ ಬಸ್ಗಳ ಕಾರ್ಯಾಚರಣೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.