ಮೈಸೂರು: ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ನಗರದ ಅಶೋಕ ರಸ್ತೆಯ ಗೀತಾಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ ಐದು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.

ಹಾಸನ ಜಿಲ್ಲೆಯ ಎಸ್.ಎಂ. ಲಿಖಿತ್- ಮಮತಾ ಸ್ವಾತಿ, ಬೆಂಗಳೂರು ದಕ್ಷಿಣ ಜಿಲ್ಲೆಯ ಬಿ.ಟಿ. ವಿಜಯ್- ಎನ್. ಸೌಜನ್ಯಾ, ಮೈಸೂರಿನ ಎಸ್. ಕನಕಮೂರ್ತಿ- ಅಂಜಲಿ, ಜಿ. ರಾಜು- ಎಸ್. ಸಂಗೀತಾ, ಐಶ್ವರ್ಯ- ಕುಮಾರ್ ಸತಿ–ಪತಿಗಳಾಗಿ ಹೊಸ ಬದುಕು ಆರಂಭಿಸಿದರು.

ಪರಿಷತ್ತಿನಿಂದ ವಧುವಿಗೆ ಮಾಂಗಲ್ಯ, ಕಾಲುಂಗುರ ಮತ್ತು ಸೀರೆ, ವರನಿಗೆ ಶರ್ಟು, ಪಂಚೆ ಮತ್ತು ವಲ್ಲಿ ನೀಡಲಾಯಿತು. ಮೇಲುಕೋಟೆ ವಂಗೀಪುರ ನಂಬಿಮಠದ ಇಳೈ ಆಳ್ವಾರ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉದ್ಯಮಿ ಎಸ್. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ. ರಾಮು, ಡಾ.ರೇಖಾ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಹರೇ ಶ್ರೀನಿವಾಸ ಸಮಿತಿ ಅಧ್ಯಕ್ಷ ಗುಂಡು ವೆಂಕಟೇಶಕುಮಾರ್, ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕಸ್ತೂರಿ ಚಂದ್ರು, ಪದಾಧಿಕಾರಿಗಳಾದ ಟಿ. ಶಿವರಾಜು, ಅಮೀನಬೇಗಂ, ತೇಜಸ್ ಪೃಥ್ವಿರಾಜ್, ಎಚ್.ಟಿ. ಪಾರ್ವತಿ, ನಟರಾಜ್, ನಯನಾ ಹರಿಶ್ಚಂದ್ರ, ಮೌಲ್ಯ ಜೈಕುಮಾರ್, ಎಲ್. ರೂಪಾ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-39-1022330820

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.