ಮೈಸೂರು: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗಾಗಿ ಚಟುವಟಿಕೆಗಳು ಗರಿಗೆದರಿದ್ದು, ಕೃಷಿ ಕಾರ್ಯ ಭರದಿಂದ ಸಾಗಿದೆ. ಆದರೆ, ಸಕಾಲಕ್ಕೆ ರಸಗೊಬ್ಬರ ಸಿಗದೇ ರೈತರು ಪರದಾಡುವಂತೆ ಆಗಿದೆ.

ರಸಗೊಬ್ಬರಗಳ ದರದಲ್ಲಿ ಭಾರಿ ಏರಿಕೆ ಹಾಗೂ ಪೂರೈಕೆಯಲ್ಲಿನ ವ್ಯತ್ಯಯದಿಂದ ಚಿಲ್ಲರೆ ಮಾರಾಟಗಾರರು ಹಿಂದೇಟು ಹಾಕಿದ್ದು, ಇದು ಒಟ್ಟಾರೆ ಮಾರಾಟದ ಮೇಲೆ ಪರಿಣಾಮ ಬೀರಿದೆ. ರೈತರಿಗೆ ತಮ್ಮೂರಿನ ಮಾರಾಟ ಮಳಿಗೆಗಳಲ್ಲಿ ಸಕಾಲಕ್ಕೆ ಗೊಬ್ಬರ ಸಿಗದಂತಾಗಿದೆ.

ಪಶ್ಚಿಮ ಏಷ್ಯಾ ಸಂಘರ್ಷದ ಕಾರಣದಿಂದ ಬಹುತೇಕ ರಸಗೊಬ್ಬರಗಳು ದುಬಾರಿ ಆಗುತ್ತಿವೆ. ಹೀಗಾಗಿ ಚಿಲ್ಲರೆ ಮಾರಾಟಗಾರರು ದುಬಾರಿ ಬಂಡವಾಳ ಹೂಡಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಹಳ್ಳಿಗಳಲ್ಲಿ ರಸಗೊಬ್ಬರ ಸಿಗದಾಗಿದೆ.

ಜಿಲ್ಲೆಯಲ್ಲಿ ಒಟ್ಟು 1064 ನೋಂದಾಯಿತ ರಸಗೊಬ್ಬರ ಮಾರಾಟಗಾರರು ಇದ್ದಾರೆ. ಇವರಲ್ಲಿ 142 ಮಂದಿ ಸಗಟು ಮಾರಾಟಗಾರರಿದ್ದರೆ, ಉಳಿದ 922 ಚಿಲ್ಲರೆ ಮಾರಾಟರಾಗಿದ್ದಾರೆ. ಸಗಟು ವರ್ತಕರಲ್ಲಿ ಮಾತ್ರ ಎಲ್ಲ ಬಗೆಯ ರಸಗೊಬ್ಬರ ಸಿಗುತ್ತಿದೆ.

‘ಪೊಟ್ಯಾಷ್, ಡಿಎಪಿ, ವಿವಿಧ ಕಾಂಪ್ಲೆಕ್ಸ್ ಗೊಬ್ಬರಗಳ ದರವು ಪ್ರತಿ ಚೀಲಕ್ಕೆ ₹400–500ರಷ್ಟು ಏರಿಕೆ ಆಗಿದೆ. ಒಂದು ಲೋಡ್ ಗೊಬ್ಬರ ತರಿಸಲು ಕನಿಷ್ಠ ₹6 ಲಕ್ಷದಿಂದ ₹7 ಲಕ್ಷ ಬೇಕಾಗುತ್ತಿದೆ. ದರದ ಅನಿಶ್ಚಿತತೆ ಇದೆ. ರೈತರು ಇಷ್ಟು ದುಬಾರಿ ಹಣ ನೀಡಿ ಖರೀದಿ ಮಾಡಲು ಯೋಚಿಸುತ್ತಿದ್ದಾರೆ. ಸರ್ಕಾರ ಸಹ ಗೊಬ್ಬರ ಮಾರಾಟದ ಮೇಲಿನ ನಿರ್ಬಂಧ ಹೆಚ್ಚಿಸಿದೆ. ಹೀಗಾಗಿ ನಾವು ಕಾದುನೋಡುವ ತಂತ್ರಕ್ಕೆ ಮೊರೆ ಹೋಗಿದ್ದೇವೆ. ಪರಿಸ್ಥಿತಿ ನೋಡಿಕೊಂಡು ಮುಂದುವರಿಯುತ್ತೇವೆ’ ಎನ್ನುತ್ತಾರೆ ತಾಲ್ಲೂಕಿನ ಗುಂಗ್ರಾಲ್ಛತ್ರ ಗ್ರಾಮದ ರಸಗೊಬ್ಬರ ವ್ಯಾಪಾರಿ ಹರೀಶ್.

