ಮೈಸೂರು: ‘ಗೌತಮ ಬುದ್ಧರ ಕರುಣೆ, ಪ್ರೀತಿ, ಮೈತ್ರಿ ತತ್ವವೇ ನಮ್ಮ ದಾರಿಯಾಗಬೇಕು. ಬುದ್ಧ ಪ್ರಜ್ಞೆ ನಮ್ಮದಾಗಿಸಿಕೊಂಡರೇ ಜೀವನವೇ ಬದಲಾಗುತ್ತದೆ. ಜಗತ್ತಿನಲ್ಲಿ ಯುದ್ಧ, ದ್ವೇಷ ಅಳಿಯಲಿದೆ’ ಎಂದು ಬಿಕ್ಕು ಆನಂದ ಥೇರ ಅಭಿಪ್ರಾಯಪಟ್ಟರು.

ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರದಲ್ಲಿ 2570ನೇ ಬುದ್ಧ ಜಯಂತಿ ಪ್ರಯುಕ್ತ ‘ಮಹಾಬೋಧಿ ಸೊಸೈಟಿ’ ಸಹಯೋಗದಲ್ಲಿ ಬುಧವಾರ ನಡೆದ ‘ಅಂಬೇಡ್ಕರ್ ಕಲ್ಪಿಸಿದ ನಮ್ಮ ಬದುಕಿನಲ್ಲಿ ಬುದ್ಧರ ಪ್ರಸ್ತುತತೆ’ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

‘ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಬೆಳವಣಿಗೆಗೆ ಬುದ್ಧ ತತ್ವ ಅನುಸರಿಸಬೇಕು. ಕೇಡನ್ನು ಬಯಸದೇ ಸತ್ಯ ಮಾರ್ಗದಲ್ಲಿ ನಡೆಸುವ ಬುದ್ಧ ಪ್ರಜ್ಞೆಯು ನಮ್ಮದಾಗಬೇಕು. ಅಂಬೇಡ್ಕರ್ ಅವರೂ ಇದೇ ಮಾರ್ಗದಲ್ಲಿ ನಡೆದರು’ ಎಂದರು.

‘ವಿಶ್ವದಲ್ಲಿ ಬುದ್ಧ ತತ್ವ ಅನುಸರಿಸುವವರು ಕೋಟ್ಯಾಂತರ ಮಂದಿ ಇದ್ದಾರೆ. ಅವರಲ್ಲಿ ಇತರ ಧರ್ಮಗಳಿಗೂ ಸೇರಿದ್ದಾರೆ. ಬೌದ್ಧ ಧರ್ಮವು ಹಿಂಸೆ, ಆಸೆ– ದುರಾಸೆಯ ಆಮಿಷಗಳಿಂದ ಧರ್ಮ ಪ್ರಚಾರ ಮಾಡದು. ಬುದ್ಧರ ತತ್ವವನ್ನು ಅನುಸರಿಸಿದ ದೇಶಗಳ ಜನರು ಸಂತೋಷದ ಬದುಕನ್ನು ಕಂಡಿದ್ದಾರೆ ಎಂಬುದನ್ನು ಭೂತಾನ್, ಚೀನಾ ಸೇರಿದಂತೆ ಪೂರ್ವ ಏಷ್ಯಾ ದೇಶಗಳಲ್ಲಿ ಕಾಣಬಹುದು’ ಎಂದು ಹೇಳಿದರು.

‘ಕಳೆದ ವರ್ಷದ ಅಮೆರಿಕ ದೇಶದ ಶ್ವೇತ ಭವನದಲ್ಲಿ ಬುದ್ಧ ಪೂರ್ಣಿಮೆ ಆಚರಿಸಲಾಯಿತು. ಆ ದೇಶದಲ್ಲಿ 3 ಸಾವಿರಕ್ಕೂ ಹೆಚ್ಚು ಬೌದ್ಧ ವಿಹಾರ, ದಮ್ಮ ಕೇಂದ್ರಗಳಿವೆ ಎಂದರೆ ಅಚ್ಚರಿ ಆಗಬಹುದು. 50 ವರ್ಷಗಳಲ್ಲಿ ಸಂಸ್ಥೆಗಳು ವಿಸ್ತರಣೆ ಆಗುತ್ತಿವೆ. ಜನರು ದಮ್ಮ ಮಾರ್ಗವನ್ನು ಅನುಸರಿಸುತ್ತಿದ್ದಾರೆ’ ಎಂದರು.

‘ಚೀನಾದಲ್ಲಿ ಕಮ್ಯುನಿಸ್ಟ್ ಎಂದು ಜನರು ಹೇಳಿಕೊಂಡರೂ ಜೀವನದಲ್ಲಿ ಬುದ್ಧ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ತೋರಿಕೆಗಾಗಿ, ಸಂಖ್ಯೆಗಾಗಿ ಬೌದ್ಧ ಧರ್ಮ ಪ್ರಸರಣ ನಡೆಯುತ್ತಿಲ್ಲ. ತ್ರಿಪಿಟಕ, ಅಷ್ಟಾಂಗ ಮಾರ್ಗವನ್ನು ಎಲ್ಲರೂ ಪಾಲಿಸಬಹುದು. ಬುದ್ಧ ಪ್ರಜ್ಞೆ ಮನಸ್ಸು, ಹೃದಯದಲ್ಲಿ ನೆಲೆಗೊಂಡರೆ ಹೊರಗಿನ ಸಮಸ್ಯೆಗಳು, ಕೇಡುಗಳಿದ್ದರೂ ಮನಶಾಂತಿಯಿಂದ ಜೀವನ ನಡೆಸಬಹುದು’ ಎಂದು ಹೇಳಿದರು.

ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರ ಕುಮಾರ್, ಪ್ರೊ.ಜೆ.ಸೋಮಶೇಖರ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-39-291021605

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.