ಮೈಸೂರು: ‘ರೈತರು ಕಾರ್ಪೋರೇಟ್ ಕಂಪನಿಗಳ ಗುಲಾಮರಾಗಬಾರದು. ಹೊಲದಲ್ಲಿ ಸಾವಯವ ಕೃಷಿ ಮಾಡಿ ಗೆಡ್ಡೆ ಗೆಣಸು, ಸೊಪ್ಪು, ತರಕಾರಿ ಬೆಳೆದು ತಿನ್ನಬೇಕು. ಹಣ ಸಂಪಾದನೆಗಾಗಿ ಆರೋಗ್ಯ ಹಾಳು ಮಾಡಿ, ವೈದ್ಯರಿಗೆ ಹಣ ಸುರಿಯಬೇಡಿ’ ಎಂದು ಸಿರಿಧಾನ್ಯ ಜಾಗೃತಿ ನೇತಾರ ಡಾ.ಖಾದರ್ ವಲ್ಲಿ ತಿಳಿಸಿದರು.

ನಗರದ ಎಂಜಿನಿಯರ್ಗಳ ಸಂಸ್ಥೆ ಸಭಾಂಗಣದಲ್ಲಿ ಮಂಗಳವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಆಶ್ರಯದಲ್ಲಿ ನಡೆದ ಪರಿಸರ ಆರೋಗ್ಯ ಚಿಂತನ–ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನಾವು ನಮ್ಮ ಆಹಾರದಲ್ಲಿ ಏನಿರಬೇಕು ಎಂಬುದನ್ನು ಮರೆತಿದ್ದೇವೆ. ಒಂದು ಬೆಳೆಗೆ ಮಾತ್ರ ಸೀಮಿತರಾಗಿದ್ದೇವೆ. ಇದು ನಿಜ ರೈತನ ಮಾದರಿ ಅಲ್ಲ. ಯಾವುದನ್ನು ಊಟ ಮಾಡಿದರೆ ನಮ್ಮ ಆರೋಗ್ಯ ಜೀವನಪರ್ಯಂತವೂ ಇರುತ್ತದೋ, ಆ ಊಟವನ್ನು ಬೆಳೆಯುವವನೇ ನಿಜವಾದ ರೈತ’ ಎಂದರು.

‘ರೈತನೇ ನಿಜವಾದ ವೈದ್ಯ. ದೇಶವನ್ನು ರೋಗಮುಕ್ತ ಮಾಡಲು ರೈತರಿಂದ ಸಾಧ್ಯ. ಅಕ್ಕಿ, ಗೋಧಿ, ಸಕ್ಕರೆ ಇವುಗಳನ್ನು ಮೂರು ತಿಂಗಳು ನಮ್ಮ ಆಹಾರದಿಂದ ದೂರ ಇಟ್ಟರೆ ಹಲವು ಆಸ್ಪತ್ರೆಗಳು ಬಾಗಿಲು ಮುಚ್ಚುತ್ತವೆ. ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡರೆ ಆರೋಗ್ಯ ಉತ್ತಮವಾಗಿರುತ್ತದೆ’ ಎಂದು ಹೇಳಿದರು.

‘ರೈತರು ಬದಲಾದರೆ ಮುಂದಿನ ಐದು ವರ್ಷಕ್ಕೆ ಎಲ್ಲಾ ರೋಗವನ್ನು ದೂರ ಮಾಡಬಹುದು. 25ಸಾವಿರ ರೈತರಿಗೆ ಬಿತ್ತನೆ ಬೀಜ ನೀಡಿ ಸಿರಿಧಾನ್ಯ ಬೆಳೆಯಲು ತರಬೇತಿ ನೀಡಲಾಗಿದೆ’ ಎಂದರು.

ಸೊಪ್ಪಲ್ಲಿರುವ ನಾರು ಮನುಷ್ಶನ ದೇಹವನ್ನು ಶುದ್ಧ ಮಾಡುವ ಅದ್ಭುತ ಪದಾರ್ಥ. ಮಾತ್ರೆಗಳಿಂದ ಮಾಡಿದ ಬೇರೆ ಪದಾರ್ಥಗಳು ದೇಹದ ಇತರ ಭಾಗಗಳನ್ನು ಹಾನಿಗೊಳಿಸುತ್ತವೆ ಎಂದರು.

‘ರಕ್ತ ಸಮತೋಲನಕ್ಕೆ 5 ಗ್ರಾಂ. ಸಕ್ಕರೆ ಅಂಶ ಸಾಕಾಗುತ್ತದೆ. ಅಕ್ಕಿ, ಗೋಧಿ ತಿಂದು ರಕ್ತ ಮಂದ ಆಗಿದೆ. ಇಂದು ಒಬ್ಬ ಮನುಷ್ಯ 170 ಕೆ.ಜಿಯವರೆಗೂ ತೂಗುತ್ತಾನೆ. ಬುಡಕಟ್ಟು ಪ್ರದೇಶದಲ್ಲೂ ಈಗ 80 ಕೆ.ಜಿ ತೂಗುವ ಜನರಿದ್ದಾರೆ. ಇದು ಮನುಷ್ಯನ ಊಟದ ಅಸ್ತವ್ಯಸ್ಥತೆಯನ್ನು ತೋರಿಸುತ್ತದೆ’ ಎಂದು ಬೇಸರಿಸಿದರು.

‘ಈ ಹಿಂದೆ ದೇವಸ್ಥಾನದ ಎದುರು ಹೂಮಾಲೆಗಳು ಇರುತ್ತಿದ್ದವು. ಇಂದು ಗುಟ್ಕಾ ಮಾಲೆಗಳು ನೇತಾಡುತ್ತಿವೆ. ಸರ್ಕಾರಗಳೂ ಮಾತನಾಡದಷ್ಟು ಕಾರ್ಪೋರೇಟೀಕರಣ ಮಾಡಲಾಗಿದೆ’ ಎಂದರು.

ಸತ್ಯಸಾಯಿ ಸೇವಾ ಟ್ರಸ್ಟ್ ಆಸ್ಪತ್ರೆಯ ಶಾಲಿನಿ ಶ್ರೀನಿವಾಸ್ ಮಾತನಾಡಿ, ‘ಇಂದು ನಾವು ಪ್ರಕೃತಿಗೆ ವಿರುದ್ಧವಾಗಿ ಜೀವಿಸುತ್ತಿದ್ದೇವೆ. ಹೀಗಾಗಿ ನಮಗೆ ರೋಗಗಳು ಹೆಚ್ಚು ಕಾಣಿಸಿಕೊಳ್ಳುತ್ತಿದೆ’ ಎಂದರು.

ನಯನಕುಮಾರ್ಸ್ ಆಸ್ಪತ್ರೆಯ ಗಜಾನನ ಹೆಗಡೆ ಮಾತನಾಡಿದರು. ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಪಿ. ಸೋಮಶೇಖರ್, ಬರಡನಪುರ ನಾಗರಾಜ್, ಅತ್ತಹಳ್ಳಿ ದೇವರಾಜ್, ವರಕೋಡು ನಾಗೇಶ್, ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-39-2102542390

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.