ಯಾವುದಕ್ಕೆಲ್ಲ ಬೇಕು?: ಪ್ರಸ್ತುತ ಜಿಲ್ಲೆಯ 31ಸಾವಿರ ಹೆಕ್ಟೇರ್ನಷ್ಟು ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಆಗಿದೆ. ಇದಲ್ಲದೆ 51ಸಾವಿರ ಹೆಕ್ಟೇರ್ನಲ್ಲಿ ತಂಬಾಕು ಕೃಷಿ ನಡೆದಿದೆ. ಇವುಗಳಿಗೆ ಸದ್ಯ ರಸಗೊಬ್ಬರದ ಅಗತ್ಯವಿದೆ. ದ್ವಿದಳ ಧಾನ್ಯಗಳ ಬಿತ್ತನೆಯೂ ಚುರುಕಾಗಿದ್ದು, ಅವುಗಳಿಗೂ ಗೊಬ್ಬರಕ್ಕಾಗಿ ರೈತರು ಅಂಗಡಿಗಳಿಗೆ ಅಲೆಯುತ್ತಿದ್ದಾರೆ. ಇದಲ್ಲದೆ ಶುಂಠಿ, ಬಾಳೆ, ಪಪ್ಪಾಯ ಮೊದಲಾದ ತೋಟಗಾರಿಕೆ ಬೆಳೆಗಾರರೂ ಅಂಗಡಿಗಳತ್ತ ಮುಖ ಮಾಡಿದ್ದಾರೆ.

ತಂಬಾಕು ಬೆಳೆಗಾರರಿಗೆ ಪ್ರತಿ ವರ್ಷ ಕೇಂದ್ರ ತಂಬಾಕು ಮಂಡಳಿಯೇ ರಸಗೊಬ್ಬರಗಳನ್ನು ವಿತರಿಸುತ್ತದೆ. ಆದರೆ, ಈ ವರ್ಷ ವಿತರಣೆ ತಡವಾದ ಕಾರಣಕ್ಕೆ ರೈತರು ಖಾಸಗಿ ಮಾರಾಟಗಾರರಿಂದ ಖರೀದಿ ನಡೆಸಿದ್ದರು. ಕೃಷಿ ಇಲಾಖೆ ಮೂಲಕ ವರ್ತಕರಿಗೆ 300–400 ಟನ್ಗೂ ಅಧಿಕ ಡಿಎಪಿ ಸರಬರಾಜು ಆಗಿತ್ತು. ಈಗ ಮಂಡಳಿಯೇ ವಿತರಣೆ ಆರಂಭಿಸಿದೆ.

‘ದಾಸ್ತಾನಿದೆ, ಸದ್ಯಕ್ಕೆ ಕೊರತೆ ಇಲ್ಲ’

‘ಜಿಲ್ಲೆಯಲ್ಲಿ ಪ್ರಸ್ತುತ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ರಸಗೊಬ್ಬರ ದಾಸ್ತಾನು ಇದೆ. ಹೀಗಾಗಿ ಪೂರೈಕೆಯಲ್ಲಿ ತೊಂದರೆ ಆಗಿಲ್ಲ’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ರವಿ.

