ಮೈಸೂರು: ಅದು ಎಚ್.ಡಿ. ಕೋಟೆ ತಾಲ್ಲೂಕಿನ ಕಂಚಮಳ್ಳಿ ಗ್ರಾಮ. ಅಲ್ಲಿನ ರೈತ ರಮೇಶಪ್ಪ ಅವರು, ಜಮೀನಿನ ಕಳೆ ತೆಗೆಯಲು ‘ವೀಡ್ ಕಟ್ಟರ್’ ಯಂತ್ರಕ್ಕೆ ಬಳಸಲೆಂದು ಪೆಟ್ರೋಲ್ಗಾಗಿ ಸುಮಾರು 10 ಕಿ.ಮೀ. ದೂರದ ಪೆಟ್ರೋಲ್ ಬಂಕ್ಗೆ ಹೋದರು. ಚಿಕ್ಕ ಕ್ಯಾನ್ನಲ್ಲಿ ಪೆಟ್ರೋಲ್ ಕೊಡಲು ಬಂಕ್ನವರು ನಿರಾಕರಿಸಿದರು. ಜಿಲ್ಲಾಡಳಿತದಿಂದ ಆದೇಶವಾಗಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರೂ ಕರೆ ಕೊಟ್ಟಿದ್ದಾರಲ್ಲಾ ಎಂದೂ ಬಂಕ್ನವರು ಹೇಳಿದರು! ಇದರಿಂದ ರೈತ ಬರಿಗೈಲಿ ವಾಪಸಾಗಬೇಕಾಯಿತು. ಕಳೆ ತೆಗೆಯುವ ಕೆಲಸವನ್ನು ಮಾಡಲಾಗಲಿಲ್ಲ.

– ಇದು ಈ ರೈತರೊಬ್ಬರ ಸ್ಥಿತಿಯಲ್ಲ. ಜಿಲ್ಲೆಯ ಬಹುತೇಕ ರೈತರಿಗೆ ಎದುರಾಗಿರುವ ಸಮಸ್ಯೆ.

ಸಮಸ್ಯೆ ಏನು?: ಪ್ಲಾಸ್ಟಿಕ್ ಬಾಟಲಿ ಅಥವಾ ಕ್ಯಾನ್ಗಳಿಗೆ ಪೆಟ್ರೋಲ್, ಡೀಸೆಲ್ ನೀಡಲು ಪೆಟ್ರೋಲ್ ಬಂಕ್ಗಳವರು ಹಿಂದೇಟು ಹಾಕುತ್ತಿರುವುದು ಕೃಷಿಕರಿಗೆ ತೊಂದರೆಯಾಗಿ ಪರಿಣಮಿಸಿದೆ. ಕೃಷಿ ಚಟುವಟಿಕೆಗಳಿಗೆ ತೊಡಕನ್ನೂ ಉಂಟು ಮಾಡಿದೆ. ಇದಕ್ಕೆ ಕಾರಣ ವಾಗಿರುವುದು ಅಧಿಕಾರಿಗಳ ಆದೇಶ ಎನ್ನುವುದು ಬಂಕ್ನವರ ಉತ್ತರ.

ಏನಾಗುತ್ತಿದೆ?: ‘ಅಧಿಕಾರಿಗಳು ಸುರಕ್ಷತೆಯ ಕಾರಣದಿಂದ ಆದೇಶ ಮಾಡಿರಬಹುದು. ಆದರೆ, ಕ್ಷೇತ್ರಮಟ್ಟದಲ್ಲಿ ಕೃಷಿಕರಿಗೆ ಆಗಿರುವ ತೊಂದರೆ ಪರಿಹರಿಸುವವರು ಯಾರು, ಹಲವು ಕೆಲಸಗಳಿಗೆ ಸಣ್ಣ ಪ್ರಮಾಣದಲ್ಲಿ ಬೇಕಾಗುವ ಪೆಟ್ರೋಲ್ ತರುವುದು ಹೇಗೆ, ಪರ್ಯಾಯವೇನು’ ಎನ್ನುವುದು ಕೃಷಿಕರ ಪ್ರಶ್ನೆ.

