ಮೈಸೂರು: ‘ಜಿಲ್ಲೆಯ ಮೈಸೂರು ತಾಲ್ಲೂಕು, ಎಚ್.ಡಿ.ಕೋಟೆ, ಸರಗೂರು, ಪಿರಿಯಾಪಟ್ಟಣ, ನಂಜನಗೂಡು, ತಿ.ನರಸೀಪುರ ಹಾಗೂ ಕೆ.ಆರ್.ನಗರ ತಾಲ್ಲೂಕುಗಳಲ್ಲಿ ಸರ್ಕಾರದ ಗೋಮಾಳದಲ್ಲಿ 50–60 ವರ್ಷಗಳಿಂದ ಕೃಷಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಿದ್ದರೂ ಹಕ್ಕುಪತ್ರ ನೀಡಲು ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ವಹಿಸಿರುವುದು ಸರಿಯಲ್ಲ’ ಎಂದು ಕನಾಟಕ ಪ್ರಜಾ ಪಾರ್ಟಿ- ರೈತ ಪರ್ವದ ಅಧ್ಯಕ್ಷ ಬಿ.ಶಿವಣ್ಣ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರು ಜಮೀನಿನಲ್ಲಿದ್ದ ಗಿಡಗಂಟಿ ತೆರವುಗೊಳಿಸಿ, ಕೃಷಿಗೆ ಸಾಧ್ಯವಾಗುವಂತೆ ಜಮೀನು ಹದ ಮಾಡಿಕೊಳ್ಳಲು ಅಪಾರ ಕಷ್ಟ ಪಟ್ಟಿದ್ದಾರೆ. ಇವರಿಗೆ ಸಾಗುವಳಿ ಚೀಟಿ ನೀಡಿದ್ದರೂ ಹಕ್ಕುಪತ್ರ ನೀಡಿಲ್ಲ. ದುರಸ್ತಿಗಾಗಿ ರೈತರ ಕುಟುಂಬದವರು ತಾಲ್ಲೂಕು ಕಚೇರಿಗಳಿಗೆ ಅಲೆದೂ ಸುಸ್ತಾಗುವಂತಾಗಿದೆ. ಕೇವಲ ಶುಲ್ಕ ಪಡೆದು ಕಾಲಹರಣ ಮಾಡುವುದಷ್ಟೇ ನಡೆದಿದೆ’ ಎಂದು ದೂರಿದರು.

‘ಜಮೀನು ದುರಸ್ತಿಯಾಗದ ಕಾರಣ ಕುಟುಂಬದ ಸದಸ್ಯರಿಗೆ ದಾನಪತ್ರ, ಹಕ್ಕು ಬಿಡುಗಡೆ ಪತ್ರ, ವ್ಯವಸ್ಥಾ ಪತ್ರ, ವಿಭಾಗ ಪತ್ರ ನೀಡಲಾಗದೇ ಪರಿತಪಿಸುವಂತಾಗಿದೆ. ಬೇರೊಬ್ಬರಿಗೆ ಮಾರಾಟ ಮಾಡುವುದೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಂಬಂಧಿಸಿದವರು ಈ ಕೂಡಲೇ ಈ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಇಲ್ಲದಿದ್ದರೆ ಈ ರೈತರೊಡಗೂಡಿ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಪದಾಧಿಕಾರಿಗಳಾದ ಚೆಲುವರಾಜು, ಸಿಂಧುವಳ್ಳಿ ಶಿವಕುಮಾರ್, ಸಂದೀಪ್, ಮಂಜುನಾಥ್, ಕುಮಾರಸ್ವಾಮಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-51-606374413

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.