‘ಜೂನ್ಗೆ 21,949 ಟನ್ ರಸಗೊಬ್ಬರ ಬೇಡಿಕೆ ಇದ್ದು, ನಮ್ಮಲ್ಲಿ 50ಸಾವಿರ ಟನ್ಗೂ ಅಧಿಕ ದಾಸ್ತಾನಿದೆ. ಯೂರಿಯಾ, ಡಿಎಪಿ ಕೂಡ ಪೂರೈಕೆಯಾಗುತ್ತಿದೆ. ಎಲ್ಲಿಯೂ ಕೊರತೆ ಆಗದಂತೆ ನಿಗಾ ವಹಿಸಿದ್ದೇವೆ’ ಎನ್ನುತ್ತಾರೆ ಅವರು.

‘ಮಾರಾಟಗಾರರು ರೈತರ ಎಫ್ಐಡಿ ಬಳಸಿ ವಿಸ್ತೀರ್ಣಕ್ಕೆ ಅನುಗುಣವಾಗಿ ಯೂರಿಯಾ ಮೊದಲಾದ ಗೊಬ್ಬರ ವಿತರಣೆಗೆ ಸೂಚಿಸಿದ್ದೇವೆ. ಇದಲ್ಲದೇ, ಬೆಳೆಗೆ ಅನುಗುಣವಾಗಿ ಶಿಫಾರಸು ಮಾಡಿದ ಕಾಂಪ್ಲೆಕ್ಸ್ ಗೊಬ್ಬರಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ವಿತರಿಸುವಂತೆ ನಿರ್ದೇಶಿಸಲಾಗಿದೆ’ ಎಂದು ತಿಳಿಸಿದರು.

ಕಳೆದ ಕೆಲವು ವಾರದಿಂದಲೂ ಗುಂಗ್ರಾಲ್ ಛತ್ರ ಸುತ್ತಲಿನ ಅಂಗಡಿಗಳಲ್ಲಿ ರಸಗೊಬ್ಬರ ಸಿಗುತ್ತಿಲ್ಲ. ದೂರದ ಬಿಳಿಕೆರೆ, ಹುಣಸೂರುವರೆಗೂ ಗೊಬ್ಬರ ಖರೀದಿಗೆ ಹೋಗಬೇಕಿದೆ

–ಶಂಕರ್, ರೈತ, ದಡದಕಲ್ಲಹಳ್ಳಿ

ರಸಗೊಬ್ಬರಗಳ ಬೆಲೆ ಈಚೆಗೆ ವಿಪರೀತ ಏರುತ್ತಿದ್ದು, ಬಂಡವಾಳ ಹೂಡಿಕೆಯೇ ಸವಾಲಾಗಿದೆ. ಹೀಗಾಗಿ ಆದಷ್ಟು ಕಡಿಮೆ ಪ್ರಮಾಣದಲ್ಲಿ ತರಿಸಿಕೊಂಡು ಮಾರುತ್ತಿದ್ದೇವೆ

–ಹರೀಶ್, ರಸಗೊಬ್ಬರ ವ್ಯಾಪಾರಿ

ಜಿಲ್ಲೆಯಲ್ಲಿ ಪ್ರಸ್ತುತ ಬೇಡಿಕೆಗಿಂತ ದುಪ್ಪಟ್ಟು ಪ್ರಮಾಣದ ದಾಸ್ತಾನು ಇದೆ. ಯೂರಿಯಾ, ಡಿಎಪಿ ಸೇರಿದಂತೆ ಎಲ್ಲವೂ ಪೂರೈಕೆ ಆಗುತ್ತಿದ್ದು, ರೈತರು ಕಾಂಪ್ಲೆಕ್ಸ್ ಗೊಬ್ಬರಗಳನ್ನು ಹೆಚ್ಚು ಬಳಸುವಂತೆ ಸಲಹೆ ನೀಡಲಾಗಿದೆ

–ಕೆ.ಎಚ್. ರವಿ, ಜಂಟಿ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.