ಕೃಷಿ ಹಾಗೂ ತೋಟಗಾರಿಕೆ ಕೆಲಸಕ್ಕೆ ರೈತರು ವೀಡ್ಕಟ್ಟರ್, ಟ್ರ್ಯಾಕ್ಟರ್, ಟಿಲ್ಲರ್, ಸ್ಪ್ರೇಯರ್ ಮೊದಲಾದ ಯಂತ್ರ ಅಥವಾ ಸಾಧನಗಳನ್ನು ಬಳಸುತ್ತಾರೆ. ಇವುಗಳಲ್ಲಿ ಕೆಲಸಕ್ಕೆ ಪೆಟ್ರೋಲ್ ಅಥವಾ ಡೀಸೆಲ್ ಅತ್ಯಗತ್ಯ.

ವೀಡ್ಕಟ್ಟರ್, ಟ್ರ್ಯಾಕ್ಟರ್, ಟಿಲ್ಲರ್, ಸ್ಪ್ರೇಯರ್ಗೆ ಬಳಸುವ ಇಂಧನ ಖಾಲಿಯಾದಾಗ, ರೈತರು ಬಾಟಲಿ ಅಥವಾ ಕ್ಯಾನ್ ಒಯ್ದು ಪೆಟ್ರೋಲ್ ಬಂಕ್ಗಳಲ್ಲಿ ಖರೀದಿಸಿಕೊಂಡು ಬರುವುದು ಸಾಮಾನ್ಯವಾಗಿತ್ತು. ಇದರಿಂದ ಅವರ ಕೆಲಸಕ್ಕೆ ಅನುಕೂಲ ಆಗುತ್ತಿತ್ತು. ಈಗ, ಬಂಕ್ನವರು ನಿರಾಕರಿಸುತ್ತಿರುವುದರಿಂದ ಕೃಷಿಕರಿಗೆ ಸಂಕಷ್ಟ ಎದುರಾಗಿದೆ. ವೀಡ್ಕಟ್ಟರ್, ಟಿಲ್ಲರ್, ಸ್ಪ್ರೇಯರ್ಗಳನ್ನೇ ಬಂಕ್ಗೇ ತೆಗೆದುಕೊಂಡು ಹೋಗಿ, ಪೆಟ್ರೋಲ್ ಹಾಕಿಸುವ ‘ಸಾಹಸ’ವನ್ನು ಅವರು ಮಾಡಬೇಕಾಗಿದೆ! ‘ಇದು ಅವೈಜ್ಞಾನಿಕವಾದುದು ಹಾಗೂ ಕಾರ್ಯಸಾಧುವೂ ಅಲ್ಲ’ ಎನ್ನುತ್ತಾರೆ ಕೃಷಿಕರು.

ಹಿಂದೆ ಏನಾಗುತ್ತಿತ್ತು?: ‘ಹಿಂದೆಲ್ಲ ನಾವು, ಯಂತ್ರಗಳಿಂದ ಜಮೀನಿನ ಕೆಲಸ ಮಾಡುವಾಗ, ಐದೋ ಹತ್ತೋ ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಅನ್ನು ಕ್ಯಾನ್ಗಳಲ್ಲಿ ತುಂಬಿಸಿಕೊಂಡು ಇಟ್ಟುಕೊಂಡಿರುತ್ತಿದ್ದೆವು. ಯಂತ್ರ ಅಥವಾ ವಾಹನದಲ್ಲಿ ಖಾಲಿಯಾದರೆ ತುಂಬಿಸಿಕೊಂಡು ಕೆಲಸ ಮುಂದುವರಿಸುತ್ತಿದ್ದೆವು. ಈಗ, ವಾಹನ ಅಥವಾ ಯಂತ್ರವನ್ನೇ ಬಂಕ್ಗೆ ತೆಗೆದುಕೊಂಡು ಹೋಗಬೇಕಾಗಿದೆ. ಹೀಗಾದಾಗ, ಸಮಯವೂ ಹಾಳಾಗುತ್ತದೆ; ಕೆಲಸವೂ ತುಂಡಾಗುತ್ತದೆ’ ಎಂದು ಸಮಸ್ಯೆ ತೆರೆದಿಟ್ಟರು.

