ಮೈಸೂರು: ಇಲ್ಲಿನ ಊಟಿ ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದ ಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಗುರುವಾರ ‘ಚೈತ್ರ ಶುದ್ಧ ಹುಣ್ಣಿಮೆ’ ಅಂಗವಾಗಿ ಹನುಮ ಜಯಂತಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.

ಆಶ್ರಮದ ಕಿರಿಯ ಪೀಠಾಧಿಪತಿ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ವಿಶೇಷ ಪೂಜೆ ನೆರವೇರಿಸಿದರು.

ಹನುಮಂತನ ಮೂರ್ತಿಗೆ ‘ವಜ್ರಾಲಂಕಾರ’ ಮಾಡಿದ್ದು ಗಮನಸೆಳೆಯಿತು. ಜೊತೆಗೆ, ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

ಈ ವೇಳೆ ಮಾತನಾಡಿದ ಸ್ವಾಮೀಜಿ, ‘ಬಜರಂಗಿ ಎಂದರೆ ವಜ್ರಾಂಗಿ ಎಂದರ್ಥ. ಸ್ವಾಮಿಯು ಭಕ್ತರಿಗೆ ವಜ್ರದಂತಹ ದೈಹಿಕ ಸಾಮರ್ಥ್ಯವನ್ನು ಮತ್ತು ಹೂವಿನಂತಹ ಮೃದುವಾದ ಮನಸ್ಸನ್ನು ಕರುಣಿಸಲಿ’ ಎಂದು ಪ್ರಾರ್ಥಿಸಿದರು.

ವೀಳ್ಯದೆಲೆ ಅರ್ಚನೆಯ ವಿಶೇಷತೆಯನ್ನು ವಿವರಿಸಿದ ಅವರು, ‘ವೀಳ್ಯದೆಲೆಯು ನಮ್ಮ ಹೃದಯದ ಸಂಕೇತ. ನಮ್ಮ ಮನಸ್ಸು ಮತ್ತು ಹೃದಯವನ್ನು ಸ್ವಾಮಿಗೆ ಅರ್ಪಿಸುವುದೇ ಈ ಅರ್ಚನೆಯ ಮೂಲ ಉದ್ದೇಶ’ ಎಂದು ಹೇಳಿದರು.

‘ಸೀತಾಮಾತೆಯು ಅಶೋಕವನದಲ್ಲಿದ್ದಾಗ ಹನುಮಂತನಿಗೆ ವೀಳ್ಯದೆಲೆಯಿಂದ ಆಶೀರ್ವದಿಸಿದ ನೆನಪಿಗಾಗಿ ಈ ಪದ್ಧತಿ ಬೆಳೆದುಬಂದಿದೆ. ಇದು ಭಕ್ತರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ’ ಎಂದು ತಿಳಿಸಿದರು.

ಈ ದೇವಸ್ಥಾನದಲ್ಲಿ, ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ವರ್ಷದಲ್ಲಿ ಆರು ಬಾರಿ ಹನುಮ ಜಯಂತಿ ಆಚರಿಸಲಾಗುತ್ತದೆ. ನೂರಾರು ಮಂದಿ ಭಕ್ತರು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು. ಸೇವಾರ್ಥಿಗಳಿಗೆ 13 ಗಂಟುಗಳಿರುವ ವಿಶೇಷ ‘ಕಾರ್ಯಸಿದ್ದಿ ರಕ್ಷೆ’ಯನ್ನು ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.