ಮೈಸೂರು: ‘ದೇಶದಲ್ಲಿ ಧರ್ಮ ಪ್ರಚಾರಕ್ಕೆ ರಕ್ಷಣೆಯಿದೆ. ಆದರೆ ಬಲವಂತದ ಮತಾಂತರಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಇದರೊಡನೆ ದೇಶದ ಎಲ್ಲರೂ ಸರ್ವ ಧರ್ಮಗಳಿಗೂ ಗೌರವ ಕೊಡುವ ಮೂಲಕ ಪರಸ್ಪರ ಶಾಂತಿ, ಸೌಹಾರ್ದತೆಯಿಂದ ಬದುಕಬೇಕಾದ ಅಗತ್ಯವಿದೆ’ ಎಂದು ಇಂಡಿಯಾ ಬೈಬಲ್ ಲಿಟರೇಚರ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ರೆ.ಫಾ. ಬೆಂಜಮಿನ್ ವಾಸ್ ಮನವಿ ಮಾಡಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬಲವಂತ, ಬೆದರಿಕೆ ಅಥವಾ ಭೌತಿಕ ಪ್ರಲೋಭನೆಯನ್ನು ಒಳಗೊಂಡ ಯಾವುದೇ ಮತಾಂತರ ಸರಿಯಲ್ಲ. ಅದು ಸದಾ ಸ್ವಯಿಚ್ಛಿಕವಾಗಿರಬೇಕು. ಬಲವಂತದ ಮತಾಂತರಕ್ಕೆ ಶಿಕ್ಷೆಯಿದೆ ಎಂಬ ಅರಿವು ಎಲ್ಲರಿಗೂ ಇದೆ. ಕ್ರೈಸ್ತರು ಎಂದಿಗೂ ಬಲವಂತದ ಮತಾಂತರ ಮಾಡಿಲ್ಲ. ಆ ರೀತಿ ಮಾಡಿದ್ದಿದ್ದರೆ ದೇಶದಲ್ಲಿ ಈ ಸಮುದಾಯದ ಜನಸಂಖ್ಯೆ ಇಷ್ಟು ಕಡಿಮೆ ಇರುತ್ತಿರಲಿಲ್ಲ. ನೆಮ್ಮದಿ ಬಯಸುವವರಿಗೆ ನೆರವು ನೀಡುವ ಕೆಲಸವನ್ನಷ್ಟೇ ಮಾಡುತ್ತಿದ್ದಾರೆ. ತಮ್ಮ ಮನೆಯಲ್ಲಿಯೂ ಹಿಂದೂ ದೇವರ ವಿಗ್ರಹಗಳಿವೆ, ತಮ್ಮ ಕುಟುಂಬದವರೂ ಅತಿ ಹೆಚ್ಚಿನ ಗೌರವ ನೀಡುತ್ತಿದ್ದಾರೆ. ಹೀಗಾಗಿ ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿಸುವತ್ತ ಎಲ್ಲರೂ ಶ್ರಮಿಸಬೇಕು’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-51-2050923662

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.