ಈ ವಿಷಯವಾಗಿ ಪೆಟ್ರೋಲ್ ಬಂಕ್ಗಳಲ್ಲಿ ರೈತರು–ಅಲ್ಲಿನ ಸಿಬ್ಬಂದಿಯ ನಡುವೆ ವಾಗ್ವಾದ ನಡೆಯುವುದೂ ಕಂಡುಬರುತ್ತಿದೆ. ಅಧಿಕಾರಿಗಳ ‘ನಡೆ’ಯ ವಿರುದ್ಧ ಕೃಷಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ನಮ್ಮ ಜಮೀನಿನಿಂದ ಸುಮಾರು ಹತ್ತು ಕಿ.ಮೀ. ದೂರದಲ್ಲಿ ಪೆಟ್ರೋಲ್ ಬಂಕ್ ಇದೆ. ವೀಡ್ಕಟ್ಟರ್ನಲ್ಲಿ ಪೆಟ್ರೋಲ್ ಖಾಲಿಯಾದರೆ, ಅದನ್ನು ದ್ವಿಚಕ್ರವಾಹನದಲ್ಲಿ ಹೊತ್ತುಕೊಂಡು ಹೋಗಿ ತುಂಬಿಸಿಕೊಂಡು ಬರಬೇಕು. ಇದಕ್ಕಾಗಿ ವಾಹನಕ್ಕೆ ಸರಾಸರಿ ಮುಕ್ಕಾಲು ಲೀಟರ್ ಪೆಟ್ರೋಲ್ ಬೇಕಾಗುತ್ತದೆ. ವೀಡ್ಕಟ್ಟರ್ ಹಿಡಿದು ಕೂರಲು ಯಾರಾದರೊಬ್ಬರನ್ನು ಜೊತೆಯಲ್ಲಿ ಕರೆದೊಯ್ಯಬೇಕು. ಇದರಿಂದ ಇಬ್ಬರ ಕೆಲಸವೂ ಹಾಳಾಗುತ್ತದೆ. ಇದರಿಂದ ಕೃಷಿಕರಿಗೆ ತೀವ್ರ ತೊಂದರೆ ಆಗುತ್ತಿದೆ. ಖರ್ಚೂ ಹೆಚ್ಚಾಗುತ್ತಿದೆ’ ಎಂದು ಕಂಚಮಳ್ಳಿಯ ರೈತರೊಬ್ಬರು ‘ಪ್ರಜಾವಾಣಿ’ಯೊಂದಿಗೆ ಸಮಸ್ಯೆ ಹೇಳಿಕೊಂಡರು.

ನಾವು ಅಧಿಕಾರಿಗಳು ನೀಡಿರುವ ಸೂಚನೆ ಪಾಲಿಸುತ್ತಿದ್ದೇವೆ. ಅಲ್ಯೂಮಿನಿಯಂ ಕಂಟೇನರ್ ತಂದರೆ ಪೆಟ್ರೋಲ್ ಹಾಕಿಕೊಡಲು ತೊಂದರೆ ಇಲ್ಲ.
ರಂಜಿತ್ ಹೆಗಡೆ, ಪೆಟ್ರೋಲ್ ಬಂಕ್ ಮಾಲೀಕರು ಮೈಸೂರು

ಆ ಭಾಗದ ರೈತರು ಯಾರು ಎಂಬುದು ಪೆಟ್ರೋಲ್ ಬಂಕ್ನವರಿಗೆ ಗೊತ್ತಿರುತ್ತದೆ. ಅಂಥವರಿಗೆ ತುರ್ತು ಕೆಲಸಗಳಿಗೆಂದು ಬಾಟಲಿಗಳಲ್ಲಿ ಪೆಟ್ರೋಲ್ ತುಂಬಿಕೊಡಬೇಕು ಅತ್ತಹಳ್ಳಿ.
ದೇವರಾಜ್, ರೈತ ಮುಖಂಡ

ದಂಡ ಕಟ್ಟಬೇಕಾಗುತ್ತದೆ ಎನ್ನುವ ಮಾಲೀಕರು....

‘ಪ್ಲಾಸ್ಟಿಕ್ ಬಾಟಲಿಗೆ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಕೊಡಬಾರದು ಎಂದು ಜಿಲ್ಲಾಡಳಿತದಿಂದ ಸೂಚನೆ ಇದೆ. ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ರೈತರಿಗೆ ತೊಂದರೆ ಆಗುತ್ತಿರುವ ಅರಿವೂ ನಮಗಿದೆ. ಆದರೆ, ನಾವು ದಂಡ ಕಟ್ಟಲು ತಯಾರಿಲ್ಲ’ ಎಂದು ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ಪ್ರತಿಕ್ರಿಯಿಸಿದರು.

‘ಅಲ್ಯೂಮಿನಿಯಂ ಅಥವಾ ಸ್ಟೀಲ್ ಕಂಟೇನರ್ ತಂದುಕೊಟ್ಟರೆ ಅದಕ್ಕೆ ಪೆಟ್ರೋಲ್, ಡೀಸೆಲ್ ಹಾಕಿಕೊಡುತ್ತೇವೆ. ಈ ಕಂಟೇನರ್ಗೆ ₹ 1,200ರಿಂದ ₹1,300 ಬೆಲೆ ಇದೆ. ಅದನ್ನು ಎಷ್ಟು ಮಂದಿ ಖರೀದಿಸುತ್ತಾರೆ?’ ಎಂದೂ ಅವರು ಕೇಳಿದರು.

ರೈತರಿಗೆ ನೆರವಾಗಲಿ...

‘ಟಿಲ್ಲರ್ ಅಥವಾ ಟ್ರ್ಯಾಕ್ಟರ್ನಲ್ಲಿ ಉಳುಮೆ ಮೊದಲಾದ ಕೃಷಿ ಕೆಲಸ ಮಾಡುವವರು ಜಮೀನುಗಳಿಂದ ಜಮೀನುಗಳಿಗೆ ಹೋಗುತ್ತಾರೆ. ಕೆಲಸದ ಮಧ್ಯೆ ಇಂಧನ ಖಾಲಿಯಾದರೆ ಅವರು ಮಾಲೀಕರಿಗೆ ಕರೆ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕ್ಯಾನ್ಗಳಲ್ಲಿ ಅಥವಾ ಬಾಟಲಿಗಳಲ್ಲಿ ಪೆಟ್ರೋಲ್ ಒಯ್ಯಬೇಕಾಗುತ್ತದೆ. ಕೊಡಲು ನಿರಾಕರಿಸಿದರೆ ರೈತರಿಗೆ ತೊಂದರೆ ಆಗುತ್ತದೆ. ಜಿಲ್ಲೆಯಲ್ಲಿ ಹಲವರು ಈ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ರೈತ ಮುಖಂಡ ಅತ್ತಹಳ್ಳಿ ದೇವರಾಜ್ ತಿಳಿಸಿದರು.

‘ನಿಯಮ ಮುಂದಿಟ್ಟುಕೊಂಡು ಕೃತಕ ಅಭಾವ ಸೃಷ್ಟಿಸಿ, ಹಣ ಮಾಡಿಕೊಳ್ಳಲು ಮುಂದಾದರೆ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.